ಟೋಕಿಯೋ ಒಲಿಂಪಿಕ್ಸ್ : ಸೆಮಿಫೈನಲ್ ತಲುಪಿದ ಬಾಕ್ಸರ್ ಲವ್ಲಿನಾ Tokyo Olympics saaksha tv
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಸೆಮಿಫೈನಲ್ ತಲುಪಿದ್ದಾರೆ.
ಮಹಿಳಾ ವಿಭಾಗದ 64-69 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಜಯ ಸಾಧಿಸುವ ಮೂಲಕ ಸೆಮೀಸ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಕ್ವಾರ್ಟರ್ ನಲ್ಲಿ ಲವ್ಲಿನಾ ಅವರು ಮಾಜಿ ವಿಶ್ವ ಚಾಂಪಿಯನ್ ತೈಪೆ ಚೀನಾದ ಚೆನ್ ನಿಯಾನ್-ಚಿನ್ ಅವರನ್ನು 4-1 ಅಂತರದಿಂದ ಸೋಲಿಸಿದ್ದಾರೆ.
ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಲವ್ಲಿನಾ ಎದುರಾಳಿಗೆ ಭರ್ಜರಿ ಪಂಚ್ ನೀಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಸಫಲರಾದರು.