ಟೋಕಿಯೊ ಒಲಿಂಪಿಕ್ಸ್- 8 ನೇ ದಿನ : ಎಲ್ಲರ ಕಣ್ಣು ಸಿಂಧು ಮೇಲೆ – ಅಮಿತ್, ಅತನು ಹೋರಾಟ ಅಂತ್ಯ
ಬ್ಯಾಡ್ಮಿಂಟನ್
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ ಪ್ರವೇಶಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನ 8 ನೇ ದಿನ ಚೈನೀಸ್ ತೈಪೆಯ ತೈ ಜು-ಯಿಂಗ್ ವಿರುದ್ಧ ಪಿವಿ ಸಿಂಧು ಸೆಮಿಫೈನಲ್ ಪಂದ್ಯ ನಡೆಯಲಿದೆ. ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ನ ಅಕಾನೆ ಯಮಾಗುಚಿ ಅವರನ್ನು 21-13, 22-20 ಅಂತರದ ನೇರ ಸೆಟ್ ಗಳಿಂದ ಸೋಲಿಸಿದ್ದಾರೆ.
ಡಿಸ್ಕಸ್ ಥ್ರೋ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋನ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಕಮಲ್ಪ್ರೀತ್ ಕೌರ್ ಎರಡನೇ ಸ್ಥಾನ ಗಳಿಸಿದ್ದು, ಡಿಸ್ಕಸ್ ಥ್ರೋ ಈವೆಂಟ್ನ ಅಂತಿಮ (ಫೈನಲ್ಸ್) ಸುತ್ತನ್ನು ಪ್ರವೇಶಿಸಿದ್ದಾರೆ.
ವನಿತೆಯರ ಹಾಕಿ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ವನಿತೆಯರ ಹಾಕಿ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ದಾಖಲಿಸಿರುವ ಭಾರತ ಮಹಿಳಾ ತಂಡ ಐರ್ಲೆಂಟ್ ಹಾಗೂ ಗ್ರೇಟ್ ಬಿಟನ್ ನಡುವಣ ಪಂದ್ಯದಲ್ಲಿ ಐರ್ಲೆಂಡ್ ತಂಡ ಸೋತರೆ ಅಥವಾ ಪಂದ್ಯ ಡ್ರಾ ವಾದರೆ ಚೊಚ್ಚಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.
ಆರ್ಚರಿ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಆರ್ಚರಿ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ. ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಅತನು ದಾಸ್ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಜಪಾನ್‌ನ ತಕಹರು ಫುರುಕವಾ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಬಾಕ್ಸಿಂಗ್
ಬಾಕ್ಸರ್ ಅಮಿತ್ ಪಂಘಾಲ್ ತನ್ನ 16 ರ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಯುರ್‌ಬರ್ಜೆನ್ ಮಾರ್ಟಿನೆಜ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಆತ್ಲೆಟಿಕ್ಸ್
ಟೋಕಿಯೊ ಒಲಿಂಪಿಕ್ಸ್ ಆತ್ಲೆಟಿಕ್ಸ್‌ನಲ್ಲಿ ಅವಿನಾಶ್ ಸಬ್ಲೆ ಸಾವಿರ 3 ಸಾವಿರ ಮೀ. ಸ್ಟೀಪಲ್‌ಚೇಸ್ ಹೀಟ್ಸ್ ನಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿ 7 ಸ್ಥಾನ ಪಡೆದು ಫೈನಲ್ ರೇಸ್‌ನಿಂದ ಹೊರಬಿದ್ದರು.
ಶೂಟಿಂಗ್
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಶೂಟರ್‌ಗಳಾದ ಮನು ಭಾಕರ್ ಹಾಗೂ ರಾಹಿ ಸರ್ನೋಬತ್ ರೇಸ್‌ನಿಂದ ಹೊರಬಿದ್ದಿದ್ದಾರೆ.
#TokyoOlympics