ಚಿತ್ರಮಂದಿಗಳ ಮಾಲಿಕರಿಂದ ನಾನಿ ಸಿನಿಮಾಗಳಿಗೆ ಬಹಿಷ್ಕಾರ..! ಕಾರಣವೇನು..?
ಟಾಲಿವುಡ್ ನ ಸ್ಟಾರ್ ನಟ ನಾನಿ ಸಿನಿಮಾಗಳು ಅಂದ್ರೆ ಅದ್ರಲ್ಲೇನಾದ್ರೂ ಒಂದು ವಿಭಿನ್ನತೆ ಇದ್ದೇ ಇರುತ್ತೆ.. ಅವರದ್ದೇ ಆದ ಅಭಿಮಾನಿಗಳ ಬಳಗವೂ ಇದೆ.. ಆದ್ರೆ ನಾನಿ ಸಿನಿಮಾಗಳನ್ನ ಇನ್ಮುಂದೆ ಆಂಧ್ರ ಮತ್ತು ತೆಲಂಗಾಣ ಚಿತ್ರಮಂದಿಗಳಲ್ಲಿ ಬಹಿಷ್ಕಾರ ಹಾಕಲು ಚಿತ್ರಮಂದಿರಗಳ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಮುಂದೆ ತಾವು ನಟ ನಾನಿಯ ಸಿನಿಮಾಗಳನ್ನು ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ.
ಕಾರಣವೇನು..?
ನಾನಿಯ ಒಂದು ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇದೀಗ ನಾನಿ ನಟಿಸುವ ಹೊಸ ಸಿನಿಮಾ ಮತ್ತೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಚಿತ್ರಮಂದಿರಗಳ ಮಾಲೀಕರು ನಾನಿ ಸಿನಿಮಾಗಳಿಗೆ ಬಹಿಷ್ಕಾರ ಹಾಕಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 10ರ ವರೆಗೆ ಕಾದು ನೋಡಿ ಆ ವರೆಗೆ ಕೊರೊನಾ ಪರಿಸ್ಥಿತಿ ಸುಧಾರಿಸಿ ಚಿತ್ರಮಂದಿರಗಳು ತೆರೆಯಲಿಲ್ಲವೆಂದರೆ ನಿಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ನಾವು ನಿರ್ಮಾಪಕರಿಗೆ ಪತ್ರ ಬರೆದಿದ್ದೆವು ಆದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಿದ್ದಾರೆ. ನಾವು ದಶಕಗಳಿಂದ ನಿರ್ಮಾಪಕರಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ ಆದರೆ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡಿ ಎಂದು ಬೇಸರ ಹೊರಹಾಕಿದ್ದಾರೆ.
ನಾನಿ ನಟಿಸಿರುವ ಹೊಸ ಸಿನಿಮಾ ಟಕ್ ಜಗದೀಶ ಸೆಪ್ಟೆಂಬರ್ 10ಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಅಲ್ಲದೇ ಒಮ್ಮೆ ಈ ಬಗ್ಗೆ ಮಾತನಾಡಿದ್ದ ನಾನಿ ಸಿನಿಮಾಗಳು ನಮ್ಮ ಸಂಸ್ಕೃತಿಯ ಭಾಗ ಅವುಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ ಆನಂದಿಸಬೇಕು. ನಾನು ನನ್ನ ಈ ಹಿಂದಿನ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದೆ ಎಂದಿದ್ದರು. ಆದರೆ ಈಗ ಮತ್ತೆ ತಮ್ಮ ಸಿನಿಮಾವನ್ನು ಅಮೆಜಾನ್ಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.