ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

TOP 10 NEWS –  ಈ ದಿನದ  ಪ್ರಮುಖ  ಸುದ್ದಿಗಳು…!!

Naveen Kumar B C by Naveen Kumar B C
February 15, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

 

TOP 10 NEWS –  ಈ ದಿನದ  ಪ್ರಮುಖ  ಸುದ್ದಿಗಳು…!!

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

June 18, 2026
5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

June 18, 2026

01 ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ – ಕೇಸರಿ ಶಾಲು ಸಂಘರ್ಷ ಸಂಬಂಧ ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ಇಂದೂ ವಿಚಾರಣೆ ಕೈಗೆತ್ತುಕೊಂಡಿತ್ತು… ಅರ್ಜಿ ಪರ ವಕೀಲರಾದ ದೇವದತ್ ಕಾಮತ್ ಅವರ ಸುಧೀರ್ಘ ವಾದ ಆಲಿಸಿರುವ ಪೀಠ  ನಾಳೆಗೆ ವಿಚಾರಣೆ ಮುಂದೂಡಿದೆ.

02 ಪರಿಷತ್ ನಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪವಾಗಿದ್ದು , ಪರಸ್ಪರ ಮಲ್ಲಯುದ್ಧಕ್ಕೆ ಕಾರಣವಾಯಿತು… ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಸಂದರ್ಭದಲ್ಲಿ ಪಿ. ರಾಜೀವ್ ಮಾತನಾಡಿ  ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.. ನೀರಾವರಿ ಇಲಾಖೆ ಪಾದಯಾತ್ರೆ ಪ್ರಾರಂಭ ಮಾಡಿದವರ ಕೈಯಲ್ಲಿತ್ತು.  ಇವರ ಔಟ್ ಕಂ ಏನು? ಅವಾಗ ಮೇಕೆದಾಟು  ನೆನಪಾಗಿಲ್ವಾ?.  ಎಂದು ಪ್ರಶ್ನೆ ಮಾಡಿದ್ರು.

03 ದೇಶದಲ್ಲಿ ಕೆಳೆದ 24 ಗಂಟೆಯಲ್ಲಿ 27,409 ಹೊಸದಾಗಿ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳು 4,23,127 ಲಕ್ಷ ಇದ್ದು, ಕಳೆದ 24 ಗಂಟೆಯಲ್ಲಿ 88,817 ಲಕ್ಷ  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 173.42 ಕೋಟಿ ಕೊರೊನಾ ಲಸಿಕೆಯನ್ನು ಹಾಕಲಾಗಿದೆ.

04 ರಾಜ್ಯ ಸರ್ಕಾರ ವಿವಿಧ ದೇವಸ್ಥಾನಗಳಲ್ಲಿನ ಗಂಟೆ, ಜಾಗಟೆ, ಧ್ವನಿ ವರ್ಧಕ ಬಳಸದಂತೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಿದ್ದು, ದೇವಸ್ಥಾನಗಳಲ್ಲಿ ನಿಗಧಿತ ಡೆಸಿಬಲ್ ಶಬ್ದಕ್ಕಿಂತ, ಹೆಚ್ಚಿನ ಶಬ್ದ ಹೊರಸೂಸುವಂತ ಗಂಟೆ, ಜಾಗಟೆ, ಧ್ವನಿವರ್ಧಕ ಬಳಸದಂತೆ ಸೂಚಿಸಿದೆ.

05 ರಷ್ಯಾ-ಉಕ್ರೇನ್   ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ  ಎರಡು ದೇಶಗಳ ಮಧ್ಯೆ ಯುದ್ಧದ ಬೀತಿ ಸೃಷ್ಟೀಯಾಗಿದೆ.  ಉಕ್ರೇನ್ ನಲ್ಲಿರುವ ತನ್ನ ದೇಶಗ ಪ್ರಜೆಗಳು ಅನಿವಾರ್ಯವಿಲ್ಲದಿದ್ದರೆ ದೇಶ ತೊರೆಯುವಂತೆ ಭಾರತದ ರಾಯಭಾರಿ ಕಛೇರಿ ಸೂಚಿಸಿದೆ

06 950 ಕೋಟಿ ರೂ.ಗಳ ದೇಶದ ಅತಿ ದೊಡ್ಡ ಮೇವು ಹಗರಣದ (ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ. ದುರುಪಯೋಗ ಪ್ರಕರಣ ) ತೀರ್ಪು ಮಂಗಳವಾರ ಹೊರ ಬಂದಿದೆ.  ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಸೇರಿದಂತೆ 75 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದೇ  ವೇಳೆ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

07 ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮುಂಬೈನ ಭೂಗತ ಜಗತ್ತಿನ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.  ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪರ್ಕರ್ ಅವರ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ. ಇದಲ್ಲದೇ ಡಿ ಕಂಪನಿಗೆ ಸಂಬಂಧಿಸಿದ ಹಲವು ನಾಯಕರ ಮನೆಗಳ ಮೇಲೆ ಇಡಿ ದಾಳಿ ನಡೆಸುತ್ತಿದೆ.

08 ಕನ್ನಡದ ಹಿರಿಯ ನಟಿ ಭಾರ್ಗವಿ ಅವರು ಸೋಮವಾರ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 84 ವರ್ಷದ ಭಾರ್ಗವಿ ಅವರು ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.  ಕಲಾವಿದೆ ಭಾರ್ಗವಿ ನಾರಾಯಣ ಅವರು ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ ಹಲವು  ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡಾ ಸಕ್ರಿಯರಾಗಿದ್ದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿದ್ದಾರೆ.

09  ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ನನಗೆ ಯಾವುದೇ ಆಂದೋಳನವಿಲ್ಲ. ಅತಿ ಶೀಘ್ರದಲ್ಲಿಯೇ ಭಾರತದ ಉತ್ತಮ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ನಲ್ಲಿಲ್ಲ ಅನ್ನೋದು ನಾನು ಒಪ್ಪುವುದಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ವಿಫಲವಾಗಿದ್ದು, ದೊಡ್ಡ ವಿಷಯವೇನಲ್ಲ ಎಂದಿದ್ದಾರೆ.

10  ಶ್ರೀಲಂಕಾ ತಂಡದ ಆಟಗಾರರನ್ನ ಖರೀದಿ ಮಾಡಿದ್ದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ತಂಡವನ್ನು ತಲೆ ಮೇಲೆ ಇಟ್ಟಿಕೊಂಡಿರುವ ತಮಿಳುನಾಡು ಜನರೇ ಸಿಎಸ್ ಕೆ ತಂಡದ ವಿರುದ್ಧ ಬುಸುಗುಡುತ್ತಿದ್ದಾರೆ. #Boycott_ChennaiSuperKings ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ,  ವೆಸ್ಟ್ ವಿರುದ್ಧ ಟಿ 20 ಸರಣಿಯಲ್ಲಿ ಕೇವಲ 75 ರನ್ ಗಳಿಸಿದ್ರೆ ವಿಶ್ವದಾಖಲೆ ನಿರ್ಮಿಸಲಿದ್ದಾರೆ.  ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ 75 ರನ್ ಗಳಿಸಿದ್ರೆ  ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ.

Tags: news
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

by Shwetha
June 18, 2026
0

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

by Shwetha
June 18, 2026
0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನಾಶಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ...

ಆ್ಯಪ್‌ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್

ಆ್ಯಪ್‌ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಟೆಲಿಗ್ರಾಮ್

by Shwetha
June 18, 2026
0

ನೀಟ್ ಮರು-ಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿರುವ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಕ್ರಮದಿಂದ ತಮ್ಮ ಸೇವೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram