ಸುಡುವ ಜ್ವಾಲಗ್ನಿಯಂತೆ ಬಂದ “ತೂಫಾನ್” KGF chapter 2 ಹಾಡು ಬಿಡುಗಡೆ
ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ತೂಫಾನ್ ಲಿರಿಕಲ್ ವಿಡಿಯೋ ಬಿಡುಗಡೆಯಾದ ಕ್ಷಣದಿಂದ ಚಿತ್ರದ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್ 2’ ಚಿತ್ರದ ‘ತೂಫಾನ್..’ ಹಾಡು ಮೂಡಿಬಂದಿದೆ. ಬಿಡುಗಡೆಯಾದ ಐದು ಭಾಷೆಗಳಲ್ಲಿ ಭರ್ಜರಿ ವಿಕ್ಷಣೆ ಮಾಡಿಸಿಕೊಳ್ಳುತ್ತಿದೆ. ಸಾಂಗ್ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡುವುದರ ಜೊತೆಗೆ ಸಾಹಿತ್ಯವನ್ನೂ ಅವರೆ ಬರೆದಿದ್ದಾರೆ. ‘
ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ.
ಸರ್ರಂತ ಸುಡುವ ಜ್ವಾಲಾಗ್ನಿ ಎಂದು ಶುರುವಾಗುವ ಈ ಗೀತೆಯು ನಾಯಕನ ಹೀರೋಯಿಸಂ ಅನ್ನು ಬಿಂಬಿಸುತ್ತಾ ಹೋಗುತ್ತದೆ. ಕಥಾ ನಾಯಕನ ಚರಿತ್ರೆಯನ್ನ ಈ ಹಾಡಿನಲ್ಲಿ ಕಟ್ಟಿ ಕೊಡುತ್ತಾ ಹೋಗಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಲಹರಿ ಮ್ಯೂಸಿಕ್ ನಲ್ಲಿ ಈ ಹಾಡು ಬಿಡುಗಡೆ ಆಗಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ತೂಫಾನ್..’ ಲಿರಿಕಲ್ ಸಾಂಗ್ ಬಿಡುಗಡೆ ಆದ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಗ್ಗೆ ಇನ್ನಷ್ಟು ಟಾಕ್ ಹೆಚ್ಚಾಗಿದೆ.
Toofan From KGF: Chapter 2 Out & The Powerful Music Will Make The Wait For Yash More Difficult