ಕೇಂದ್ರ ಸರ್ಕಾರ ಯೋಜನೆ ಪಿಎಂ ಕಿಸಾನ್ ಯೋಜನೆಯ 85 ಸಾವಿರ ಖಾತೆಗಳು ನಕಲಿ..!
ಬೆಂಗಳೂರು: ಕೇಂದ್ರ ಸರ್ಕಾರ ಯೋಜನೆ ಪಿಎಂ ಕಿಸಾನ್ ಯೋಜನೆಯಲ್ಲಿ ಭಾರಿ ಅಕ್ರಮವಾಗಿದೆ ಎಂದು ಹೇಳಲಾಗ್ತಿದೆ. ಸುಮಾರು 85 ಸಾವಿರ ಖಾತೆಗಳು ನಕಲಿ ಅಂತ ತಿಳಿದು ಬಂದಿದ್ದು, ಈ ಬಗ್ಗೆ ರಾಜ್ಯ ಕೃಷಿ ಇಲಾಖೆ ಪತ್ತೆ ಹಚ್ಚಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ 6 ಸಾವಿರ ರೂಗಳನ್ನು ನೀಡುತ್ತಿದೆ. ಆದ್ರೆ ಕೆಲವರು ರೈತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಅಕೌಂಟ್ ತೆರೆದು ಕಿಸಾನ್ ಸಮ್ಮಾನ್ ಯೋಜನೆ ಪೋರ್ಟಲ್ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿ ವಂಚಿಸುತ್ತಿದ್ದಾರೆ ಎನ್ನಲಾಗಿದೆ.
ಕಾರು ಚಲಾಯಿಸುವಾಗ ಗೂಗಲ್ ಮ್ಯಾಪ್ ನ ಕ್ರಮಬದ್ಧವಾಗಿ ಬಳಸದೇ ಹೋದ್ರೆ ದಂಡ ಗ್ಯಾರಂಟಿ..!
ಅಲ್ಲದೇ ರಾಜ್ಯದ ರೈತರ ಹೆಸರಿನಲ್ಲಿ ದಾಖಲೆಗಳನ್ನು ನೀಡಿ, ಹಣವನ್ನು ಹೊರ ರಾಜ್ಯದಲ್ಲಿರುವ ಬ್ಯಾಂಕ್ಗಳಲ್ಲಿ ಪಡೆದುಕೊಳ್ಳುತ್ತಿದ್ದರು ಎನ್ನುವ ಆಘಾತಕಾರಿ ಮಾಹಿತಿ ಹೊರಬಿದಿದ್ದೆ. ರಾಜ್ಯದ ರೈತರ ಹೆಸರಿನಲ್ಲಿ ದೂರದ ಬಿಹಾರ, ಉತ್ತರಪ್ರದೇಶ, ಬಂಗಾಳದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬುದು ತಿಳಿದು ಬಂದಿದೆ. ಸದ್ಯ ಸರಿ ಸುಮಾರು ಸುಮಾರು 85 ಸಾವಿರ ಶಂಕಿತ ಖಾತೆಗಳನ್ನು ಬ್ಲಾಕ್ ಮಾಡಲಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಧಾರ್ ಕಾರ್ಡ್ ಅಪ್ ಡೇಟ್ ಮಾಡೋದಿದ್ಯಾ : ಹೇಗೆ..? ಇಲ್ಲಿದೆ ಮಾಹಿತಿ..!
WHATSAPP ನಲ್ಲಿ ಸೀಘ್ರವೇ ಬರಲಿದೆ ಈ ಹೊಸ ಆಪ್ಶನ್..! ಉಪಯೋಗವೇನು..!
ಆಧಾರ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಹೊಸ ಸೌಲಭ್ಯ ಒದಗಿಸಿದ UDPI