ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ: ಅರೂಸಾ ಪರ್ವೇಜ್ Saaksha Tv
ನವದೆಹಲಿ: ನಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು 12ನೇ ತರಗತಿ ಟಾಪರ್ ಅರೂಸಾ ಪರ್ವೇಜ್ ಅವರು ಹೇಳಿದ್ದಾರೆ.
ಅರೂಸಾ ಪರ್ವೇಜ್ ಅವರು ಈ ವರ್ಷ ಜಮ್ಮು ಕಾಶ್ಮೀರ ಬೋರ್ಡ್ ನ 12ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 499 ಅಂಕ ಪಡೆದು ಅಗ್ರಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಯದ ಹೊಳೆನೇ ಸಾಮಾಜಿಕ ಜಾಲತಾಣದಲ್ಲಿ ಹರಿದು ಬರುತ್ತಿತ್ತು.
ಈ ಸಮಯದಲ್ಲಿ ಅರೂಸಾ ಪರ್ವೇಜ್ ಅವರು ಹಿಜಾಬ್ ಧರಿಸದೇ ಇರದಿರುವ ಪೊಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಅಪರಿಚತ ವ್ಯಕ್ತಿ ಹರಿಬಿಟ್ಟಿದ್ದಾರೆ. ಇದಕ್ಕೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗುತ್ತಿವೆ.
ಕರ್ನಾಟಕದಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್‌ಗಾಗಿ ಹೋರಾಡುತ್ತಾರೆ ಮತ್ತು ನಮ್ಮ ಕಾಶ್ಮೀರದಲ್ಲಿ ನಮ್ಮ ಸಹೋದರಿಯರು ತಮ್ಮ ಮುಖವನ್ನು ಮುಚ್ಚದೆ ಅವರ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಇದನ್ನು ಖಂಡಿಸುತ್ತೇವೆ. ಅಲ್ಲದೇ ಹಿಜಾಬ್ ಧರಿಸಿದ ಕಾರಣ ಆಕೆಯ ಶಿರಚ್ಛೇದನ ಮಾಡಿ ಎಂದು ಕೆಲ ಜನರು ಕಮೆಂಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪರ್ವೇಜ್ ಅವರು ನಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ. ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದು ಅವರ ಧರ್ಮದಲ್ಲಿ ನಂಬಿಕೆಯನ್ನು ವ್ಯಾಖ್ಯಾನಿಸುವುದಿಲ್ಲ. ನೀವು ಹೇಳುವುದಕ್ಕಿಂತ ಹೆಚ್ಚಾಗಿ ನಾನು ಅಲ್ಲಾನನ್ನು ಪ್ರೀತಿಸುತ್ತೇನೆ. ನಾನು ಹೃದಯದಿಂದ ಮುಸ್ಲಿಂ, ಹಿಜಾಬ್‌ನಿಂದ ಅಲ್ಲ’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.