Chikkaballapura | ಭೀಕರ ರಸ್ತೆ ಅಪಘಾತ.. ಮೂವರು ಸಾವು
ಚಿಕಬಳ್ಳಾಪುರದ ಹೊನ್ನೇನಹಳ್ಳಿ ಗೇಟ್ ಬಳಿ ಘಟನೆ
ಗೌಸ್, ಅಮ್ಮಾಜಾನ್, ರಿಯಾನ್ ಮೃತರು
ಬಸ್ ಯುಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ
ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರ ಪೊಲೀಸರು ಭೇಟಿ
ಚಿಕ್ಕಬಳ್ಳಾಪುರ : ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಿಗ್ಗೆ ಜವರಾಜ ಅಟ್ಟಹಾಸ ಮೆರೆದಿದ್ದು, ರಸ್ತೆ ಅಪಘಾತದಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ಬೈಕ್ ಗೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ತಾಯಿ ಹಾಗೂ ಮಗ ದಾರುಣವಾಗಿ ಮೃತಪಟ್ಟದ್ದಾರೆ.
ಮೃತರನ್ನು 37 ವರ್ಷದ ಗೌಸ್, ಅವರ ಪತ್ನಿ ಅಮ್ಮಾಜಾನ್ ಹಾಗೂ ಮಗ ರಿಯಾನ್ ಎಂದು ಗುರುತಿಸಲಾಗಿದೆ.
ಬಸ್ ಯುಟರ್ನ್ ತೆಗೆದುಕೊಳ್ಳುವಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾರೆ.
ಇನ್ನು ಸ್ಥಳೀಯರು ಚಿಕ್ಕಬಳ್ಳಾಪುರ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ಧಾರೆ. ಅಲ್ಲದೇ ಮೃತ ದೇಹಗಳನ್ನು ಜಿಲ್ಲಾಸ್ಪತ್ರೆ ರವಾಸಿದ್ದಾರೆ.
Three Died on spot after bus collide with bike in chikkaballapur saaksha tv