ಬೆಂಗಳೂರು: ಇತ್ತೀಚೆಗೆ ಚಿಕ್ಕೋಡಿಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ (Jain Monk Nandi Kamakumara Swamiji) ಹತ್ಯೆ ಪ್ರಕರಣ ಬೆಚ್ಚಿ ಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು 500ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಜುಲೈನಲ್ಲಿ ದುಷ್ಕರ್ಮಿಗಳು ಕರೆಂಟ್ ಶಾಕ್ ಕೊಟ್ಟು ಜೈನಮುನಿಯನ್ನು ಕೊಲೆ ಮಾಡಿ, ಅವರ ದೇಹ ತುಂಡರಿಸಿ ಬೋರ್ ವೆಲ್ ಗೆ ಬಿಸಾಡಿದ್ದಾರೆ. ಈ ಕೊಲೆಯ ಹಿಂದಿನ ರಹಸ್ಯ ಈಗ ಬಯಲಾಗಿದ್ದು, ಹಣವಷ್ಟೇ ಅಲ್ಲ, ಜೈನಮುನಿಯ ಬೈಗುಳವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಆರೋಪಿ ನಾರಾಯಣ ಮಾಳಿಯು ಜೈನಮುನಿ ಬಳಿ 6 ಲಕ್ಷ ರೂ. ಹಣ ಪಡೆದಿದ್ದ. ಆದರೆ, ಜೈನಮುನಿ ಆರೋಪಿಗಳನ್ನು ಹೀಯಾಳಿಸಿ ನಿಂದಿಸಿ ಬೈದಿದ್ದರು. ಬೈಗುಳದಿಂದ ಆರೋಪಿ ನಾರಾಯಣನು ಕೊಲೆಗೆ ಮುಂದಾಗಿದ್ದ ಎನ್ನಲಾಗಿದೆ. ಸದ್ಯ ಆರೋಪಿಗಳು ಬಂಧಿಯಾಗಿದ್ದು, ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈಗ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ.