ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ

1 min read
Tihar jail inmate swallows mobile phone thihar jail saaksha tv

ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ

ದೆಹಲಿಯ ತಿಹಾರ್ ಜೈಲಿನಲ್ಲಿ ಘಟನೆ

ಕೈದಿಯ ಹೊಟ್ಟೆಯಲ್ಲಿಯೇ ಇರುವ ಮೊಬೈಲ್ ಫೋನ್

 ನವದೆಹಲಿ : ತಿಹಾರ್ ಜೈಲಿನಲ್ಲಿ ಕೈದಿಯೊಬ್ಬ ಅಧಿಕಾರಿಗಳ ಕಣ್ಣತಪ್ಪಿಸಲು ಮೊಬೈಲ್ ನುಂಗಿದ್ದಾನೆ.

ಜನವರಿ 5 ರಂದು ಜೈಲ್ ನಂಬರ್ 1ಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುವಾಗ ಕೈದಿ ಮೊಬೈಲ್ ನುಂಗಿದ್ದಾನೆ.

ಕೂಡಲೇ ಆತನನ್ನು ಡಿಡಿಯು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Tihar jail inmate swallows mobile phone thihar jail  saaksha tv

ಸದ್ಯ ಆತ ಆರೋಗ್ಯವಾಗಿದ್ದು, ಮೊಬೈಲ್ ಇನ್ನೂ ಹೊಟ್ಟೆಯಲ್ಲಿಯೇ ಇದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಘಟನೆಯಿಂದ ಜಾಗೃತರಾಗಿರುವ ಪೊಲೀಸ್ ಅಧಿಕಾರಿಗಳು, ತಿಹಾರ್ ಜೈಲಿನಲ್ಲಿ ಶೀಘ್ರದಲ್ಲೇ ಎರಡು ಎಕ್ಸ್-ರೇ ಆಧಾರಿತ ಮಾನವ ದೇಹ ಸ್ಕ್ಯಾನರ್‌ಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ. 

ಅಲ್ಲದೇ ಮೊಬೈಲ್ ಬಳಕೆಯನ್ನು ತಡೆಯಲು ಹೊಸ ತಂತ್ರಜ್ಞಾನ ಮತ್ತು ಸಿಗ್ನಲ್ ನಿರ್ಬಂಧಿಸುವ ಟವರ್‌ಗಳನ್ನು ಹಾಕಲು ಮುಂದಾಗಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd