ಭೂಮಿಯ ಮೇಲೆ ಒಂದು ಕಾಲದಲ್ಲಿ ಬದುಕಿದ್ದವೆನ್ನಲಾದ ರಾಕ್ಷಸಾಕಾರದ ದೈತ್ಯ ಉರುಗ ‘ಟಿಟ್ಯಾನೋಬೋವಾ !’ Saakshatv vishwa vismaya episode2
(The giant snake Titanoboa) :
ದಕ್ಷಿಣ ಅಮೇರಿಕದ ಅನಾಕೊಂಡ ಎಂಬ ಹೆಸರಿನ ಪ್ರಾಣಿಭಕ್ಷಕ ಹಾವು ಸದ್ಯ ಭೂಮಿಯ ಮೇಲೆ ಬದುಕಿರುವ ಅತ್ಯಂತ ದೊಡ್ಡ ಸರೀಸೃಪ ಎನಿಸಿಕೊಂಡಿದೆ ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಇದು ಇಪ್ಪತ್ತರಿಂದ ಇಪ್ಪತ್ತೆರಡು ಅಡಿಯವರೆಗೂ ಬೆಳೆಯಬಲ್ಲುದು ಹಾಗೂ ತನ್ನ ದೇಹದ ಸುತ್ತಳತೆಗಿಂತ ದಪ್ಪವಾದ ಹಾಗೂ ತನಗಿಂತಲು ಭಾರವಾದ ಪ್ರಾಣಿಗಳನ್ನೂ ಸಹ ನುಂಗಿ ನೀರು ಕುಡಿಯಬಲ್ಲುದು. ಆದರೆ ಇದಕ್ಕಿಂತಲೂ ಎರಡು ಪಟ್ಟು ದೊಡ್ಡದಾದ ಹಾವೊಂದು ನಿಮ್ಮ ಕಣ್ಣೆದುರಲ್ಲಿ ಹರಿದಾಡಿದರೆ ! ಇದು ಫ್ಯಾಂಟಸಿ ಫಿಕ್ಷನ್ ಸಿನಿಮಾಗಳಲ್ಲಿ ಮಾತ್ರ ಸಾಧ್ಯ ಬಿಡಿ ಎಂದು ನೀವೆನ್ನಬಹುದು. ಆದರೆ ಇದು ಯಾವ್ದೊ ಸಿನಿಮಾದ ಕತೆಯಲ್ಲ. ಇಂಥ ಹಾವು ಹಿಂದೊಮ್ಮೆ ವಾಸ್ತವವಾಗಿಯೂ ಭೂಮಿಯ ಮೇಲೆ ವಾಸವಿತ್ತೆಂಬ ಸಂಗತಿ ನಿಮಗೆ ಗೊತ್ತೆ ? Saakshatv vishwa vismaya episode2

ಅನಾಕೊಂಡಕ್ಕಿಂತ ಎರಡು ಮೂರು ಪಟ್ಟು ದೊಡ್ಡದಾಗಿಯೂ ಅಗಲವಾಗಿಯೂ ಇದ್ದ ಆ ರಾಕ್ಷಸ ಹಾವಿನ ಹೆಸರು ಟಿಟ್ಯಾನೋಬೋವಾ ಎಂದು. 2009 ರಲ್ಲಿ ಪೆರುವಿನ ಕಾಡುಗಳಲ್ಲಿ ಇದರ ಪಳೆಯುಳಿಕೆ ಪತ್ತೆಯಾಯ್ತು. ಅಲ್ಲಿನ ಕೊಲಂಬಿಯಾದ ಲಾ ಗುವೆಜಿರಾದ ಕಲ್ಲಿದ್ದಲು ಗಣಿಯೊಂದರ ಬಯಲಲ್ಲಿ ಅಕಸ್ಮಾತ್ ಆಗಿ ಈ ದೈತ್ಯ ಹಾವಿನ ಪ್ರಪ್ರಾಚೀನ ಮೂಳೆ ಪತ್ತೆಯಾಗಿತ್ತು. ಇದಕ್ಕು ಮುನ್ನ ಪತ್ತೆಯಾಗಿದ್ದ ಜಿಜಾಂಟೋಫಿಸ್ ಎಂಬ ದೈತ್ಯ ಹಾವಿನ ಪಳೆಯುಳಿಕೆಯೆ ಭೂಮಿ ಮೇಲೆ ಬದುಕಿದ್ದ ಅತಿ ದೈತ್ಯ ಆಕಾರದ ಹಾವೆಂದು ಪರಿಗಣಿಸಲಾಗಿತ್ತು. ಆದರೆ ಟೈಟಾನೊಬೋವಾ ಇದಕ್ಕಿಂತಲು ದೊಡ್ಡದಾದ ಹಾವಾಗಿತ್ತು. ಜಿಜಾಂಟೊಫಿಸ್ ಹನ್ನೊಂದು ಮೀಟರ್ ಉದ್ದವಿದ್ದರೆ, ಟಿಟ್ಯಾನೊಬೋವಾ ಭರ್ತಿ ಹದಿಮೂರು ಮೀಟರ್ ಉದ್ದವಿದ್ದು ಬರೋಬ್ಬರಿ ಒಂದು ಸಾವಿರ ಕೇಜಿಗಿಂತ ತೂಕ ಉಳ್ಳದ್ದಾಗಿತ್ತು. ಅಂದರೆ ಒಂದು ಟನ್ ಗಿಂತಲು ಅಧಿಕ!!
ಈ ರಾಕ್ಷಸ ಹಾವಿನ ಹಿನ್ನೆಲೆಯ ಬಗ್ಗೆ ಅಧ್ಯಯನಕಾರರು ಆಸಕ್ತರಾದರು. ಅದರ ಕುರಿತಾದ ಸಂಶೋಧನೆ ಚುರುಕಾಯ್ತು. ಬನ್ನಿ ಈ ಟೈಟಾನೊಬೋವಾದ ಕುರಿತಾದ ಒಂದಷ್ಟು ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿಯೋಣ. ಇದು ಇಲ್ಲಿಂದ 58-61 ಮಿಲಿಯನ್ ವರ್ಷಗಳ ಹಿಂದೆ ದಕ್ಷಿಣ ಅಮೇರಿಕಾದ ಮಳೆಗಾಡುಗಳಲ್ಲಿ ಜೀವಿಸಿದ್ದ ಹಾವು. ಹತ್ತು ಮಿಲಿಯನ್ ವರ್ಷಗಳವರೆಗೆ ಈ ಭೂಮಿಯನ್ನಾಳಿದ ಮಹಾ ಗಾತ್ರದ ಸರೀಸೃಪ ಇದಾಗಿತ್ತು. ಇದು ಜೀವಿಸಿದ್ದ ಕಾಲವನ್ನ ಭೂಗರ್ಭತಙ್ಞರು ‘ಪ್ಲೆಯೋಸೀನ್ ಯುಗ’ ಎಂದು ಕರೆದರು. ಅಂದರೆ ಮಹೋರಗಗಳಾದ ಡೈನೋಸಾರ್ ಗಳು ಅದಾಗಲೇ ಭೂಮಿಯಿಂದ ಆಗಷ್ಟೆ ಅಂತರ್ಧಾನವಾಗಿ ಅವುಗಳ ಇತರೆ ಸಣ್ಣ ಗಾತ್ರದ ಕೆಲವೆ ಕೆಲ ವಂಶಸ್ಥರು ಬದುಕಿದ್ದವು. ಅವುಗಳ ಜತೆ ಈ ಟೈಟಾನೊಬೋವಾ ಸಹ ಜೀವಿಸಿತ್ತು.

ಇದರ ಸಹ ಜೀವಿಯಾಗಿದ್ದ ಪ್ಲೆಸಿಯೊಸಾರಸ್ ಎಂಬ ಡೈನೊದ ವಂಶಸ್ಥ ಜೀವಿಯೂ ಹಾಗೂ ಈಗಿನ ಮೊಸಳೆಯ ಸಂಬಂಧಿಯೂ ಆಗಿದ್ದ ಈ ಉಭಯಜೀವಿ ಹೆಚ್ಚೂ ಕಡಿಮೆ ಗಾತ್ರದಲ್ಲಿ ಟಿಟ್ಯಾನೊಬೊವಾದಷ್ಟೆ ಇದ್ದು ಹೆಚ್ಚಿನ ಸಮಯ ನೀರಲ್ಲೆ ವಾಸವಿರುತ್ತಿತ್ತು. ಈ ದೈತ್ಯ ಹಾವು 50 ಅಡಿಗಳವರೆಗು ಬೆಳೆಯಬಲ್ಲುದಾಗಿತ್ತು. ಇದರ ದೇಹದ ಸುತ್ತಳತೆ ಕೆಲವೆಡೆ ಮೂರಡಿಗಿಂತ ಅಗಲವಿತ್ತು. ಬಾಯಿಯ ಮೇಲೆ ಹಾಗೂ ಕೆಳಗೆ ಎರಡೂ ಕಡೆ ಚೂಪಾದ ಹಲ್ಲುಗಳ ಸಾಲುಗಳಿದ್ದವು. ಇದು ದ ಅಮೇರಿಕಾದ ಅಮೇಜಾನಿಯಾ ಪ್ರಾಂತ್ಯದ ತೇವಭರಿತ ಪ್ರದೇಶಗಳಲ್ಲಿ ವಾಸವಿದ್ದ ಹಾವು.
ಇದು ಶೀತ ರಕ್ತದ ಹಾವಾಗಿದ್ದರೂ ಸಹ ಆಗ ಭೂಮಿಯ ಮೇಲ್ಮೈ ಅತಿಯಾದ ಶಾಖದಿಂದ ಕೂಡಿದ್ದರಿಂದ ಒಣ ಹವೆಗೆ ಒಗ್ಗಿಕೊಂಡಿತ್ತು. ಆಗ ದ ಅಮೇರಿಕಾದಲ್ಲೆಲ್ಲು ಬಯಲು ಅಥವಾ ಹುಲ್ಲುಗಾವಲುಗಳಿರಲಿಲ್ಲ. ಆಗ ಇದ್ದದ್ದು ಹೆಚ್ಚಾಗಿ ರೈನ್ ಫಾರೆಸ್ಟ್ ಗಳು. ಇಲ್ಲಿ ಟಿಟ್ಯಾನೊಬೋವಾದ ಜತೆ ಜಿಜಾಂಟೊಫಿಸ್, ಪ್ಲೇಸಿಯೊಸಾರಸ್, ಲಾಚ್ನೆಸ್ ಮಾನ್ಸ್‌ಟರ್ (ನೆಸ್ಸಿ) ಮುಂತಾದ ಇತರೆ ದೈತ್ಯ ಜಲಚರಗಳೂ ಸಹ ವಾಸವಿದ್ದವು. ಟಿಟ್ಯಾನೊಬೋವಾ ಮಾಂಸ ಭಕ್ಷಕ ಹಾವಾಗಿದ್ದು ವಿಷರಹಿತವಾದ ಹಾವಾಗಿತ್ತು. ಈಗಿನ ಅನಕೊಂಡಾದಂತೆಯೇ ನೀರೊಳಗಿದ್ದು ಬೇಟೆಯನ್ನ ಹೊಂಚು ಹಾಕಿ ಹಿಡಿದು ಉಸಿರುಗಟ್ಟಿಸಿ ಇಲ್ಲವೆ ಸುರುಳಿ ಸುತ್ತಿ ಅದರ ಮೈ ಹಿಂಡಿ ಇಡಿಯಾಗಿ ನುಂಗುತ್ತಿತ್ತು.
ಇದು ಹಲವು ವೇಳೆ ಪ್ಲೇಸಿಯೊಸಾರಸ್ ಹಾಗೂ ಲಾಚ್ನೆಸ್ ನಂತಹ ದೈತ್ಯ ಜಲಚರಗಳನ್ನೇ ನುಂಗಿ ನೀರು ಕುಡಿಯುತ್ತಿತ್ತಂತೆ. ಆಗ ಸಣ್ಣ ಸೈಜಿನ ಡೈನೊಗಳನ್ನೇ ದಾಳಿ ಮಾಡಬಲ್ಲ ಗ್ಯಾಲೊಪಿಂಗ್ ಮೊಸಳೆಗಳೂ ಸಹ ವಾಸವಿದ್ದವು. ಈ ದೈತ್ಯ ಮೊಸಳೆಗಳನ್ನೂ ಸಹ ಟಿಟ್ಯಾನೊಬೋವಾ ಬೇಟೆಯಾಡುತ್ತಿತ್ತು. ಈಗಿನ ಪೂರ್ಣ ಬೆಳೆದ ಎರಡು ಆಫ್ರಿಕನ್ ಜಿರಾಫೆಗಳನ್ನ ಒಂದರ ಮೇಲೊಂದು ನಿಲ್ಲಿಸಿದರೂ ಅದರ ಎತ್ತರಕ್ಕಿಂತಲು ಟಿಟ್ಯಾನೊಬೋವಾದ ಗಾತ್ರವೆ ಎತ್ತರವಿರುತ್ತಿತ್ತೆಂದರೆ ಇದರ ಬ್ರಹ್ಮಗಾತ್ರದ ಬಗ್ಗೆ ನೀವೇ ಊಹಿಸಿ. ಈಗಿನ ದೈತ್ಯ ಹಾವಾದ ಅನಕೊಂಡವೇ ಇದರ ಮುಂದೆ ಸಣ್ಣ ಕೆರೆಹಾವಿನಂತೆ ಕಾಣುತ್ತಿತ್ತು. ದೈತ್ಯ ಗಾತ್ರದ ಆಮೆಗಳೂ ಸಹ ಆಗ ನೀರಲ್ಲಿ ವಾಸವಿದ್ದು, ಟಿಟ್ಯಾನೊಬೋವಾದ ಜತೆಯೇ ಪ್ರಕೃತಿಯನ್ನ ಹಂಚಿಕೊಂಡಿದ್ದವು.
ಒಣ ಹವೆಯಲ್ಲಿ ಇಂಥ ಶೀತ ರಕ್ತದ ಸರೀಸೃಪಗಳ ದೈಹಿಕ ಬೆಳವಣಿಗೆಯ ವೇಗ ಬಿರುಸಾಗಿರುತ್ತದೆ. ಅವು ಶೀತಹವೆಯಲ್ಲಿ ವಾಸಿಸುವ ಜೀವಿಗಳಿಗಿಂತ ವೇಗವಾಗಿ ದೈಹಿಕ ಗಾತ್ರ ಪಡೆಯುತ್ತಾ ಬೆಳೆಯುತ್ತವೆ. ಅಲ್ಲದೆ ಆಗ ಈ ದೈತ್ಯ ಹಾವಿನ ವೆಜಿಟೇಷನ್ ನ ಪ್ರಮಾಣವೂ ಅತ್ಯಧಿಕವಾಗಿದ್ದು ನೀರಲ್ಲಿ ವಿಕಾಸವಾಗಿದ್ದ ಜಲಚರಗಳ ಸಂಖ್ಯೆ ಅದರ ಆಹಾರದ ಡಯೆಟ್ ಗೆ ಸರಿ ಹೊಂದುವಂತಿತ್ತು. ನೀರಲ್ಲಿರುವ ಮೀನುಗಳೆ ಅದಕ್ಕೆ ಸ್ವಾದಿಷ್ಟ ಆಹಾರವಾಗಿದ್ದವು. ಅದು ಒಂದೆ ಸಿಟ್ಟಿಂಗ್ ಗೆ ಅದರ ದೇಹ ತೂಕದ ಅರ್ಧದಷ್ಟು ತೂಕವುಳ್ಳ ಆಹಾರವನ್ನ ಸೇವಿಸಿ ತಿಂಗಳುಗಟ್ಟಲೆ ಅದನ್ನ ಜೀರ್ಣಿಸಿಕೊಳ್ಳಬಲ್ಲದ್ದಾಗಿತ್ತು.

ಇನ್ನು ವಂಶಾಭಿವೃದ್ಧಿಯ ವಿಷಯಕ್ಕೆ ಬಂದರೆ ಇದೂ ಸಹ ಈಗಿನ ಕಾಳಿಂಗ (ಕಿಂಗ್ ಕೋಬ್ರಾ) ಅಥವಾ ಅನಕೊಂಡ ಹಾವುಗಳಂತೆಯೆ. ಇದರ ಹೆಣ್ಣು ಹಾವು ಸಂತಾನದ ಅವಧಿಯಲ್ಲಿ ಒಂದು ಬಗೆಯ ಆಕರ್ಷಕ ಫಿರಮೋನ್ ಗ್ರಂಥಿಯನ್ನ ಸ್ರವಿಸುತ್ತಿತ್ತು. ಅದರ ವಾಸನೆ ಗ್ರಹಿಸುತ್ಥಿದ್ದ ಗಂಡು ಹೆಣ್ಣನ್ನ ಅರಸಿ ಬರುತ್ತಿತ್ತು. ನಂತರ ಮಿಲನಕ್ರಿಯೆ ಜರುಗಿದ ಬಳಿಕ ಗಂಡನ್ನ ಕೊಂದೊ ಇಲ್ಲವೆ ತಿಂದೊ ಮುಗಿಸುತ್ತಿದ್ದ ಹೆಣ್ಣು ಹಾವು ಮರಿ ಹಾಕಲು ತುಸು ಬೆಚ್ಚನೆಯ ಸ್ಥಳ ಆರಿಸಿ ಹಲವು ತಿಂಗಳುಗಳ ಕಾಲ ಆಹಾರ ಸೇವಿಸದೆ ಬೇಟೆಗು ಹೋಗದೆ ವಿಶ್ರಾಂತಿಯಲ್ಲಿಯೆ ಕಾಲ ತಳ್ಳುತ್ತಿತ್ತು.
ಇವೂ ಸಹ ಅನಕೊಂಡದಂತೆ ಮೊಟ್ಟೆ ಇಡದೆ ನೇರವಾಗಿ ಮರಿ ಹಾಕುತ್ತಿದ್ದ ಜೀವಿಗಳು. ಇದರ ಮೊಟ್ಟೆಯ ಪದರ ಅದರ ಗರ್ಭದಲ್ಲೆ ರಚನೆಯಾಗಿ ಅಲ್ಲಿಯೇ ಅದು ಒಡೆದು ಮರಿಗಳು ಹೊರಬರುತ್ತಿದ್ದವು. ಎಷ್ಟು ತಿಂಗಳು ಇದು ಗರ್ಭ ಧರಿಸ್ತಿತ್ತು ಎಂಬುದು ಇನ್ನು ಸಹ ತಿಳಿದು ಬಂದಿಲ್ಲ.
ಆದರೆ ಇವೇಕೆ ನಿಗೂಢವಾಗಿ ಅಳಿವಿನಂಚಿಗೆ ಸರಿದವು ? ಎಂಬ ಪ್ರಶ್ನೆಗೆ ಉತ್ತರ. ಕುಸಿದ ತಾಪಮಾನ. ಮಳೆಗಾಡುಗಳ ನಾಶ. ಹುಲ್ಲುಗಾವಲುಗಳ ಸೃಷ್ಟಿ. ಹಾಗೂ ಏರುಪೇರಾದ ಆಹಾರ ಸರಪಳಿಯ ಕ್ರಮಗಳೆ ಈ ದೈತ್ಯ ಜೀವಿಗಳು ನಾಶ ಹೊಂದಲು ಕಾರಣ ಎಂದು ತಙ್ಞರ ವಾದ. ಒಂದು ವೇಳೆ ಈ ಹಾವು ಇಂದೇನಾದರೂ ಬದುಕಿದ್ದರೆ ? ಇದೂ ಸಹ ದುಷ್ಟ ಮಾನವನ ಸ್ವಾರ್ಥದ ಸರಕಾಗಿ ಬಳಕೆಯಾಗ್ತಿತ್ತೇನೊ?
ಸಾಕ್ಷಾ ಟಿವಿಯ ವಿಶ್ವ ವಿಸ್ಮಯ ಅಂಕಣಕಾರ ಇಂದೂದರ್ ಒಡೆಯರ್ ಚಿತ್ರದುರ್ಗ ಅವರ ಕಿರು ಪರಿಚಯ
ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಸೂರ್ಯನ ಬೆಳಕಿನ 7 ಸೂಪರ್ ಸೀಕ್ರೆಟ್ ಆರೋಗ್ಯ ಪ್ರಯೋಜನಗಳು https://t.co/vNF9KldJfl
— Saaksha TV (@SaakshaTv) November 20, 2020
ಪಾಕ್ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳ ಮೇಲೆ ಭಾರತದ ಪಿನ್‌ಪಾಯಿಂಟ್ ಸ್ಟ್ರೈಕ್https://t.co/5w1CUgca2A
— Saaksha TV (@SaakshaTv) November 20, 2020








