tiger shraf
ಭಾಗಿ ಮೂಲಕ ತಮ್ಮ ಆಕ್ಷನ್ ಸೀನ್ಸ್ ನಿಂದಲೇ ಅಭಿಮಾನಿಗಳನ್ನ ಫಿದಾಗೊಳಿಸಿದ್ದ ಟೈಗರ್ ಶ್ರಾಫ್ ಅವರು ಸದ್ಯ ಬಾಲಿವುಡ್ ನಲ್ಲಿ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದ್ಹಾಗೆ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಅವರು ಇದೀಗ ಮತ್ತೆ ಆಕ್ಷನ್ ಥ್ರಿಲ್ಲಿಂಗ್ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ‘ವಾರ್’ ಮತ್ತು ‘ಭಾಗಿ-3’ ಚಿತ್ರಗಳ ಸಕ್ಸಸ್ ಬಳಿಕ ಮತ್ತೆ ಟೈಗರ್ ಶ್ರಾಫ್ ಅವರು ಆಕ್ಷನ್ ಸಿನಿಮಾ ಮಾಡುತ್ತಿರುವ ಸುದ್ದಿ ಅಭಿಮಾನಿಗಳನ್ನ ಥ್ರಿಲ್ ಗೊಳಿಸಿದೆ. ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಅಂದ್ಹಾಗೆ ಈ ಚಿತ್ರಕ್ಕೆ “ಗಣಪತ್” ಎಂದು ಟೈಟಲ್ ಇಡಲಾಗಿದೆ. ಅದ್ರಲ್ಲೂ ಇತ್ತೀಚಿಗಷ್ಟೆ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಮೋಷನ್ ಪೋಸ್ಟರ್ ನೋಡಿ ಫಿದಾ ಆಗಿದ್ದರು. ಇದೀಗ ಟೈಗರ್ ಶ್ರಾಫ್ ಅವರ ಫಸ್ಟ್ ಲುಕ್ ಸಹ ರಿಲೀಸ್ ಮಾಡಿ ಅಭಿಮಾನಿಗಳ ಕಾತರತೆಯನ್ನ ಹೆಚ್ಚಿಸಿದೆ ಸಿನಿಮಾತಂಡ. ಟೈಗರ್ ಶ್ರಾಫ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿತ್ರದ ಫಸ್ಟ್ ಲುಕ್ ಸಹ ಹಂಚಿಕೊಂಡಿದ್ದು , ನೆಟ್ಟಿಗರು ಲೈಕ್ಸ್ ಕಮೆಂಟ್ ಗಳನ್ನ ಮಾಡಿ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ವಿಕಾಸ್ ಭಾಲ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ವಾಶು ಭಗ್ನಾನಿ, ವಿಕಾಸ್ ಭಾಲ್, ದೀಪ್ಶಿಖಾ ದೇಶ್ಮುಖ್ ಮತ್ತು ಜಾಕಿ ಭಗ್ನಾನಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ವಿಕಾಸ್ ಅವರು ಸಹ ಫಸ್ಟ್ ಲುಕ್ ಹಂಚಿಕೊಂಡು ”ನಾನು ನೋಡಿದ ಅತ್ಯುತ್ತಮ ಆಕ್ಷನ್ ಹೀರೋ ಜೊತೆ ನಾನು ಸಿನಿಮಾ ಮಾಡುತ್ತಿದ್ದೇನೆ. ಹಿಂದೆಂದೂ ನೋಡದ ರೀತಿ ಟೈಗರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
tiger shraf