ಇಂಫಾಲ್: ಮಣಿಪುರ-ಅಸ್ಸಾಂ ಮತ್ತೆ ಉದ್ವಿಗ್ನತೆ ಮನೆ ಮಾಡಿದ್ದು, ಜಿರಿ ನದಿ ಮತ್ತು ಬರಾಕ್ ನದಿಯ ಸಂಗಮದಲ್ಲಿ ಮೂರು ಶವಗಳು ಪತ್ತೆಯಾಗಿವೆ. ಜಿರಿಬಾಮ್ ಜಿಲ್ಲೆಯಿಂದ ಕಾಣೆಯಾದವರ ಶವಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದಲ್ಲಿ ಮಹಿಳೆ ಹಾಗೂ ಮಕ್ಕಳಿಬ್ಬರ ಶವಗಳು ಪತ್ತೆಯಾಗಿವೆ. ಇತ್ತೀಚೆಗಷ್ಟೇ 6 ಜನರು ನಾಪತ್ತೆಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನಾಪತ್ತೆಯಾದವರೇ ಶವಗಳೇ ಇವುಗಳಾ? ಎಂಬ ಕುರಿತು ಪರೀಕ್ಷಿಸಲಾಗುತ್ತಿದೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶುಕ್ರವಾರ ರಾತ್ರಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿ, ಶವಗಳು ಪತ್ತೆಯಾಗಿರುವ ಸುದ್ದಿಯ ನಂತರ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ.








