ಇಂದು ಶಿಕ್ಷಕರ ದಿನಾಚರಣೆ : ಸಿಎಂ, ವಿಪಕ್ಷ ನಾಯಕ ಶುಭಾಶಯ
ಬೆಂಗಳೂರು : ಇಂದು ಶಿಕ್ಷಕರ ದಿನಾಚರಣೆ. ಗ್ರೇಟ್ ಇಂಡಿಯನ್ ಫಿಲಾಸಫರ್, ವಿದ್ವಾಂಸ ಮತ್ತು ರಾಜಕಾರಣಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮದಿನ.
ಸೆಪ್ಟೆಂಬರ್ 5, 1888ರಂದು ತಿರುತ್ತಣಿಯಲ್ಲಿ ಜನಿಸಿದ ರಾಧಾಕೃಷ್ಣನ್ ಅವರ ತತ್ವ-ಚಿಂತನೆಗಳು ಮತ್ತು ಉಪದೇಶವು ವಿಶ್ವದಾದ್ಯಂತ ಭಾರಿ ಪ್ರಭಾವ ಬೀರಿವೆ.
ಈ ಹಿನ್ನೆಲೆಯಲ್ಲಿ ಇವರ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 5ರಂದು ಭಾರತದಲ್ಲಿ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಮಾಜಿ ರಾಷ್ಟ್ರಪತಿಗಳಾದ ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಗೌರವ ನಮನಗಳು. ನಾಡಿನ ಸಮಸ್ತ ಶಿಕ್ಷಕರ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಗುರುಗಳಿಗೆ ಯೋಗ್ಯ ಶಿಷ್ಯರು ಸಿಗಲಿ, ಶಿಷ್ಯರಿಗೆ ಯೋಗ್ಯ ಗುರುಗಳು ಸಿಗಲಿ. ಕಲಿಯುವ, ಕಲಿಸುವ ಪಯಣ ಮುಂದುವರಿಯಲಿ, ಶಿಕ್ಷಣ ಎಲ್ಲರಿಗೂ ಸಿಗಲಿ. ಜ್ಞಾನದಾಸೋಹಕ್ಕೆ ತಮ್ಮನ್ನು ಅರ್ಪಿಸಿಕೊಂಡ ಎಲ್ಲ ಶಿಕ್ಷಕರಿಗೆ ಗೌರವದ ಶುಭಾಶಯಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.