ವಾಹ್ಹ್ … ಆರು ಎಸೆತಗಳಲ್ಲಿ ಆರು ಸಿಕ್ಸರ್.. ಸಿಕ್ಸರ್ ಕಿಂಗ್ಸ್ ಸಾಲಿಗೆ ಲಂಕಾ ಕ್ರಿಕೆಟಿಗ..!
thisara-perera-first-sri-lankan-to-hit-six-sixes-in-an-over
ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸೋದು ಸಾಮಾನ್ಯ ಸಂಗತಿಲ್ಲ. ಈಗಾಗಲೇ ಈ ಸಾಧನೆ ಮಾಡಿದ ಎಂಟು ಬ್ಯಾಟ್ಸ್ ಮೆನ್ ಗಳು ನಮ್ಮ ಮುಂದಿದ್ದಾರೆ. ಇದಕ್ಕೆ ಈಗ ಹೊಸ ಸೇರ್ಪಡೆ ಶ್ರೀಲಂಕಾದ ತಿಸರಾ ಪೆರೇರಾ.
ಲಂಕಾ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ತಿಸರಾ ಪೆರೆರಾ ಈ ಸಾಧನೆ ಮಾಡುವ ಮೂಲಕ ಶ್ರೀಲಂಕಾದಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಕೊಲೊಂಬಾದ ಪನಗೊಡಾದಲ್ಲಿ ನಡೆದ ಮೇಜರ್ ಕ್ಲಬ್ಸ್ ಲಿಮಿಟೆಡ್ ಓವರ್ ಲಿಸ್ಟ್ ಎ ಪಂದ್ಯದಲ್ಲಿ ಶ್ರೀಲಂಕಾ ಆರ್ಮಿ ಪರ ತಿಸರಾ ಪೆರೆರಾ ಆಡಿದ್ದರು. ಬ್ಲೂಮ್ ಫೀಲ್ಡ್ ಕ್ರಿಕೆಟ್ ಮತ್ತುಅಥ್ಲೆಟಿಕ್ ಕ್ಲಬ್ ವಿರುದ್ಧ ತಿಸರಾ ಪೆರೆರಾ ಕೇವಲ 13 ಎಸೆತಗಳಲ್ಲಿ 52 ರನ್ ಸಿಡಿಸಿದ್ದರು.
ಇನಿಂಗ್ಸ್ ನ ಕೊನೆಯ 20 ಎಸೆತಗಳು ಬಾಕಿ ಇರುವಾಗ ಕ್ರೀಸ್‍ಗೆ ಆಗಮಿಸಿದ್ದ ಪೆರೆರಾ ದಿಲ್ಹಾನ್ ಕೂರೇಯ್ ಓವರ್ ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ವಿಶ್ವ ಕ್ರಿಕೆಟ್ ನಲ್ಲಿ ಒಟ್ಟಾರೆ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದ 9ನೇ ಆಟಗಾರ ಪೆರೆರಾ. ಗ್ಯಾರಿಫೀಲ್ಡ್ ಸೋಬರ್ಸ್, ರವಿಶಾಸ್ತ್ರಿ, ಹರ್ಸೆಲ್ ಗಿಬ್ಸ್, ಯುವರಾಜ್ ಸಿಂಗ್, ರಾಸ್ ವೈಟ್ಲಿ, ಹಜ್ರುತ್ತುಲಾ ಝಾಝೈ, ಲಿಯೊ ಕಾರ್ಟರ್ ಹಾಗೂ ಇತ್ತೀಚೆಗೆ ಕಿರಾನ್ ಪೊಲಾರ್ಡ್ ಈ ಸಾಧನೆ ಮಾಡಿದ್ದರು.