ಎಲ್ಲಾ ರೀತಿಯ ಚರ್ಮ ದೋಷಗಳ ನಿವಾರಣೆಗೆ ಈ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದೆ..
ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಕಂಗೊಳಿಸುತ್ತಿರುವ ಸುಬ್ರಹ್ಮಣ್ಯವು ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದ್ದು, ಇತಿಹಾಸ ಪ್ರಸಿದ್ಧ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಗ್ರಾಮದ ಹೃದಯ ಭಾಗದಲ್ಲಿದ್ದು ನಾಡಿನಾದ್ಯಂತ ಲಕ್ಷಾದಿ ಭಕ್ತಾಧಿಗಳನ್ನು ಆಕರ್ಷಿಸುತ್ತದೆ. ಪುಣ್ಯ ತೀರ್ಥಗಳಿಂದ ಪ್ರಖ್ಯಾತಿ ಹೊಂದಿರುವ ಕುಮಾರಾಧಾರ ನದಿ ಮತ್ತು ದರ್ಪಣ ತೀರ್ಥ (ಕನ್ನಡಿಹೊಳೆ) ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಈ ಗ್ರಾಮದಲ್ಲಿ ಹರಿದು ನಂತರ ಜೊತೆ ಸೇರಿ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತದೆ. ಈ ನದಿಗಳಲ್ಲಿ ಸ್ನಾನ ಮಾಡಿದರೆ ಎಲ್ಲಾ ರೀತಿಯ ಚರ್ಮದೋಷಗಳು ನಿವಾರಣೆಯಾಗುವುದು ಎಂಬ ನಂಬಿಕೆಯು ಈಗಲೂ ಪ್ರಚಲಿತದಲ್ಲಿದೆ.
ಇದೇ ಕುಮಾರಧಾರ ನದಿಯಲ್ಲಿ ಪ್ರತೀ ವರ್ಷ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತ ಸ್ನಾನ ನಡೆಯುತ್ತದೆ ಹಾಗಾಗಿ ಕುಮಾರಧಾರ ನದಿಯನ್ನು ದೇವರ ನದಿ ಎಂದೂ ಕರೆಯುತ್ತಾರೆ. ಅಷ್ಟೇ ಅಲ್ಲ ಈ ನದಿಯ ಮೂಲ, ಪ್ರಸಿದ್ಧ ಕುಮಾರಪರ್ವತದ ತಪ್ಪಲು ಪ್ರದೇಶ!!… ಹಾಗೂ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿದವರ ಚರ್ಮ ರೋಗ ವಾಸಿಯಾದ ಬಹಳಷ್ಟು ಉದಾಹರಣೆಗಳಿವೆ. ಇದಕ್ಕೆ ಕಾರಣ ನದಿಯ ನೀರಿನಲ್ಲಿರುವ ಗಿಡ ಮೂಲಿಕೆಗಳ ಸತ್ವ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಆದರೆ ಇಷ್ಟೊಂದು ಪವಿತ್ರವಾದ ನದಿಯನ್ನು ಈಗ ಪ್ರವಾಸಿಗರು ಬಟ್ಟೆ , ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿ, ಚಪ್ಪಲಿ, ಡೈಪರ್, ಹೀಗೆ ಎಲ್ಲಾ ವಸ್ತುಗಳನ್ನು ಎಸೆದು ಮಲಿನ ಮಾಡಿರುವುದು ತುಂಬಾ ಬೇಸರದ ಸಂಗತಿ.