ಕೊರೊನಾ ಮಹಾಸ್ಫೋಟ : ರಾಜ್ಯದಲ್ಲಿ ಇಂದು 6,976 ಕೇಸ್ ಪತ್ತೆ

1 min read
covid-19

ಕೊರೊನಾ ಮಹಾಸ್ಫೋಟ : ರಾಜ್ಯದಲ್ಲಿ ಇಂದು 6,976 ಕೇಸ್ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ವೇಗ ಹೆಚ್ಚಿದ್ದು, ರಾಕೇಟ್ ವೇಗದಲ್ಲಿ ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಾ ಸಾಗುತ್ತಿದೆ.

ಇವತ್ತು ರಾಜ್ಯದಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, 6,976 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 6,991 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಇಂದು 35 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರೇ 2,794 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

covid-19

ಇನ್ನುಳಿದಂತೆ 49,254 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಜಿಲ್ಲಾವಾರು ವರದಿ ಹೀಗಿದೆ :

ಬಾಗಲಕೋಟೆ 13, ಬಳ್ಳಾರಿ 49, ಬೆಳಗಾವಿ 101, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು ನಗರ 4,991, ಬೀದರ್ 214, ಚಾಮರಾಜನಗರ 39, ಚಿಕ್ಕಬಳ್ಳಾಪುರ 37, ಚಿಕ್ಕಮಗಳೂರು 38, ಚಿತ್ರದುರ್ಗ 20, ದಕ್ಷಿಣ ಕನ್ನಡ 112, ದಾವಣಗೆರೆ 20, ಧಾರವಾಡ 88, ಗದಗ 11, ಹಾಸನ 90, ಹಾವೇರಿ 12, ಕಲಬುರಗಿ 205, ಕೊಡಗು 10, ಕೋಲಾರ 29, ಕೊಪ್ಪಳ 24, ಮಂಡ್ಯ 58, ಮೈಸೂರು 243, ರಾಯಚೂರು 28, ರಾಮನಗರ 28, ಶಿವಮೊಗ್ಗ 34, ತುಮಕೂರು 204, ಉಡುಪಿ 89, ಉತ್ತರ ಕನ್ನಡ 35, ವಿಜಯಪುರ 50 ಮತ್ತು ಯಾದಗಿರಿಯಲ್ಲಿ 34 ಹೊಸ ಕೇಸ್ ಗಳು ಪತ್ತೆಯಾಗಿವೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd