ಹುಲಿ ಬಾಲ ತಿವಿಯಲು ಹೋಗಿ ಸಾವನ್ನಪ್ಪಿದ ಯುವಕ….
ಮಂಗನಿಂದ ಮಾನವ ಎಂದು ಆಗಾಗ ಹೇಳುತ್ತಿರುತ್ತೇವೆ. ಮಧ್ಯಪ್ರದೇಶದಲ್ಲಿ ಯವಕನೊಬ್ಬ ಇಂಥದೇ ಕಿತಾಪತಿ ಮಾಡಿ ಹುಲಿಯಿಂದ ಗಾಯಗೊಂಡು ಸಾವನ್ನಪ್ಪಿದ್ದಾನೆ. ಸಾಮಾನ್ಯವಾಗಿ ಕಡುಪ್ರಾಣಿಗಳು ಹಸಿವಾದಾಗ ಅಷ್ಟೇ ಭೇಟೆಯಾಡುತ್ತವೆ. ಹಸಿವಿಲ್ಲದಿದ್ದರೇ ಬೇಟೆ ಮುಂದೆ ಇದ್ದರೂ ಸುಮ್ಮನಿರುತ್ತವೆ. ಆಗಂತ ಕೆಣಕಿದರೆ ಸುಮ್ಮನೆ ಬಿಡುವುದಿಲ್ಲ.
ಮಧ್ಯಪ್ರದೇಶದ ಹಳ್ಳಿಯೊಂದಕ್ಕೆ ದಾರಿತಪ್ಪಿಬಂದ ಹುಲಿಯನ್ನ ಓಡಿಸಲು ಗ್ರಾಮಸ್ಥರ ಗುಂಪೊಂದು ಹುಲಿಯನ್ನ ಬೆನ್ನಟ್ಟಲು ಹೋದಾಗ ರೈತನೊಬ್ಬ ಹುಲಿಯ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಹುಲಿಯೊಂದು ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಯವಲ್ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಕಾಡಂಚಿನ ಗ್ರಾಮವಾದ ಖುಶಿಯಾಲಿ ಗೆ ಬಂದಿತ್ತು.
ಹುಲಿ ಆಗಷ್ಟೆ ಬೇಟೆಯಾಡಿದ್ದರಿಂದ ಕೃಷಿ ಬೆಳೆಗಳ ನಡುವೆ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಈ ಸಮಯದಲ್ಲಿ ಹುಡುಗರ ಗುಂಪು ದೊಣ್ಣೆ ಹಿಡದುಕೊಂಡು ಹುಲಿಯನ್ನ ಓಡಿಸಲು ಯತ್ನಿಸಿದ್ದಾರೆ. ಹುಲಿ ಸ್ವಲ್ಪ ದೂರದ ವರೆಗೂ ಓಡಿ ಮತ್ತೆ ಬೆಳೆಗಳ ನಡುವೆ ವಿಶ್ರಾಂತಿ ತೆಗೆದುಕೊಳ್ಳಲು ಮುಂದಾಗಿದೆ. ಈ ವೇಳೆ 35 ವರ್ಷದ ಯುವಕನೊಬ್ಬ ಹುಲಿಯ ಬಾಲಕ್ಕೆ ಕೋಲಿನಿಂದ ತಿವಿಯುವು ಚುಚ್ಚುವುದು ಮಾಡಿದ್ದಾನೆ. ಗಾಯಗೊಂಡ ಹುಲಿ ತಕ್ಷಣವೆ ತಿರುಗಿ ಬೃಹತ್ ಉಗುರುಗಳಿಂದ ಅವನ ಕುತ್ತಿಗೆಯನ್ನ ಗಂಭೀರವಾಗಿ ಗಾಯಗೊಳಿಸಿದೆ. ತೀವ್ರ ರಕ್ತ ಸ್ರಾವದಿಂದಾಗಿ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ನಡುವೆ ಹುಲಿ ಕಣ್ಮರೆಯಾಗಿದ್ದು ಅರಣ್ಯಾಧಿಕಾರಿಗಳು ಹುಲಿಯ ಚಲನವಲನದ ಮೇಲೆ ನಿಗಾ ಇಟ್ಟು ಪತ್ತೆ ಹಚ್ಚಲು ಮುಂದಾಗಿದ್ದಾರೆ.
Tiger Tail: A young man died after hitting a tiger tail.