ಪೆಟ್ರೋಲ್ ಗಿಂತಲೂ ಟೊಮೆಟೊ ದುಬಾರಿ : ಕಾರಣವೇನು ಗೊತ್ತಾ..?

1 min read
Tomato import

ಪೆಟ್ರೋಲ್ ಗಿಂತಲೂ ಟೊಮೆಟೊ ದುಬಾರಿ : ಕಾರಣವೇನು ಗೊತ್ತಾ..?

ಟೊಮೆಟೊ ಬೆಳೆಯೇ ಒಂದು ರೀತಿ ಲಾಟರಿ ಇದ್ದಂತೆ. ಬಂದರೇ ಲಾಭ.. ಹೋದರೇ ನಷ್ಟ. ಇದು ನನಗೆ ಪರಿಚಯ ಇರುವ ರೈತರೊಬ್ಬರ ಮಾತು.

ಅನೇಕ ಬಾರಿ ಟೊಮೆಟೋಗೆ ಬೆಲೆ ಸಿಗದೇ ರೈತರು ರಸ್ತೆಯಲ್ಲಿ ಟೊಮೆಟೊವನ್ನು ಸುರಿಯೋದನ್ನ ನಾವು ನೋಡಿರುತ್ತೇವೆ.

ಎಲ್ಲಾ ಸೀಸನ್ ಗಳಲ್ಲೂ ಈ ರೀತಿ ನಡೆಯುತ್ತಲೇ ಇರುತ್ತದೆ. ಆದ್ರೆ ಈಗ ಟೊಮೆಟೋಗೆ ಚಿನ್ನದ ಬೆಲೆ ಬಂದಿದೆ.

ಸದ್ಯ ರಾಜ್ಯದಲ್ಲಿ ಟೋಮೆಟೊ ಬೆಲೆ ಜನರಿಗೆ ಶಾಕ್ ನೀಡಿದ್ದು, ಪೆಟ್ರೋಲ್ ಗಿಂತಲೂ ಟೊಮೆಟೋ ದುಬಾರಿಯಾಗಿದೆ.

ಚೆನ್ನೈನಲ್ಲಿ ಒಂದು ಕೆಜಿ ಟೊಮೆಟೋ 140 ರುಪಾಯಿಗೆ ಮಾರಾಟವಾಗುತ್ತಿದ್ದರೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟೊಮೆಟೋ ಕೆಜಿಗೆ 120 ರುಪಾಯಿ ಇದೆ.

ಈಗಾಗಲೇ ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆ ಗಗನಕ್ಕೇರಿದ್ದು, ಇದರ ಮಧ್ಯೆ ತರಕಾರಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.

ಕಾರಣವೇನು..?
ನಮ್ಮ ದೇಶದಲ್ಲಿ ಜಾಸ್ತಿ ಟೊಮೆಟೋ ಬೆಳೆಯೋದು ಆಂಧ್ರಪ್ರದೇಶದಲ್ಲಿ. ಇಲ್ಲಿ ಸುಮಾರು 26.67 ಲಕ್ಷ ಮೆಟ್ರಿಕ್ ಟನ್‍ಗಳಷ್ಟು ಟೊಮೆಟೊ ಬೆಳೆಯಲಾಗುತ್ತದೆ.

ಚಿತ್ತೂರಿನ ಮದನಪಲ್ಲಿ ಅತ್ಯಂತ ದೊಡ್ಡ ಟೊಮೆಟೊ ಮಾರುಕಟ್ಟೆ ಇದೆ. ಆದ್ರೆ ಈ ಬಾರಿ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಚಿತ್ತೂರು ಮತ್ತು ಅನಂತಪುರ ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.

tomato saaksha tv

ಇದರಿಂದ ಅಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತ ರಾಜ್ಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಹೆಚ್ಚಾಗಿ ಟೆಮೋಟೋ ಬೆಳೆಯಲಾಗುತ್ತದೆ.

ಆದ್ರೆ ಇಲ್ಲೂ ಕೂಡ ವರುಣ ಎಲ್ಲವನ್ನು ನಾಶ ಮಾಡಿದ್ದಾನೆ. ಮಳೆಯಿಂದಾಗಿ ಟೊಮೆಟೋ ಬೆಳೆ ನಾಶವಾಗಿದೆ.

ಇದರ ಜೊತೆಗೆ ಮದುವೆ, ಹಬ್ಬದ ಸೀಸನ್ ಆಗಿರುವುದರಿಂದಲೂ ಟೊಮೆಟೋ ಬೆಲೆ ಹೆಚ್ಚಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd