ಟೋಕಿಯೊ ಒಲಂಪಿಕ್ಸ್ : ಗುಂಡೇಟು ತಿಂದ ಬಾಕ್ಸರ್ ಗೆ ಚಿನ್ನದ ಮಾಲೆ Tokyo-olympics
ಟೋಕಿಯೋ : ಒಲಿಂಪಿಕ್ಸ್‍ನಲ್ಲಿ ಹೆವಿವೇಟ್ ಬಾಕಿಂಗ್ಸ್ ವಿಭಾಗದಲ್ಲಿ ಕ್ಯೂಬಾದ ಜೂಲಿಯೊ ಲಾ ಕ್ರೂಜ್ ಸತತ ಮೂರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಶುಕ್ರವಾರ ನಡೆದ ಹೆವಿವೇಟ್ ವಿಭಾಗದ ಫೈನಲ್ ಕಾದಾಟದಲ್ಲಿ ರಶ್ಯದ ಮುಸ್ಲಿಮ್ ಗಾಜಿಮಗೊಡೇವ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
2014ರಲ್ಲಿ ಜೂಲಿಯೊ ಲಾ ಕ್ರೂಜ್ ದರೋಡೆಕೋರರಿಂದ ಬೆನ್ನಿನ ಭಾಗಕ್ಕೆ ಗುಂಡೇಟು ತಿಂದು ಬದುಕುಳಿದಿದ್ದರು.
ಆ ಬಳಿಕ ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಧುಮುಕಿದ ಕ್ರೂಜ್ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‍ನಲ್ಲಿ 1 ಚಿನ್ನದ ಪದಕ ಪಡೆದಿದ್ದರು.
ಇದೀಗ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಮೂರು ಚಿನ್ನದ ಪದಕದ ಸಾಧನೆ ಗೈದಿದ್ದಾರೆ.