ಟಿಕ್ ಟಾಕ್ ಸೇರಿ ಚೀನಾದ ಕೆಲ ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ..!
ಭಾರತ ಸರ್ಕಾರವು ಟಿಕ್ ಟಾಕ್ ಮತ್ತು ಇತರ ಚೀನೀ ಅಪ್ಲಿಕೇಷನ್ ಗಳನ್ನ ಈಗಾಗಲೇ ಬ್ಯಾನ್ ಮಾಡುವ ಮೂಲಕ ಚೀನಾದ ವಿರುದ್ಧ ಆರ್ಥಿಕ ಸಮರ ಸಾರಿದೆ ಇದೀಗ ಇದರ ಬೆನ್ನಲ್ಲೇ ಚೀನಾಗೆ ಮತ್ತೊಂದು ಬಿಗ್ ಶಾಕ್ ಆಗಿದೆ. ಅದೇನೆಂದ್ರೆ ಮಧ್ಯಂತರವಾಗಿ ಈ ಅಪ್ಲಿಕೇಷನ್ ಗಳ ಮೇಲೆ ಹಾಕಿದ್ದ ನಿಷೇಧವು ಈಗ ಶಾಶ್ವತ ಮಾಡಲಾಗುತ್ತಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.
ಟ್ರಂಪ್ ಸರ್ಕಾರದ ಮತ್ತೊಂದು ಆದೇಶ ಹಿಂಪಡೆದ ಜೋ ಬೈಡನ್
ನಿಷೇಧಿತ ಆಪ್ ಗಳ ಪಟ್ಟಿಯನ್ನು ಭಾರತೀಯ ಸರ್ಕಾರ ಮೊದಲು ಬಿಡುಅಗಡೆ ಮಾಡಿದ್ದು ಜೂನ್ 29, 2020ರಲ್ಲಿ. ಅದರಲ್ಲಿ ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಶೀನ್, ಲೈಕಿ ಮತ್ತು ಕ್ಯಾಮ್ ಸ್ಕ್ಯಾನರ್ ಸೇರಿ 59 ಅಪ್ಲಿಕೇಷನ್ ಹೆಸರುಗಳಿದ್ದವು.
ಲಿಫ್ಟ್ ಕೊಡುವ ನೆಪದಲ್ಲಿ ಯುವತಿಯ ಸಹೋದ್ಯೋಗಿಗಳಿಂದಲೇ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ
ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆ, ರಕ್ಷಣಾ ವ್ಯವಸ್ಥೆ, ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಆತಂಕವೊಡ್ಡುವುದರಿಂದ ಅವುಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 69A ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿತ್ತು. ನಿಷೇಧಿತ ಆಪ್ ಗಳ ಎರಡನೇ ಪಟ್ಟಿ ಸೆಪ್ಟೆಂಬರ್ 5ನೇ ತಾರೀಕು ಬಂದಿತ್ತು. ಆಗ 188 ಅಪ್ಲಿಕೇಷನ್, ಮೂರನೇ ಪಟ್ಟಿ ನವೆಂಬರ್ 24ನೇ ತಾರೀಕಿನಂದು ಬಿಡುಗಡೆ ಮಾಡಿ, 43 ಆಪ್ ಗಳನ್ನು ನಿಷೇಧಿಸಲಾಯಿತು. ಇದೀಗ ಟಿಕ್ ಟಾಪ್ ಸೇರಿದಂತೆ ಕೆಲ ಾಪ್ ಗಳ ಮೇಲೆ ವಿಧಿಸಲಾಗಿರುವ ಮಧ್ಯಂತರ ನಿಷೇಧವನ್ನ ಶಾಶ್ವತಾವಗಿಸಲು ಮುಂದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel