ತೆಲಂಗಾಣ ಗಡಿಯಲ್ಲಿ ಪೊಲೀಸ್ ಎನ್ಕೌಂಟರ್ – ಮೂವರು ನಕ್ಸಲರು ಫಿನಿಷ್.
ತೆಲಂಗಾಣ ಮತ್ತು ಛತ್ತೀಸ್ಗಡ್ ನ ಗಡಿಪ್ರದೇಶದಲ್ಲಿ ಪೊಲೀಸರು ಮತ್ತೆ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದದು ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ.
ತೆಲಂಗಾಣದ ಮುಗುಲು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಪಟ್ಟವರಿಂದ ಎಕೆ 47 ಮತ್ತು ಎಸ್ ಎಲ್ ಆರ್ ಗನ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಎಸ್ ಪಿ ಗೌಶ್ ಆಲ್ಬಂ ಮಾತನಾಡಿ ಎನ್ಕೌಂಟರ್ ಗೆ ಬಲಿಯಾದವರೆಲ್ಲರೂ ಮಾವೋವಾದಿಗಳಾಗಿದ್ದು ಇವರೆಲ್ಲರು ನಕ್ಸಲ್ ಗುಂಪಿನ ಪ್ರಮುಖ ನಾಯಕರಾಗಿದ್ದಾರೆ ಕೆಲ ನಕ್ಸಲರನ್ನ ಬಂಧಿಸಲ್ಪಟ್ಟಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ.