ನಟಿ ಶೃತಿ ಹಾಸನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಛೀ…ಥೂ ಎಂದು ಉಗಿಯುವಂತಾಗಿದೆ.
ಬಾಯ್ ಫ್ರೆಂಡ್ (boy friend) ಬಗ್ಗೆ ರೊಮ್ಯಾಂಟಿಕ್ ಆಗಿ ಬರೆಯಲು ಹೋಗಿ ಅತೀಯಾಗಿ ಬರೆದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್, ಬಾಯ್ಫ್ರೆಂಡ್ ಶಾಂತನು ಹಜಾರಿಕಾ ಇಬ್ಬರೂ ಫುಲ್ ಬಿಂದಾಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಹಂಚಿಕೊಳ್ಳುತ್ತಾರೆ.
2018ರಲ್ಲಿ ಶ್ರುತಿ ಹಾಸನ್ ಶಂತನು ಹಜಾರಿಕಾ ಅವರನ್ನು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿದಾಗ ಮೊದಲು ಪ್ರಪೋಸ್ ಮಾಡಿದ್ದು ಕೂಡ ಇವರೇ. ಲಿವ್ ಇನ್ ರಿಲೇಷನ್ಶಿಪ್ನಲ್ಲಿರುವ ಶ್ರುತಿ ಹಾಸನ್ ಬಾಯ್ಫ್ರೆಂಡ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಸದ್ಯ ಶೃತಿ ಹಂಚಿಕೊಂಡಿರುವ ವಿಷಯ ನೆಟ್ಟಿಗರಿಗೆ ಹಿಡಿಸಿಲ್ಲ. ತನ್ನ ಬಾಯ್ಫ್ರೆಂಡ್ (Boyfriend) ಹೂಸು ತನಗೆ ಇಷ್ಟ ಅಂದಿದ್ದು. ತೀರಾ ಈ ಲೆವೆಲ್ಗೆ ಇಳಿದು ಮಾತಾಡಬೇಕಾ ಅಂತ ನೆಟ್ಟಿಗರು ಕಮಲ್ ಮಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.






