ಕಳ್ಳತನ ಮಾಡಲು ಡಯಟ್ ಮಾಡಿ ತೂಕ ಇಳಿಸಿಕೊಂಡ ಭೂಪ
ತುಂಬಾ ದಪ್ಪದ್ದವರಿಗೆ ನಾವು ಸಣ್ಣಗಾಗ ಬೇಕು ಫಿಟ್ ಆಗಿರಬೇಕು ಆಸೆ ಇರುತ್ತೆ.. ಹಾಗಾಗಿ ಡಯೆಟ್ ಮಾಡಿರುವವರನ್ನ ನೋಡಿರ್ತಿರಾ..ಆದ್ರೆ ಇಲ್ಲೊಬ್ಬ ಖತರನಾಖ್ ವ್ಯಕ್ತಿಗೆ ದೇಹದ ತೂಕ ಇಳಿಸಿಕೊಳ್ಳಲು ಸಿಕ್ಕ ಪ್ರೇರಣೆಯೆ ವಿಚಿತ್ರ.
ತಾನು ಮನೆಗೆಲಸ ಮಾಡುತ್ತಿದ್ದ ಮನೆಯನ್ನೇ ಕಳ್ಳತನ ಮಾಡಲು 10 ಕೆ ಜಿ ತೂಕ ಇಳಿಸಿಕೊಂಡು ಮನೆಗೆ ಕನ್ನ ಹಾಕಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ
ಅಹಮದಾಬಾದ್ನ 36 ವರ್ಷದ ಮೋತಿ ಸಿಂಗ್ ಎನ್ನುವ ವ್ಯಕ್ತಿ ಚೌಹಾನ್ ಮೋಹಿತ್ ಮರಾಡಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಡಲಾಗಿದೆ ಎಂದು ಅವರಿಗೆ ತಿಳಿದಿತ್ತು.
ಆದರೆ ಮನೆಯ ಎಲ್ಲ ಬಾಗಿಲುಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಇದ್ದದ್ದರಿಂದ ಕದಿಯಲು ಸಾಧ್ಯವಾಗಲಿಲ್ಲ, ಅಡುಗೆ ಮನೆಯ ವೆಂಟಿಲೇಟರ್ ಸ್ಲೈಡ್ ಮೂಲಕ ಕಳ್ಳತನ ಮಾಡಲು ಮೊತಿ ಸಿಂಗ್ ನಿರ್ಧರಿಸಿದ. ಆದರೆ ಅದಕ್ಕೆ ದೇಹದ ತೂಕ ಅಡ್ಡ ಬಂದಿತು. ಹೀಗಾಗಿ ಮೂರು ತಿಂಗಳ ಕಾಲ ದಿನಕ್ಕೆ ಒಂದು ಊಟವನ್ನು ಮಾತ್ರ ಸೇವಿಸಿ ವೆಂಟಿಲೇಟರ್ ಮೂಲಕ ಒಳಹೋಗಲು ಹೊಂದಿಕೊಳ್ಳು ವಂತೆ 10 ಕೆಜಿ ದೇಹದ ತೂಕವನ್ನು ಕಳೆದುಕೊಂಡ.
ತನ್ನ ಚಾಕಚಕ್ಯತೆಯಿಂದ ಮನೆಯಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ತಪ್ಪಿಸಿ, 37 ಲಕ್ಷ ರುಪಾಯಿ ಮತ್ತು ಬೆಲೆಬಾಳುವ ಆಭರಣಗಳನ್ನ ಕದ್ದು ಪರಾರಿಯಾಗಿದ್ದಾನೆ. ಆದರೆ ಸ್ಥಳೀಯ ಹಾರ್ಡ್ವೇರ್ ಅಂಗಡಿಯಿಂದ ಗಾಜು ಹೊಡೆಯು ಹಾರ್ಡ್ ವೇರ್ ವಸ್ತುಗಳನ್ನು ಖರೀದಿಸುವ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿಬಿದ್ದವು. ಈತನೆ ಕಳ್ಳತನ ಮಾಡಿದ್ದಾನೆ ಎಂದು ಪಕ್ಕಾದ ಪೊಲೀಸರು ಆತನ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದಾರೆ