TOP 10 NEWS – ಈ ದಿನದ ಪ್ರಮುಖ ಸುದ್ದಿಗಳು…!!
01 ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ – ಕೇಸರಿ ಶಾಲು ಸಂಘರ್ಷ ಸಂಬಂಧ ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ಇಂದೂ ವಿಚಾರಣೆ ಕೈಗೆತ್ತುಕೊಂಡಿತ್ತು… ಅರ್ಜಿ ಪರ ವಕೀಲರಾದ ದೇವದತ್ ಕಾಮತ್ ಅವರ ಸುಧೀರ್ಘ ವಾದ ಆಲಿಸಿರುವ ಪೀಠ ನಾಳೆಗೆ ವಿಚಾರಣೆ ಮುಂದೂಡಿದೆ.
02 ಪರಿಷತ್ ನಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪವಾಗಿದ್ದು , ಪರಸ್ಪರ ಮಲ್ಲಯುದ್ಧಕ್ಕೆ ಕಾರಣವಾಯಿತು… ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಸಂದರ್ಭದಲ್ಲಿ ಪಿ. ರಾಜೀವ್ ಮಾತನಾಡಿ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.. ನೀರಾವರಿ ಇಲಾಖೆ ಪಾದಯಾತ್ರೆ ಪ್ರಾರಂಭ ಮಾಡಿದವರ ಕೈಯಲ್ಲಿತ್ತು. ಇವರ ಔಟ್ ಕಂ ಏನು? ಅವಾಗ ಮೇಕೆದಾಟು ನೆನಪಾಗಿಲ್ವಾ?. ಎಂದು ಪ್ರಶ್ನೆ ಮಾಡಿದ್ರು.
03 ದೇಶದಲ್ಲಿ ಕೆಳೆದ 24 ಗಂಟೆಯಲ್ಲಿ 27,409 ಹೊಸದಾಗಿ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು 4,23,127 ಲಕ್ಷ ಇದ್ದು, ಕಳೆದ 24 ಗಂಟೆಯಲ್ಲಿ 88,817 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 173.42 ಕೋಟಿ ಕೊರೊನಾ ಲಸಿಕೆಯನ್ನು ಹಾಕಲಾಗಿದೆ.
04 ರಾಜ್ಯ ಸರ್ಕಾರ ವಿವಿಧ ದೇವಸ್ಥಾನಗಳಲ್ಲಿನ ಗಂಟೆ, ಜಾಗಟೆ, ಧ್ವನಿ ವರ್ಧಕ ಬಳಸದಂತೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿದ್ದು, ದೇವಸ್ಥಾನಗಳಲ್ಲಿ ನಿಗಧಿತ ಡೆಸಿಬಲ್ ಶಬ್ದಕ್ಕಿಂತ, ಹೆಚ್ಚಿನ ಶಬ್ದ ಹೊರಸೂಸುವಂತ ಗಂಟೆ, ಜಾಗಟೆ, ಧ್ವನಿವರ್ಧಕ ಬಳಸದಂತೆ ಸೂಚಿಸಿದೆ.
05 ರಷ್ಯಾ-ಉಕ್ರೇನ್ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ಎರಡು ದೇಶಗಳ ಮಧ್ಯೆ ಯುದ್ಧದ ಬೀತಿ ಸೃಷ್ಟೀಯಾಗಿದೆ. ಉಕ್ರೇನ್ ನಲ್ಲಿರುವ ತನ್ನ ದೇಶಗ ಪ್ರಜೆಗಳು ಅನಿವಾರ್ಯವಿಲ್ಲದಿದ್ದರೆ ದೇಶ ತೊರೆಯುವಂತೆ ಭಾರತದ ರಾಯಭಾರಿ ಕಛೇರಿ ಸೂಚಿಸಿದೆ
06 950 ಕೋಟಿ ರೂ.ಗಳ ದೇಶದ ಅತಿ ದೊಡ್ಡ ಮೇವು ಹಗರಣದ (ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ. ದುರುಪಯೋಗ ಪ್ರಕರಣ ) ತೀರ್ಪು ಮಂಗಳವಾರ ಹೊರ ಬಂದಿದೆ. ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಸೇರಿದಂತೆ 75 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದೇ ವೇಳೆ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.
07 ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮುಂಬೈನ ಭೂಗತ ಜಗತ್ತಿನ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅವರ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ. ಇದಲ್ಲದೇ ಡಿ ಕಂಪನಿಗೆ ಸಂಬಂಧಿಸಿದ ಹಲವು ನಾಯಕರ ಮನೆಗಳ ಮೇಲೆ ಇಡಿ ದಾಳಿ ನಡೆಸುತ್ತಿದೆ.
08 ಕನ್ನಡದ ಹಿರಿಯ ನಟಿ ಭಾರ್ಗವಿ ಅವರು ಸೋಮವಾರ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 84 ವರ್ಷದ ಭಾರ್ಗವಿ ಅವರು ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕಲಾವಿದೆ ಭಾರ್ಗವಿ ನಾರಾಯಣ ಅವರು ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡಾ ಸಕ್ರಿಯರಾಗಿದ್ದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿದ್ದಾರೆ.
09 ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ನನಗೆ ಯಾವುದೇ ಆಂದೋಳನವಿಲ್ಲ. ಅತಿ ಶೀಘ್ರದಲ್ಲಿಯೇ ಭಾರತದ ಉತ್ತಮ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿಲ್ಲ ಅನ್ನೋದು ನಾನು ಒಪ್ಪುವುದಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ವಿಫಲವಾಗಿದ್ದು, ದೊಡ್ಡ ವಿಷಯವೇನಲ್ಲ ಎಂದಿದ್ದಾರೆ.
10 ಶ್ರೀಲಂಕಾ ತಂಡದ ಆಟಗಾರರನ್ನ ಖರೀದಿ ಮಾಡಿದ್ದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ತಂಡವನ್ನು ತಲೆ ಮೇಲೆ ಇಟ್ಟಿಕೊಂಡಿರುವ ತಮಿಳುನಾಡು ಜನರೇ ಸಿಎಸ್ ಕೆ ತಂಡದ ವಿರುದ್ಧ ಬುಸುಗುಡುತ್ತಿದ್ದಾರೆ. #Boycott_ChennaiSuperKings ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ವೆಸ್ಟ್ ವಿರುದ್ಧ ಟಿ 20 ಸರಣಿಯಲ್ಲಿ ಕೇವಲ 75 ರನ್ ಗಳಿಸಿದ್ರೆ ವಿಶ್ವದಾಖಲೆ ನಿರ್ಮಿಸಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ 75 ರನ್ ಗಳಿಸಿದ್ರೆ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ.