ಒಂದು ಅಂಕ ಅಂತರದಿಂದ ಸೋಲು : ಒಲಿಂಪಿಕ್ಸ್ ಅಭಿಯಾನ ಮುಗಿಸಿದ ಮೇರಿ mary-kom Saaksha tv
ಟೋಕಿಯೋ : ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಭಾರತದ ಮೇರಿ ಕೋಮ್ ಟೋಕಿಯೋ ಒಲಂಪಿಕ್ಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಮೇರಿ ಕೋಮ್ 16ನೇ ಸುತ್ತಿನ ಪಂದ್ಯದಲ್ಲಿ 3-2 ಅಂತರದಿಂದ ಸೋಲು ಕಾಣುವ ಮೂಲಕ ತಮ್ಮ ಒಲಿಂಪಿಕ್ಸ್ ಅಭಿಯಾನ ಮುಗಿಸಿದ್ದಾರೆ.
ಮಹತ್ವದ ಫ್ರೀ-ಕ್ವಾರ್ಟರ್ ಪಂದ್ಯದಲ್ಲಿ ಕೊಲಂಬಿಯಾ ಬಾಕ್ಸರ್ ಇಂಗ್ರಿಟ್ ವೇಲೆನ್ಸಿಯಾ ಎದುರಿಸಿದ್ದ ಮೇರಿ ಕೋಮ್, ಕೇವಲ 3-2 ಅಂತರದಿಂದ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಇಂಗ್ರಿಟ್ ವೇಲೆನ್ಸಿಯಾ, ಎರಡನೇ ಸುತ್ತಿನಲ್ಲಿ ಸೋಲು ಕಂಡಿದ್ದರು.
ಆದರೆ ನಿರ್ಣಾಯಕ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ ಕೊಲಂಬಿಯಾ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದ್ದಾರೆ.