ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

‘ರೊಮ್ಯಾನ್ಸ್ ಸ್ಕ್ಯಾಮ್’ ಬಗ್ಗೆ ಇರಲಿ ಎಚ್ಚರ: ಡೇಟಿಂಗ್ ಆ್ಯಪ್‌ ವಂಚನೆ ತಡೆಯಲು ಕೇಂದ್ರದ ಜೊತೆ ಕೈ ಜೋಡಿಸಿದ ಟಿಂಡರ್

admin by admin
October 26, 2026
in National, Newsbeat, ದೇಶ - ವಿದೇಶ
tinder-match-group-india-cybercrime-romance-scam-awareness

tinder-match-group-india-cybercrime-romance-scam-awareness

Share on FacebookShare on TwitterShare on WhatsappShare on Telegram

ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಮೂಲಕ ನಡೆಯುವ ವಂಚನೆಗಳನ್ನು (ರೊಮ್ಯಾನ್ಸ್ ಸ್ಕ್ಯಾಮ್) ತಡೆಗಟ್ಟಲು ಕೇಂದ್ರ ಗೃಹ ಸಚಿವಾಲಯದ ಅಡಿ ಬರುವ ‘ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರ’ (I4C) ಹಾಗೂ ಪ್ರಮುಖ ಡೇಟಿಂಗ್ ಆ್ಯಪ್‌ಗಳ ಮಾತೃಸಂಸ್ಥೆಯಾದ ‘ಮ್ಯಾಚ್ ಗ್ರೂಪ್’ ಜಂಟಿ ಅಭಿಯಾನವನ್ನು ಆರಂಭಿಸಿವೆ.

ನವದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ‘ಟ್ರಸ್ಟ್ ಅಂಡ್ ಸೇಫ್ಟಿ ಫೆಸ್ಟಿವಲ್’ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ. ಟಿಂಡರ್, ಹಿಂಜ್ ಮತ್ತು ದ ಲೀಗ್‌ನಂತಹ ಜನಪ್ರಿಯ ಆ್ಯಪ್‌ಗಳನ್ನು ಮುನ್ನಡೆಸುತ್ತಿರುವ ಮ್ಯಾಚ್ ಗ್ರೂಪ್, ಈ ಒಪ್ಪಂದದ ಮೂಲಕ ಆನ್‌ಲೈನ್ ವಂಚಕರ ತಂತ್ರಗಳನ್ನು ಗುರುತಿಸುವುದು ಮತ್ತು ದೂರು ನೀಡುವ ವಿಧಾನಗಳ ಬಗ್ಗೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲಿದೆ.

Related posts

akasa-air-cafe-akasa-new-menu-chicken-pulimunchi-sushi-filter-coffee

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

October 26, 2026
akasa-air-200-daily-flights-bengaluru-network-expansion

ಆಗಸದಲ್ಲಿ ‘ಆಕಾಸ ಏರ್’ ಹೊಸ ಮೈಲಿಗಲ್ಲು: ನಿತ್ಯ 200 ವಿಮಾನಗಳ ಹಾರಾಟ, ಬೆಂಗಳೂರಿನಿಂದ ಹೆಚ್ಚಾಯ್ತು ಸೇವೆ

October 26, 2026

ಬಳಕೆದಾರರು ವಹಿಸಬೇಕಾದ ಎಚ್ಚರಿಕೆಗಳೇನು?

ವಂಚಕರು ಸಾಮಾನ್ಯವಾಗಿ ನಂಬಿಕೆ ಗಳಿಸಿದ ನಂತರವೇ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ. ಇದನ್ನು ತಪ್ಪಿಸಲು ಕೆಲವು ಪ್ರಮುಖ ಎಚ್ಚರಿಕೆಗಳನ್ನು ವಹಿಸುವಂತೆ ಈ ಅಭಿಯಾನದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಗಳು ತಕ್ಷಣವೇ ವಾಟ್ಸಾಪ್ ಅಥವಾ ಇತರ ಮೆಸೇಜಿಂಗ್ ಆ್ಯಪ್‌ಗಳಿಗೆ ಬರಲು ಒತ್ತಾಯಿಸಿದರೆ ಹಾಗೂ ವಿಡಿಯೋ ಕರೆ ಮಾಡಲು ಅಥವಾ ನೇರವಾಗಿ ಭೇಟಿಯಾಗಲು ನಿರಾಕರಿಸಿದರೆ ಎಚ್ಚರವಹಿಸಬೇಕು.

ಎದುರಿಗಿರುವ ವ್ಯಕ್ತಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಪ್ರೊಫೈಲ್ ವೆರಿಫಿಕೇಶನ್ ನೋಡುವುದು ಹಾಗೂ ವಿಡಿಯೋ ಕರೆ ಮಾಡುವುದು ಸೂಕ್ತ. ಆನ್‌ಲೈನ್‌ನಲ್ಲಿ ಪರಿಚಯವಾದ ಹೊಸ ವ್ಯಕ್ತಿಗಳು ಕ್ರಿಪ್ಟೋಕರೆನ್ಸಿ ಅಥವಾ ಹೂಡಿಕೆಯ ಬಗ್ಗೆ ಸಲಹೆ ನೀಡಿದರೆ, ಅಧಿಕ ಲಾಭದ ಆಸೆ ತೋರಿಸಿದರೆ ಅದನ್ನು ಕಡೆಗಣಿಸಬೇಕು.

ಇದರ ಜೊತೆಗೆ, ವೀಸಾ ಶುಲ್ಕ, ವೈದ್ಯಕೀಯ ಖರ್ಚು ಅಥವಾ ಪ್ರಯಾಣದ ನೆಪವೊಡ್ಡಿ ಹಣ ಕೇಳಿದರೆ ಯಾವುದೇ ಕಾರಣಕ್ಕೂ ಹಣ ಅಥವಾ ಗಿಫ್ಟ್ ಕಾರ್ಡ್‌ಗಳನ್ನು ಕಳುಹಿಸಬಾರದು. ವಂಚಕರು ವಾರಗಳು ಅಥವಾ ತಿಂಗಳುಗಳ ಕಾಲ ನಂಬಿಕೆ ಗಳಿಸಿ ನಂತರ ಹಣದ ಬೇಡಿಕೆ ಇಡಬಹುದು. ಹೀಗಾಗಿ ಹೊಸ ಪರಿಚಯವನ್ನು ನಂಬಲು ಸಾಕಷ್ಟು ಸಮಯ ತೆಗೆದುಕೊಳ್ಳಬೇಕು ಮತ್ತು ಆತುರಪಡಬಾರದು ಎಂದು ಎಚ್ಚರಿಸಲಾಗಿದೆ.

ಆ್ಯಪ್‌ಗಳಲ್ಲಿ ಹೊಸ ಸುರಕ್ಷತಾ ಫೀಚರ್‌ಗಳ ಅಳವಡಿಕೆ

ಬಳಕೆದಾರರ ಸುರಕ್ಷತೆಗಾಗಿ ಡೇಟಿಂಗ್ ಆ್ಯಪ್‌ಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಟಿಂಡರ್ ಆ್ಯಪ್‌ನಲ್ಲಿ ನಕಲಿ ಖಾತೆಗಳನ್ನು ತಡೆಯಲು ಫೇಸ್ ಚೆಕ್ ಮತ್ತು ಫೋಟೋ ವೆರಿಫಿಕೇಶನ್ ಸೌಲಭ್ಯಗಳಿವೆ. ಆಕ್ಷೇಪಾರ್ಹ ಸಂದೇಶಗಳು ಬಂದಾಗ ಎಚ್ಚರಿಸುವ ಫೀಚರ್‌ಗಳ ಜೊತೆಗೆ, ಕಿರುಕುಳ ನೀಡುವವರನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡುವ ಆಯ್ಕೆಯೂ ಇದೆ.

ಡೇಟ್‌ಗೆ ಹೋಗುವಾಗ ಸ್ಥಳದ ಮಾಹಿತಿಯನ್ನು ಆಪ್ತರೊಂದಿಗೆ ಹಂಚಿಕೊಳ್ಳಲು ಶೇರ್ ಮೈ ಡೇಟ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದೇ ರೀತಿ ಹಿಂಜ್ ಆ್ಯಪ್ ಕೂಡ ಬಳಕೆದಾರರ ಸುರಕ್ಷತೆಗಾಗಿ ಸ್ಕ್ರೀನ್‌ಶಾಟ್ ನಿರ್ಬಂಧ, ನೈಜ ವ್ಯಕ್ತಿಗಳ ಪರಿಶೀಲನೆಗೆ ಫೇಸ್ ಚೆಕ್ ಮತ್ತು ಹೊಸ ಬಳಕೆದಾರರಿಗೆ ವೇಟ್‌ಲಿಸ್ಟ್‌ನಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಪರಿಚಯಿಸಿದೆ.

ಇದರೊಂದಿಗೆ ಆನ್‌ಲೈನ್ ಡೇಟಿಂಗ್ ಕುರಿತು ಅರಿವು ಮೂಡಿಸಲು ಸ್ಥಳೀಯ ಭಾಷೆಗಳಲ್ಲಿ ಸುರಕ್ಷತಾ ಮಾರ್ಗದರ್ಶಿಗಳನ್ನು ಸಹ ರೂಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಫೋರ್‌ಸಿ (I4C) ನಿರ್ದೇಶಕ ನಿಶಾಂತ್ ಕುಮಾರ್, “ಆನ್‌ಲೈನ್‌ನಲ್ಲಿ ನಂಬಿಕೆಯ ಜೊತೆಗೆ ಎಚ್ಚರಿಕೆಯೂ ಇರಬೇಕು,” ಎಂದು ಹೇಳಿದ್ದಾರೆ. ವಂಚಕರು ನಕಲಿ ಖಾತೆಗಳನ್ನು ಸೃಷ್ಟಿಸಿ ಭಾವನೆಗಳೊಂದಿಗೆ ಆಟವಾಡುತ್ತಾರೆ ಮತ್ತು ತುರ್ತಾಗಿ ಹಣ ವರ್ಗಾವಣೆ ಮಾಡುವಂತೆ ಪ್ರೇರೇಪಿಸುತ್ತಾರೆ. ಸಾರ್ವಜನಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

“ಆನ್‌ಲೈನ್ ವಂಚನೆಗಳನ್ನು ತಡೆಯಲು ತಂತ್ರಜ್ಞಾನ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಜಾಗತಿಕ ಸಹಕಾರ ಅಗತ್ಯವಾಗಿದೆ. ಕೇಂದ್ರ ಸರ್ಕಾರದ ಜೊತೆಗಿನ ಈ ಒಪ್ಪಂದವು ಭಾರತದಲ್ಲಿ ಸುರಕ್ಷಿತ ಆನ್‌ಲೈನ್ ಡೇಟಿಂಗ್ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡಲಿದೆ,” ಎಂದು ಮ್ಯಾಚ್ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಯೋಯೆಲ್ ರೋತ್ ಅಭಿಪ್ರಾಯಪಟ್ಟಿದ್ದಾರೆ.

ವಂಚನೆಗೊಳಗಾದರೆ ದೂರು ನೀಡುವುದು ಹೇಗೆ?

ಆನ್‌ಲೈನ್ ಡೇಟಿಂಗ್ ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೊಳಗಾದರೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ನೀಡಬಹುದು. ಅಥವಾ cybercrime.gov.in ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು.

ಸೈಬರ್ ಸುರಕ್ಷತೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಇನ್‌ಸ್ಟಾಗ್ರಾಮ್‌ನಲ್ಲಿ ಕೇಂದ್ರ ಸರ್ಕಾರದ ಅಧಿಕೃತ @CyberDostI4C ಖಾತೆಯನ್ನು ಫಾಲೋ ಮಾಡಬಹುದಾಗಿದೆ.

ShareTweetSendShare
Join us on:

Related Posts

akasa-air-cafe-akasa-new-menu-chicken-pulimunchi-sushi-filter-coffee

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ, ಫಿಲ್ಟರ್ ಕಾಫಿಯ ಘಮ! ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

by admin
October 26, 2026
0

ವಿಮಾನ ಪ್ರಯಾಣದ ವೇಳೆ ಊಟದ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್, ತನ್ನ 'ಕೆಫೆ ಆಕಾಶ'ದ ಅಡಿಯಲ್ಲಿ ಹೊಸ ಊಟದ ಮೆನುವನ್ನು ಪರಿಚಯಿಸಿದೆ....

akasa-air-200-daily-flights-bengaluru-network-expansion

ಆಗಸದಲ್ಲಿ ‘ಆಕಾಸ ಏರ್’ ಹೊಸ ಮೈಲಿಗಲ್ಲು: ನಿತ್ಯ 200 ವಿಮಾನಗಳ ಹಾರಾಟ, ಬೆಂಗಳೂರಿನಿಂದ ಹೆಚ್ಚಾಯ್ತು ಸೇವೆ

by admin
October 26, 2026
0

ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ಆಕಾಸ ಏರ್ ತನ್ನ ಸೇವೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಇದೀಗ ಪ್ರತಿದಿನ 200ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು,...

ಚಾಕಲೇಟ್‌ನಲ್ಲಿ ಶೃಂಗಾರ, ಹಾಸ್ಯ, ರೌದ್ರ… ಫೆಬೆಲ್‌ನಿಂದ ‘ನವರಸ’ಗಳ ಅದ್ಭುತ ಕಲೆಕ್ಷನ್ ಬಿಡುಗಡೆ! ದರ ಎಷ್ಟು?

ಚಾಕಲೇಟ್‌ನಲ್ಲಿ ಶೃಂಗಾರ, ಹಾಸ್ಯ, ರೌದ್ರ… ಫೆಬೆಲ್‌ನಿಂದ ‘ನವರಸ’ಗಳ ಅದ್ಭುತ ಕಲೆಕ್ಷನ್ ಬಿಡುಗಡೆ! ದರ ಎಷ್ಟು?

by admin
October 26, 2026
0

ಶತಮಾನಗಳಿಂದ ಕೇವಲ ಸಂಗೀತ, ನೃತ್ಯ, ನಾಟಕ ಮತ್ತು ಕಲೆಗಳ ಮೂಲಕ ಮಾತ್ರ ವ್ಯಕ್ತವಾಗುತ್ತಿದ್ದ ನವರಸಗಳನ್ನು ಈಗ ರುಚಿಯ ಮೂಲಕವೂ ಸವಿಯಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಖ್ಯಾತ...

jawa-yezdi-bsa-original-spare-parts-distribution-network-india

ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಶೋರೂಮ್‌ ಹೊರಗೂ ಸುಲಭವಾಗಿ ಸಿಗಲಿವೆ ಒರಿಜಿನಲ್ ಪಾರ್ಟ್ಸ್!

by admin
October 26, 2026
0

ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್‌ಗಳನ್ನು ಓಡಿಸುವುದು ಎಂದರೆ ಅದೊಂದು ಹೆಮ್ಮೆಯ ವಿಷಯ. ಈ ಕ್ಲಾಸಿಕ್ ಬೈಕ್‌ಗಳೆಂದರೆ ಯುವಕರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಬೈಕ್...

ದೀಪಾವಳಿ ಶಾಪಿಂಗ್, ರುಚಿಯಾದ ಖಾದ್ಯ, ಲೈವ್ ಮ್ಯೂಸಿಕ್: ‘ಸಂಡೆ ಸೋಲ್ ಸಂತೆ’ಗೆ ಮನಸೋತ ಬೆಂಗಳೂರಿಗರು

ದೀಪಾವಳಿ ಶಾಪಿಂಗ್, ರುಚಿಯಾದ ಖಾದ್ಯ, ಲೈವ್ ಮ್ಯೂಸಿಕ್: ‘ಸಂಡೆ ಸೋಲ್ ಸಂತೆ’ಗೆ ಮನಸೋತ ಬೆಂಗಳೂರಿಗರು

by admin
October 26, 2026
0

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಬೆಳ್ಳಂದೂರಿನ ಇಕೋವರ್ಲ್ಡ್‌ ಆವರಣದ 'ದ ಬೇ'ನಲ್ಲಿ ಅಕ್ಟೋಬರ್ 25ರಂದು ಆಯೋಜಿಸಲಾಗಿದ್ದ 'ಸಂಡೆ ಸೋಲ್ ಸಂತೆ' ಮೇಳದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram