ಇಂದಿರಾ ಕ್ಯಾಂಟೀನ್ (Indira Canteen) ಊಟದ ದರದಲ್ಲಿ ವ್ಯತ್ಯಾಸ ಇಲ್ಲ ಎಂದು ಸಚಿವ ಹೆಚ್.ಕೆ.ಪಾಟೀಲ್ (HK Patil)ಹೇಳಿದ್ದಾರೆ.
ಒಟ್ಟು ಊಟದ ಬೆಲೆ 62 ರೂ. ಎಂಬುವುದು ಪ್ರತಿ ದಿನದ ವೆಚ್ಚ ಹೊರತು ಒಂದು ಊಟದ್ದಲ್ಲ. ಸಾರ್ವಜನಿಕರಿಂದ ಸಂಗ್ರಹಿಸುವ 25 ರೂ. ಉಪಹಾರ ಮತ್ತು ಎರಡು ಊಟದ ವೆಚ್ಚವಾಗಿರುತ್ತದೆ ಎಂದು ತಿಳಿಸಿದ್ದಾರೆ.
ತಿಂಡಿ 5 ರೂಪಾಯಿ, ಮಧ್ಯಾಹ್ನ ಹಾಗೂ ರಾತ್ರಿ ಊಟ 10 ರೂ. ಆಗಿರುತ್ತದೆ. ದಿನಕ್ಕೆ 25 ರೂ. ನಂತೆ ಒಟ್ಟು ವೆಚ್ಚ 62 ರೂಪಾಯಿ ಆಗುತ್ತದೆ. 25 ರೂಪಾಯಿ ಗ್ರಾಹಕರು ಕೊಡುತ್ತಾರೆ. ಉಳಿದ 37 ರೂ. ಸರ್ಕಾರ ಕೊಡುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಿಎಂ ಕಚೇರಿಯಿಂದಲೂ ಸ್ಪಷ್ಟನೆ ನೀಡಿದ್ದು, ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂದಿರಾ ಕ್ಯಾಂಟೀನ್ ಗೆ ಆಹಾರ ಸರಬರಾಜುದಾರರಿಗೆ ಸರ್ಕಾರ ನೀಡುವ ದರ 5 ರೂ. ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ. ಈಗ ಅದನ್ನು 62 ರೂ. ಗೆ ಹೆಚ್ಚಿಸಲಾಗಿದೆ. ಆಹಾರ ಮೆನು ಬದಲಾವಣೆಯೊಂದಿಗೆ ಈ ಹೆಚ್ಚಳ ಮಾಡಲಾಗಿದೆಯೇ ಹೊರತು ಗ್ರಾಹಕರಿಗೆ ಹಳೆದ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ