ನೀರಿನ ಹೊಂಡಕ್ಕೆ ಟಿಪ್ಪರ್ ಲಾರಿಯೊಂದು ಮುಗುಚಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಡುಪಿಯ ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನಲ್ಲಿ ನಡೆದಿದೆ. ಇಂದು ಸಂಜೆ ವೇಳೆಗೆ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಕಾರ್ಕಳ ಗಣಿತನಗರದ ನಿವಾಸಿಯಾಗಿದ್ದ ಚಾಲಕ (40) ಅರುಣ್ ಕುಮಾರ್ , ಲಾರಿಯಲ್ಲಿದ್ದ ಮತ್ತೋರ್ವ (18) ತರುಣ್ ಕಿಶೋರ್ ಎಂಬುವವರು ಮೃತಪಟ್ಟಿದ್ದಾರೆ. ಮಣ್ಣು ಲೋಡ್ ಮಾಡಿ ತರಲು ಹೊರಟಿದ್ದ ಲಾರಿ ನಿಂಜೂರು ಗ್ರಾಮದ ಬಳಿ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ನೀರು ತುಂಬಿದ್ದ ಹೊಂಡಕ್ಕೆ ಪಲ್ಟಿಯಾಗಿದೆ. ಇನ್ನೂ ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಲೋಳೆರಸಗಿಡ ವನ್ನು ಮನೆಯಲ್ಲಿ ಕಟ್ಟಿದರೆ ಐಶ್ವರ್ಯ ಸಿದ್ಧಿಸುವುದು ಖಚಿತ
"ಈ ಅಲೋವೆರಾದ ಒಂದು ಎಲೆಯನ್ನು ತೆಗೆದುಕೊಂಡು ಪೂಜೆಯನ್ನು ಮಾಡಿದ್ದೇ ಆದಲ್ಲಿ, ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯ ಅನ್ನೋದು ಪ್ರಾಪ್ತಿಯಾಗುತ್ತೆ. ಇದನ್ನ ಲೋಳಸರದ ಗಿಡ ಅಂತಾನೂ ಕೂಡ ಕನ್ನಡದಲ್ಲಿ...








