ಪ್ರತ್ಯೇಕ ಅಪಘಾತ, ಬೈಕಿಗೆ ಟಿಪ್ಪರ್, ಬಸ್ ಡಿಕ್ಕಿ: ಇಬ್ಬರು ಸವಾರ ಸಾವು
1 min read
ಮಡಿಕೇರಿ: ಕೊಡ್ಲಿಪೇಟೆ-ಸಕಲೇಶಪುರ ನಡುವಿನ ಮಸೀದಿ ರಸ್ತೆಯಲ್ಲಿ ಟಿಪ್ಪರ್ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕ್ಯಾತೆ ಗ್ರಾಮದ ಶಿವಣ್ಣ(65) ಸಾವನಪ್ಪಿದ್ದಾರೆ.
ಕೊಡ್ಲಿಪೇಟೆ ಪಟ್ಟಣ ಪ್ರದೇಶವಾದ ಕಾರಣ ನಿಧಾನವಾಗಿ ಚಲಿಸುತ್ತಿದ್ದ ಬೈಕಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಸವಾರ ಶಿವಣ್ಣನ ತಲೆ ಮೇಲೆ ಲಾರಿ ಚಕ್ರ ಹರಿದು ಗುರುತು ಸಿಗದ ರೀತಿಯಲ್ಲಿ ದೇಹ ಸಂಪೂರ್ಣ ಅಪ್ಪಚ್ಚಿಯಾಗಿತ್ತು.
ಅಪಘಾತದ ನಂತರ ಟಿಪ್ಪರ್ ಸಮೇತ ಲಾರಿ ಚಾಲಕ ಪರಾರಿಯಾಗಿದ್ದು, ಕೊಡ್ಲಿಪೇಟೆ ಪೋಲಿಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಮಡಿಕೇರಿ-ತಾಳತಮನೆ ಮಾರ್ಗ ಮಧ್ಯೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಸ್ಥಳೀಯ ನಿವಾಸಿ ದಯಾನಂದ್ ಎಂಬುವರ ಪುತ್ರ ಕೀರ್ತನ್ ಮೃತಪಟ್ಟಿದ್ದಾನೆ. ಗಾಯಾಳುವನ್ನು ತಕ್ಷಣ ಮಡಿಕೇರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸುವ ಮಾರ್ಗ ಮಧ್ಯೆ ಕೀರ್ತನ್ ಅಸು ನೀಗಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel