ಶಿವಮೊಗ್ಗ : ನಟ ವಿಜಯ್ ರಾಘವೇಂದ್ರ ಅವರನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ, ಪೆಟ್ರೋಲ್ ಕಾರಿಗೆ ಡೀಸೆಲ್ ಹಾಕಿ ಎಡವಟ್ಟು ಮಾಡಿದ್ದಾರೆ. ನಟ ವಿಜಯ್ ರಾಘವೇಂದ್ರ ಕುಟುಂಬದ ಜೊತೆ ಶಿವಮೊಗ್ಗ ಪ್ರವಾಸಕ್ಕೆ ಬಂದಿದ್ದರು. ಜೋಗ ನೋಡಿಕೊಂಡು ನಗರದ ಬಂಕ್ ನಲ್ಲಿ ಕಾರ್ ಗೆ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾರೆ. ನೆಚ್ಚಿನ ನಟನನ್ನು ನೋಡಿದ ಖುಷಿಯಲ್ಲಿ ಬಂಕ್ ಸಿಬ್ಬಂದಿ ಪೆಟ್ರೋಲ್ ಬದಲಿಗೆ ಡೀಸೆಲ್ ತುಂಬಿಸಿದ್ದಾರೆ.
ತಮ್ಮ ತಪ್ಪಿನ ಅರಿವಾಗುತ್ತಲೇ ಎಚ್ಚೆತ್ತ ಬಂಕ್ ಸಿಬ್ಬಂದಿ ವಿಜಯ್ ರಾಘವೇಂದ್ರ ಅವರ ಬಳಿ ಕ್ಷಮೆ ಕೇಳಿದ್ದಾರೆ. ನಂತರ ವಿಜಯ್ ರಾಘವೇಂದ್ರ ಅವರ ಕಾರ್ ನ್ನು ಸರ್ವಿಸ್ ಗೆ ಕಳುಹಿಸಲಾಗಿದೆ.








