ಟೋಕಿಯೋ ಒಲಿಂಪಿಕ್ಸ್ – ನಾಲ್ಕನೇ ದಿನವೂ ಮುಂದುವರೆದ ಭಾರತೀಯರ ಸೋಲಿನ ಆಟ
ಆರ್ಚರಿ
ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಭಾರತದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ದಕ್ಷಿಣ ಕೊರಿಯಾ ವಿರುದ್ಧ ಸೋಲು ಕಂಡಿದ್ದಾರೆ.
ಟೇಬಲ್ ಟೆನಿಸ್
ಟೇಬಲ್ ಟೆನಿಸ್ ಎರಡನೇ ರೌಂಡ್ನಲ್ಲಿ ಭಾಗವಹಿಸಿದ ಭಾರತದ ಶರತ್ ಕಮಲ್ ಪೋರ್ಚುಗಲ್ ದೇಶದ ಟಿಯಾಗೋ ಅಪೊಲೊನಿಯಾ ವಿರುದ್ಧ 4-2 ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಟೇಬಲ್ ಟೆನಿಸ್ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಮಣಿಕಾ ಬಾತ್ರಾ ಮೂರನೇ ಸುತ್ತಿನ ಹೋರಾಟದಲ್ಲಿ ಸೋಲಿಗೆ ಶರಣಾಗಿದ್ದು, ಪದಕದ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.
ಫೆನ್ಸಿಂಗ್
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಭವಾನಿ ದೇವಿ ಸೇಬರ್ ಫೆನ್ಸಿಂಗ್ನಲ್ಲಿ ತುನಿಶಿಯಾ ದೇಶದ ನಡಿಯ ಅಝೀಝಿ ಅವರನ್ನು 15-3 ಅಂತರದಿಂದ ಸೋಲಿಸುವುದರ ಮೂಲಕ ಪದಕದ ಭರವಸೆ ಮೂಡಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಫ್ರೆಂಚ್ನ ಮ್ಯಾನೊನ್ ಬ್ರುನೆಟ್ ವಿರುದ್ಧ ಸೋಲು ಕಂಡು ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ.
ಶೂಟಿಂಗ್
ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪದಕ ಗೆಲುವಿನ ಫೇವರಿಟ್ ಎನಿಸಿದ್ದ ಯುವ ಶೂಟರ್ ಮನು ಭಾಕರ್ ಗೆ ಪಿಸ್ತೂಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಫೈನಲ್ಗೇರುವ ಅವಕಾಶ ತಪ್ಪಿದೆ
#Tokyo #Olympics2020