International Nurses Day – ದಾದಿಯರ ಸಮರ್ಪಣಾ ಮನೋಭಾವ  ಶ್ಲಾಘಿಸಿದ ಪ್ರಧಾನಿ ಮೋದಿ  

1 min read

International Nurses Day – ದಾದಿಯರ ಸಮರ್ಪಣಾ ಮನೋಭಾವ  ಶ್ಲಾಘಿಸಿದ ಪ್ರಧಾನಿ ಮೋದಿ

ವಿಶ್ವಾದ್ಯಂತ ಮೇ 12 ರಂದು ಅಂತರಾಷ್ಟ್ರೀಯ ದಾದಿಯರ (Nurses) ದಿನವನ್ನಾಗಿ ಆಚರಿಸಲಾಗುತ್ತದೆ.  ದಾದಿಯರು ಸಮಾಜಕ್ಕೆ, ಆರೋಗ್ಯ ರಕ್ಷಣೆಯಲ್ಲಿ ಮತ್ತು ಸಮುದಾಯದಲ್ಲಿ ನೀಡಿದ ಕೊಡುಗೆಯನ್ನ ಇಂದು ಸ್ಮರಿಸಲಾಗುತ್ತದೆ.  ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನ International Nurses Day  ಎಂದು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ದಾದಿಯರ ದಿನದಂದು “ಜನಸಮುದಾಯವನ್ನ ಆರೋಗ್ಯವಾಗಿಡುವ ಕಾರ್ಯದಲ್ಲಿ ದಾದಿಯರ ಪ್ರಮುಖ ಪಾತ್ರವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಅವರ ಸಮರ್ಪಣಾ ಮನೋಭಾವ ಮತ್ತು ಸಹಾನುಭೂತಿ ಅನುಕರಣೀಯ.  ಅಂತರರಾಷ್ಟ್ರೀಯ ದಾದಿಯರ ದಿನವು ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ಅವರ ಅಸಾಧಾರಣ ಕೆಲಸಕ್ಕಾಗಿ ನಮ್ಮ ಮೆಚ್ಚುಗೆಯನ್ನು ಪುನರುಚ್ಚರಿಸುವ ದಿನವಾಗಿದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳ ಮಿಲಿಟರಿ ನರ್ಸಿಂಗ್ ಸೇವೆ ಅಥವಾ MNS ಈ ದಿನವನ್ನು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಿದೆ. Today is International Nurses Day; PM Modi appreciates vital role of Nurses in keeping planet healthy

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd