ಮಠದ ಆನೆ ಕದ್ದು ಸರ್ಕಸ್ ಗೆ ಮಾರಲು ಯತ್ನಿಸಿದ ಖದೀಮರು…

1 min read

ಮಠದ ಆನೆ ಕದ್ದು ಸರ್ಕಸ್ ಗೆ ಮಾರಲು ಯತ್ನಿಸಿದ ಖದೀಮರು…

ಮಕ್ಕಳನ್ನ ಕದಿಯೊರನ್ನ ನೊಡಿದ್ದೀವಿ ಮನುಷ್ಯರನ್ನ ಕದಿಯೋರನ್ನ ನೋಡಿದ್ದೀವಿ. ಆದರೆ ಇಲ್ಲಿ ಪ್ರಾಣಿಗಳನ್ನೆ ಕದ್ದಿದ್ದಾರೆ.  ಚಿಕ್ಕಪುಟ್ಟ ವಸ್ತುಗಳನ್ನ ಕದ್ರೆ ಹೇಗೋ ಬಚಾವಾಗಬೋದು ಆದ್ರೆ ಕದಿಯೋದಕ್ಕೂ ಒಂದು ಮಿತಿ ಇರುತ್ತೆ ಅಲ್ವ…ಇಲ್ಲೊಂದಿಷ್ಟು ಜನ ಮಠಕ್ಕೆ ಸೇರಿದ ಆನೆಯನ್ನ  ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ತುಮಕೂರಿನ ಹೊರಪೇಟೆಯಲ್ಲಿರುವ ಕರಿಬಸವಸ್ವಾಮಿ ಮಠದಲ್ಲಿ ಸುಮಾರು 29 ವರ್ಷಗಳಿಂದಲೂ ಲಕ್ಷ್ಮಿಯನ್ನು ಕಾನೂನುಬದ್ಧವಾಗಿ ಅನುಮತಿ ಪಡೆದು ಸಾಕಲಾಗುತ್ತಿದೆ.  ಅತ್ಯಂತ  ಸೌಮ್ಯದ  ಲಕ್ಷ್ಮಿ ಆನೆ ಕಂಡರೆ ಜನರಿಗೆ ಭಕ್ತಿ ಭಾವ ಜಾಸ್ತಿ.  ಹೀಗಾಗಿ ಯಾವುದೇ ಹಬ್ಬ-ಹರಿದಿನ, ಜಾತ್ರೆಗಳು ನಡೆದರೆ ಲಕ್ಷ್ಮಿಗೆ ಭಾರೀ ಬೇಡಿಕೆ.

ಸದ್ಯದ ಮಟ್ಟಿಗೆ ತುಮಕೂರಿನಲ್ಲಿ ಲಕ್ಷ್ಮಿ ಹೊರತುಪಡಿಸಿದರೆ ಬೇರೆ ಸಾಕಿದ ಆನೆ ಇಲ್ಲ. ಇಂಥಹ ಸೌಮ್ಯ  ಆನೆಯನ್ನ ಸರ್ಕಸ್ ಗೆ  ಪಳಗಿಸಿಕೊಳ್ಳುವುದು ಸುಲಭ ಎಂಬ ಕಾರಣಕ್ಕೆ ಆನೆ ಕದಿಯಲು ಯತ್ನಿಸಿದ್ದಾರೆ.

ಕಳೆದ ತಿಂಗಳು ಮಠಕ್ಕೆ ಬೇಟಿ ನೀಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಯಯನ್ನ ತಪಾಸಣೆ ಮಾಡಿ ಹೊಟ್ಟೆಯಲ್ಲಿ ಗಡ್ಡೆ ಬೆಳದಿದೆ ಎಂದು ಹೇಳಿದ್ದಾರೆ.  ಶಸ್ತ್ರ ಚಿಕಿತ್ಸೆಗಾಗಿ ಬನ್ನೇರುಘಟಕ್ಕೆ ಕರೆದುಕೊಮಡು ಹೋಗಲು ಲಾರಿ ಮತ್ತು ಮಾಹುತರನ್ನ ಕರೆತಂದಿದ್ದಾರೆ.

ಆನೆಯನ್ನ ಮಠದಿಂದ ಸಾಗಿಸಿ  ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಬೇರೆ ಎಡೆಗೆ ಸ್ಥಳಾಂತರಿಸಿದ್ದಾರೆ ಮಠದ ಮಾವುತರನ್ನ ಥಳಿಸಿ ಕೆಳಗೆ ಇಳಿಸಿದ್ದಾರೆ. ನಂತರ ಆನೆಯನ್ನ ಕುಣಿಗಲ್ ಬಳಿ ಹಳ್ಳಿಯೊಂದರಲ್ಲಿ ಅಡಗಿಸಿಟ್ಟಿದ್ದಾರೆ.

ಆನೆಯನ್ನ ಸಾಗಿಸಲು ಗುಜರಾತ್ ಸರ್ಕಸ್ ಕಂಪನಿಗೆ ಸೇರಿದ ಲಾರಿಯನ್ನ ಕರೆತರಲಾಗಿತ್ತು.  ಮಾವುತರು ಸಹ ಅದೇ ಕಂಪನಿಯವರು  ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.  ಮಠದವರು ಆನೆಯನ್ನ ಪತ್ತೆ ಹಚ್ಚಿ  ಬೇರೊಂದು ಲಾರಿಯಲ್ಲಿ ಆನೆಯನ್ನ ವಾಪಸ್ ಕರೆತಂದಿದ್ದಾರೆ.  ಸುಮಾರು 40 ಲಕ್ಷ ರೂಗಳಿಗೆ ಆನೆ ಮಾರಾಟಕ್ಕೆ ಅರಣ್ಯ ಇಲಾಖೆಯವರೆ ಸಾಥ್ ನೀಡಿದ್ದಾರೆ ಎಂದು ಮಠದವರು ಆರೋಪಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd