ಶಿವಮೊಗ್ಗ: ಒಂದೇ ಕುಟುಂಬ (Family) ದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಶಿವಮೊಗ್ಗದ (Shivamogga) ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ. ಮೃತರನ್ನು ಭುವನೇಶ್ವರಿ (52), ಭುವನೇಶ್ವರಿ ಸಹೋದರ ಮಾರುತಿ (28) ಭುವನೇಶ್ವರಿ ಮಗ ದರ್ಶನ್ (22) ಎಂದು ಗುರುತಿಸಲಾಗಿದೆ. ತಾಯಿ ಭುವನೇಶ್ವರಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ, ಮಹಿಳೆಯ ಸಹೋದರ ಮಾರುತಿ, ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ಎಂದಿನಂತೆ ಎಲ್ಲರೂ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿಯೇ ಮೂವರು ವಿಷ (Poison) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಬಂಧಿಕರು ಕರೆ ಮಾಡಿದಾಗ ಯಾರೊಬ್ಬರು ಸ್ವೀಕರಿಸಿರಲಿಲ್ಲ. ಆಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.