ಇಂದು ವಿಶ್ವ ಕ್ಯಾನ್ಸರ್ ದಿನ | ಕ್ಯಾನ್ಸರ್ ರೋಗದ 10 ಲಕ್ಷಣಗಳು Saaksha Tv
ನವದೆಹಲಿ: ಸದ್ಯ ವಿಶ್ವದ ಕ್ಯಾನ್ಸರ್ ಬಾಧಿತ ದೇಶಗಳಲ್ಲಿ ಭಾರತ 5 ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ.
ಕ್ಯಾನ್ಸರ್ ಶೇ. 95 ರಷ್ಟು ಜನರಲ್ಲಿ ತಂಬಾಕು ಸೇವನೆಯಿಂದ ಬರುತ್ತಿದೆ. ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಮುಂತಾದ ಅಂಗಗಳು ಕ್ಯಾನ್ಸರ್‌ಗೆ ಒಳಗಾಗುತ್ತವೆ. ಮದ್ಯಪಾನ ಮಾಡುವುದು ಮುಂತಾದ ದುಶ್ಚಟಗಳಿಂದ ಕ್ಯಾನ್ಸರ್ ಬರುತ್ತಿದೆ.
ದೈಹಿಕ ಚಟುವಟಿಕೆ ಇಲ್ಲದಿರುವುದು, ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿ ಅಂಶಗಳು ಕ್ಯಾನ್ಸರ್‌ನ್ನು ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳು. ವಯಸ್ಸು, ಲಿಂಗ, ಅನುವಂಶೀಯ ಕಾರಣಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ.
ಕ್ಯಾನ್ಸರ್ ರೋಗದ ಲಕ್ಷಣಗಳು
ನಿರಂತರ ಆಯಾಸ, ದೇಹದಲ್ಲಿ ಊತ ಅಥವಾ ಗಂಟು, ಎದೆಯುರಿ, ದೇಹದ ತೂಕದಲ್ಲಿ ಗಣನೀಯ ಇಳಿಕೆ, ಒಣ ಕೆಮ್ಮು ಅಥವಾ ಕಫಯುಕ್ತ ಕೆಮ್ಮು, ಮೂತ್ರದಲ್ಲಿ ರಕ್ತ, ಚರ್ಮದಲ್ಲಿ ಬದಲಾವಣೆಗಳು, ಆಹಾರ ನುಂಗುವಲ್ಲಿ ಸಮಸ್ಯೆ, ಅಸಹಜ ರಕ್ತ ಸ್ರಾವ, ಪದೇ ಪದೇ ಭಾದಿಸುವ ಜ್ವರ








