ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರಿಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೇ ಬೇಕು ಅಂತಹ ಕ್ಷೇತ್ರದಲ್ಲಿ ಹಣವೇ ಅಂತಿಮವಾಗಿ ಗೋಚರಿಸುತ್ತದೆ. ಆದ್ದರಿಂದ ಮಹಾಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರಗಳನ್ನು ಮಾಡಬೇಕು. ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ. ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು.
ಶುಕ್ರವಾರ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾಗಿ ನೆಲೆಸಿದ ದಿನ. ಶುಕ್ರವಾರ ಮಹಾಲಕ್ಷ್ಮಿಯ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ನಿಷ್ಠೆಯಿಂದ ಮಾಡಬೇಕು.
ಯಾರ ಮನೆಯಲ್ಲಿ ಹೆಚ್ಚಾಗಿ ದಾರಿದ್ರ್ಯ ಇರುತ್ತದೆಯೋ ಹಣಕಾಸಿನ ಸಮಸ್ಯೆ ಇರುತ್ತದೆಯೋ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಧನಪ್ರಾಪ್ತಿಗಾಗಿ ದೀಪಾರಾಧನೆಯನ್ನು ಪ್ರಾರಂಭಿಸುತ್ತಾರೆ. ಮೂರು ಶುಕ್ರವಾರದಂದು ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಎಲ್ಲಾ ರೀತಿಯ ಕಷ್ಟಗಳು ಕಳೆಯುತ್ತದೆ.
ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವುದು ಖಚಿತವಾದ ದೀಪವನ್ನು ಯಾವ ರೀತಿ ಹಚ್ಚಬೇಕು? ಇಲ್ಲಿದೆ ವಿವರ
ಶುಕ್ರವಾರದ ದಿನ ಮನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ದೀಪಾ ರಾಧನೆಯನ್ನು ಮಾಡಿದರೆ ಬಹಳ ಒಳ್ಳೆಯದು. ಅವರ ಅವತ್ತಿನ ದಿನ ತಲೆಗೆ ಸ್ನಾನ ಮಾಡಿ ಸೂರ್ಯ ಹುಟ್ಟುವ ಮೊದಲು ದೀಪವನ್ನು ಹಚ್ಚಲಾಯಿತು. ಬೆಳಿಗ್ಗೆ ಆದರೂ ಪರವಾಗಿಲ್ಲ ಸಂಜೆ ಆದರೂ ಪರವಾಗಿಲ್ಲ ಒಂದು ದಿನ ಎರಡು ಸಾರಿ ದೀಪಾರಾಧನೆ ಮಾಡಿದರೆ ತೊಂದರೆ ಇಲ್ಲ.
ಇದನ್ನೂ ಓದಿ: ಹಿಂದಿನ ಜನ್ಮದ ಪಾಪಗಳನ್ನು ನಿವಾರಿಸಲು ಹಾಲಿನ ಅಭಿಷೇಕ
ಸೂರ್ಯ ಹುಟ್ಟುವ ಮುಂಚೆ ನೀವು ದೀಪಾರಾಧನೆ ಮಾಡಿದರೆ ತುಂಬಾ ಉತ್ತಮವಾದ ಫಲ ಸಿಗುತ್ತದೆ ಹಣಕಾಸಿನ ಸಮಸ್ಯೆಗಳು ಬೇಗನೆ ಕಳೆಯುತ್ತವೆ. ತಲೆಗೆ ಸ್ನಾನ ಆದಮೇಲೆ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯನ್ನು ತೆಗೆದುಕೊಳ್ಳಬೇಕು ಅದಕ್ಕೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು ಅರಿಶಿಣವನ್ನು ಹಚ್ಚಿದ ನಂತರ ಮಣ್ಣಿನ ತಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು ಯಾವುದೇ ಕಾರಣಕ್ಕೂ ಪುಡಿ ಉಪ್ಪನ್ನು ಬಳಸಬಾರದು. ಈ ತಟ್ಟೆಗೆ ಒಂದು ಮುಷ್ಟಿಯಷ್ಟು ಕಲ್ಲು ಉಪ್ಪನ್ನು ಹಾಕಬೇಕು ಇದರ ಮೇಲೆ ಒಂದು ದೀಪವನ್ನು ಇಡಬೇಕು ಈ ದೀಪಕ್ಕೂ ಸಹ ಅರಿಶಿನವನ್ನು ಹಚ್ಚಬೇಕು.
ಅರಿಶಿಣವನ್ನು ಹಚ್ಚಿದ ನಂತರ ಈ ದೀಪಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಅಕ್ಷತೆ ಕಾಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡಬೇಕು. ನಂತರ ಮೇಲುಗಡೆ ಇರುವ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕು. ಕೊಬ್ಬರಿ ಎಣ್ಣೆ ಅಥವಾ ಶುದ್ಧ ತುಪ್ಪದಿಂದಲೂ ಸಹ ದೀಪವನ್ನು ಹಚ್ಚಬಹುದು.
ಲೇಖಕರು: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ. ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ






