ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ – ಡಾ.ಕೆ.ಸುಧಾಕರ್

1 min read
Sudhakhar

ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ – ಡಾ.ಕೆ.ಸುಧಾಕರ್

ಬೆಂಗಳೂರು : ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ ಎಂದು ಡಾ.ಕೆ.ಸುಧಾಕರ್ ಕೋರ್ಟ್ ಮೊರೆ ಹೋಗಿದ್ದಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ವಿಧಾನಸಭೆಯಲ್ಲಿ ನಾವು ಯಾಕೆ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಪರಿಶೀಲನೆ ಮಾಡದೆ ಸುದ್ದಿ ಪ್ರಕಟ ಮಾಡಬಾರದು ಎಂಬ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದಾಗಿ‌ ಸುಧಾಕರ್ ಹೇಳಿದ್ದಾರೆ.
Dr K Sudhakar
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ಕಾನೂನು ವ್ಯಾಪ್ತಿಯಲ್ಲಿರುವ ಅವಕಾಶವನ್ನು ನಾವು ಬಳಸಿಕೊಂಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಹೇಗೆ ಬೇಕಾದರೂ ವಿಡಿಯೋ ಮಾಡಬಹುದು ಎಂದು ಸುಧಾಕರ್ ಹೇಳಿದರು.
dr k sudhakar karnataka saakshatv

ವಿರೋಧ ಪಕ್ಷದ ನಾಯಕರು ಕೋರ್ಟ್​ಗೆ ಏಕೆ ಹೋಗಿರುವುದಾಗಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮಾಧ್ಯಮಗಳು ಆ ಸಂದರ್ಭದಲ್ಲಿ ಸಿಗುವ ದಾಖಲೆ, ಸಿಡಿ ಯನ್ನು ಪ್ರಸಾರ ಮಾಡುತ್ತವೆ. ಆದರೆ ಇದರಿಂದ ಪ್ರಜಾಪ್ರತಿನಿಧಿಗಳಿಗೆ ಅವಮಾನ ಆಗುವಂತಹ ಸನ್ನಿವೇಶ ಏರ್ಪಡುತ್ತದೆ . ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಲ್ವಾ?. ಇಂದಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು, ಫೇಕ್ ವಿಡಿಯೋ ಕೂಡ ಮಾಡಬಹುದು ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd