ಇಂದಿನಿಂದ ಎಸ್ಬಿಐ ನಿಯಮ, ಚಾಲನಾ ಪರವಾನಗಿ ಸೇರಿದಂತೆ ಈ ಎಲ್ಲಾ ವ್ಯವಹಾರಗಳಲ್ಲಿ ಬದಲಾವಣೆ
ಇಂದಿನಿಂದ ಎಸ್ಬಿಐ ಬ್ಯಾಂಕ್ ನ ಎಟಿಎಂ ಬಳಕೆಯ ಶುಲ್ಕ ಸೇರಿದಂತೆ ಹಲವು ಬದಲಾವಣೆಗಳು ಜಾರಿಗೆ ಬರಲಿದೆ.
ಮೂಲ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಸೇವಾ ಶುಲ್ಕ, ಚಾಲನಾ ಪರವಾನಗಿಯ ನಿಯಮಗಳೂ ಬದಲಾಗುತ್ತಿವೆ. ಎಲ್ಪಿಜಿ ಸಿಲಿಂಡರ್ಗಳ ಬೆಲೆಯೂ ಬದಲಾಗಬಹುದು. ತೆರಿಗೆಯಲ್ಲೂ ಬದಲಾವಣೆ ಕಂಡುಬಂದಿದೆ.
ಇಂದಿನಿಂದ ಬದಲಾಗಲಿರುವ ನಿಯಮಗಳ ವಿವರಗಳು ಇಲ್ಲಿದೆ
ಎಸ್ಬಿಐ ನಿಯಮಗಳಲ್ಲಿ ಬದಲಾವಣೆ
ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಹೊಸ ಸೇವಾ ಶುಲ್ಕವನ್ನು ಜಾರಿಗೊಳಿಸುತ್ತಿದೆ. ಎಟಿಎಂ, ಚೆಕ್ ಬುಕ್, ಹಣ ವರ್ಗಾವಣೆ ಮತ್ತು ಇತರ ಸೌಲಭ್ಯಗಳಲ್ಲಿ ಹೊಸ ಶುಲ್ಕ ವಿಧಿಸಲಾಗಿದೆ.
ಈ ಎಲ್ಲಾ ಶುಲ್ಕಗಳು ಜುಲೈ 1, 2021 ರಿಂದ ಅನ್ವಯವಾಗುತ್ತವೆ. ಒಂದು ತಿಂಗಳಲ್ಲಿ ಕೇವಲ 4 ವಹಿವಾಟುಗಳನ್ನು ಮಾತ್ರ ಮಾಡಬಹುದು. ಇದರರ್ಥ ನೀವು ಬ್ಯಾಂಕಿನಿಂದ ಹಣವನ್ನು ಹಿಂತೆಗೆದುಕೊಂಡರೂ ಸಹ, ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ತಿಂಗಳಲ್ಲಿ 4 ಕ್ಕೂ ಹೆಚ್ಚು ವಹಿವಾಟು ನಡೆದರೆ, 15 ರೂ. ಮತ್ತು ಜಿಎಸ್ಟಿ ಹಣವನ್ನು ಪಾವತಿಸಬೇಕಾಗುತ್ತದೆ.
ಐಎಫ್ಎಸ್ಸಿ ಕೋಡ್ ಬದಲಾವಣೆ
ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ನೊಂದಿಗೆ ವಿಲೀನಗೊಂಡಿದೆ ಮತ್ತು ಅದರ ಬ್ಯಾಂಕಿಂಗ್ ವಿವರಗಳು ಬದಲಾಗಲಿವೆ. ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಐಎಫ್ಎಸ್ಸಿ ಕೋಡ್ ಬದಲಾಗಲಿದೆ ಎಂದು ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ. ಗ್ರಾಹಕರು ಹೊಸ ಕೆನರಾ ಐಎಫ್ಎಸ್ಸಿ ಕೋಡ್ ಅನ್ನು NEFT / RTGS / IMPS ಮೂಲಕ ಹಣವನ್ನು ಸ್ವೀಕರಿಸಲು ಬಳಸಬೇಕಾಗುತ್ತದೆ. ಕೆನರಾ ಬ್ಯಾಂಕ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಹೊಸ ಐಎಫ್ಎಸ್ಸಿಯನ್ನು ಕಾಣಬಹುದು. ಇದಲ್ಲದೆ, ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರು ಈಗ ಬ್ಯಾಂಕಿನಿಂದ ಹೊಸ ಐಎಫ್ಎಸ್ಸಿ ಮತ್ತು ಎಂಐಸಿಆರ್ ಕೋಡ್ನೊಂದಿಗೆ ಹೊಸ ಚೆಕ್ ಬುಕ್ ಪಡೆಯಬೇಕಾಗುತ್ತದೆ.
ಸಿಲಿಂಡರ್ ಬೆಲೆ ಬದಲಾವಣೆ
ಭಾರತದ ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪರಿಶೀಲಿಸುತ್ತವೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತದೆ.
ಡಬಲ್ ಟಿಡಿಎಸ್ ರೂಪದ ದಂಡ
ಕೊರೋನಾ ಸಾಂಕ್ರಾಮಿಕದಿಂದ, ನೇರ ತೆರಿಗೆ ವಿವಾದ ಪರಿಹಾರ ಯೋಜನೆ ‘ವಿವಾದ್ ಸೆ ವಿಶ್ವಾಸ್’ ಅಡಿಯಲ್ಲಿ ಪಾವತಿ ಮಾಡುವ ಗಡುವನ್ನು ಸರ್ಕಾರ ಎರಡು ತಿಂಗಳವರೆಗೆ ವಿಸ್ತರಿಸಿತ್ತು. ಸಿಬಿಡಿಟಿಯ ಪ್ರಕಾರ, ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಕಾಯ್ದೆ 2020 ರ ಅಡಿಯಲ್ಲಿ ಬಾಕಿ ಪಾವತಿಸುವ ಸಮಯವನ್ನು 2021 ರ ಜೂನ್ 30 ರವರೆಗೆ ವಿಸ್ತರಿಸಲಾಗಿತ್ತು. ತೆರಿಗೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು 100% ವಿವಾದಿತ ತೆರಿಗೆ ಮತ್ತು 25% ಪಾವತಿಸಿ ಇತ್ಯರ್ಥಪಡಿಸಬಹುದಿತ್ತು. ತೆರಿಗೆ ಮೊತ್ತವನ್ನು ಜೂನ್ 30ರ ಒಳಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಸೌಲಭ್ಯ ಇದರಲ್ಲಿತ್ತು. ಆದರೆ ಜುಲೈಯಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದೆ ಇದ್ದರೆ ಡಬಲ್ ಟಿಡಿಎಸ್ ರೂಪದ ದಂಡ ಬೀಳಲಿದೆ.
ಚಾಲನಾ ಪರವಾನಗಿಯ ನಿಯಮ ಬದಲಾವಣೆ
ಈಗ ಚಾಲಕನು ಕಲಿಕೆಯ ಪರವಾನಗಿ ಪಡೆಯಲು ಆರ್ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಈ ವ್ಯವಸ್ಥೆ ಜುಲೈ 1 ರಿಂದ ಪ್ರಾರಂಭವಾಗಲಿದೆ. ಕಲಿಕೆಯ ಪರವಾನಗಿ ನೀಡುವ ವ್ಯವಸ್ಥೆಯನ್ನು ರದ್ದುಪಡಿಸುವುದು ಸರ್ಕಾರದ ಯೋಜನೆಯಾಗಿತ್ತು. ಸಂಪೂರ್ಣ ತರಬೇತಿಯ ನಂತರ ಚಾಲಕರಿಗೆ ಶಾಶ್ವತ ಚಾಲನಾ ಪರವಾನಗಿ ನೀಡಬೇಕು. ಇದಕ್ಕಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ನು ಬದಲಾಯಿಸಬೇಕಾಗಿತ್ತು. ಅದನ್ನು ಮಾರ್ಪಡಿಸುವುದು ಸುಲಭವಲ್ಲ. ಆದ್ದರಿಂದ, ಕಲಿಕೆ ಪರವಾನಗಿ ಪಡೆದವರು ಆರ್ಟಿಒ ಕಚೇರಿಗೆ ಹೋಗದಂತೆ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಉತ್ತಮ ಆದಾಯ ನೀಡುವ ಅಂಚೆ ಕಚೇರಿಯ 7 ಯೋಜನೆಗಳು#postofficeschemes https://t.co/Wi9syUu1S5
— Saaksha TV (@SaakshaTv) June 27, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ಕಡ್ಲೆಬೇಳೆ ಮಸಾಲೆ ವಡೆ#Saakshatv #cookingrecipe #masalavade https://t.co/tzZADVNKSM
— Saaksha TV (@SaakshaTv) June 27, 2021
ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#mangopeel #healthbenefits https://t.co/6Gee3KyOpO
— Saaksha TV (@SaakshaTv) June 26, 2021
ಟೋಕಿಯೊದಲ್ಲಿ ಕೊರೋನಾ ಸೋಂಕು ಹೆಚ್ಚಳ – ಒಲಿಂಪಿಕ್ ಕ್ರೀಡಾಕೂಟ ರದ್ದುಗೊಳಿಸುವಂತೆ ಆಗ್ರಹ#OlympicGames https://t.co/97mIY48IEe
— Saaksha TV (@SaakshaTv) June 30, 2021
#importantrules #SBIrules