Mandya: ಎಟಿಎಂಗೆ ಕನ್ನ ಹಾಕಿದ ಖದೀಮರು

1 min read
Mandya Saaksha Tv

ಎಟಿಎಂಗೆ ಕನ್ನ ಹಾಕಿದ ಖದೀಮರು

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಎಸ್ ಬಿ ಐ ಬ್ಯಾಂಕಿಗೆ ಸೇರಿದ ಎಟಿಎಂ ಗೆ ಖದೀಮರು ಕನ್ನ ಹಾಕಿದ್ದಾರೆ.

ಮದ್ದೂರಿನ್ ಕೆಎಸ್ ಆರ್ ಟಿಸಿ ಬಸ್ ಡಿಪೋ ಬಳಿ ಇರುವ ಎಸ್​ಬಿಐ ಬ್ಯಾಂಕಿಗೆ ಸೇರಿದ ಎಟಿಎಂ​ ನ್ನು ಖದೀಮರು ಗ್ಯಾಸ್ ಕಟ್ಟರ್​ನಿಂದ ಎಟಿಎಂ ಯಂತ್ರ ಕತ್ತರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ಕದ್ದಿದ್ದಾರೆ.

ಸೋಮವಾರ ತಡರಾತ್ರಿ ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇಲ್ಲದನ್ನು ಗಮನಿಸಿದ ಆರೋಪಿಗಳು ಹೊಂಚು ಹಾಕಿ ಕೃತ್ಯ ಎಸಗಿದ್ದಾರೆ. ಇಂದು ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣವನ್ನು ದಾಖಲಸಿಕೊಂಡಿದ್ದಾರೆ.  ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd