ಬೆಂಗಳೂರು: ಇಲ್ಲಿಯ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾರ್ಚ್ 20ರಂದು ಈ ಘಟನೆ ನಡೆದಿದ್ದು, ಪತಿ ಜಯಾನಂದ್, ಪತ್ನಿ ಸುಕನ್ಯಾ ಮಕ್ಕಳಾದ ನಿಶ್ಚಿತ್, ನಿಕಿತ್ ಸಾವನ್ನಪ್ಪಿದ್ದಾರೆ. ಮೂವರ ಶವಗಳ ಹತ್ತಿರ ವೈಯರ್ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆತ್ಮಹತ್ಯೆನಾ ಅಥವಾ ಓರ್ವರಿಗೆ ಕರೆಂಟ್ ಆದಾಗ ಬಿಡಿಸುವುದಕ್ಕೆ ಹೋಗಿ ಈ ಘಟನೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಈ ಕುರಿತು ಮಾತನಾಡಿ, ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ ಕುರಿತು ನಮಗೆ 8.30ಕ್ಕೆ ಸಂದೇಶ ಬಂತು. ವಿಚಾರಣೆ ವೇಳೆ ಆತ್ಮಹತ್ಯೆಗೆ ಸಾಲ ಬಾದೆಯೇ ಕಾರಣ ಎಂದು ಗೊತ್ತಾಗುತ್ತಿದೆ. ಇದನ್ನು ಹೊರತುಪಡಿಸಿ ಯಾರಾದರೂ ಕಿರುಕುಳ ನೀಡಿದರೆ ವಿಚಾರಣೆ ನಡೆಸುತ್ತೇವೆ. ದೇಹಗಳು ಮಾತ್ರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಈ ಮನೆಯಲ್ಲಿ ನಾಲ್ಕು ಜನ ವಾಸವಿದ್ದರು. ಮೃತ ಜಯಾನಂದ್ ಪ್ಲಾಸ್ಟಿಕ್ ಬಾಕ್ಸ್ ಪ್ಯಾಕ್ಟರಿಯೊಂದನ್ನ ನಡೆಸುತ್ತಿದ್ದ. ಇತ್ತೀಚೆಗೆ ಫ್ಯಾಕ್ಟರಿ ಲಾಸ್ ಆಗಿ ಕ್ಲೋಸ್ ಮಾಡಿದ್ದರು. ಆನಂತರ ಕುಟುಂಬ ಸಾಕಷ್ಟು ಸಾಲ ಮಾಡಿಕೊಂಡಿತ್ತು. ಸುಕನ್ಯಾ ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದರು. ಗಂಡ ಅನಾರೋಗ್ಯದಿಂದ ಮನೆಯಲ್ಲಿಯೇ ಇದ್ದರು. ಓರ್ವ ಮಗ ನಿಶ್ಚಿತ್ ವಿಕಲಚೇತನ ಆಗಿದ್ದ. ಹೀಗಾಗಿ ವರ್ಕ್ ಫ್ರಮ್ಂ ಹೋಂ ಮಾಡುತ್ತಿದ್ದ. ನಿಕಿತ್
ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಹೆಚ್ಚಾದ ಹಿನ್ನೆಲೆಯಲ್ಲಿ ಸಾಲ ಕಟ್ಟಲು ಒದ್ದಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.