ಲಾಕ್ ಡೌನ್ ವಿಸ್ತರಣೆ , ದೀದಿಗಾಗಿ ರಾಜೀನಾಮೆ, ಇಂದು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು : TOP 10 ನ್ಯೂಸ್
‘ಮತ್ತೆ ಕರುನಾಡು ಬಂದ್’… ಲಾಕ್ ಡೌನ್ ವಿಸ್ತರಣೆ
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹಾವಳಿ ಮಿತಿ ಮೀರಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ರಾಜ್ಯ ಸರ್ಕಾರ ಮೇ 25 ರವರೆಗೂ ಲಾಕ್ ಡೌನ್ ಜಾರಿಗೊಳಿಸಿದ್ದು, ಇದನ್ನ ಈಗ ಜೂನ್ 6 ರವೆಗೂ ವಿಸ್ತರಿಸಲಾಗಿದೆ… ಹೌದು ಕೋವಿಡ್ ತಡೆಗೆ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವೆಂದು ಆರೋಗ್ಯ ಸಚಿವರಾದ ಡಾ. ಸುಧಾಕರ್ ಸೇರಿದಂತೆ ಹಲವರು ಅಭಿಪ್ರಾಯ ಹೊರಹಾಕಿದ ಬೆನ್ನಲ್ಲೇ ಲಾಕ್ ಡೌನ್ ಅವಧಿಯನ್ನ ವಿಸ್ತರಣೆ ಮಾಡಲಾಗಿದೆ.
ಅಂದ್ರೆ ಮೇ.24ರಿಂದ ಮತ್ತೆ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಬಂದ್ ಆಗಿರಲಿದೆ.. ಜೂನ್ 7 ರ ಬೆಳಿಗ್ಗೆ 6 ಗಂಟೆಯ ವರೆಗೂ ಲಾಕ್ ಡೌನ್ ಆಗಿರಲಿದೆ. ಅಲಲ್ಲದೇ ಮತ್ತಷ್ಟು ಕಠಿಣ ಕ್ರಮಗಳನ್ನ ತರಲಾಗಿದೆ.. ಜನರು 10 ಗಂಟೆಯಾದ್ಮೇಲೂ ಸುಖಾಸುಮ್ಮನೆ ಓಡಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.. ಜೊತೆಗೆ 9.45 ರಷ್ಟರಲ್ಲೇ ಜನರು ಮನೆ ಸೇರಬೇಕು.. ಅಗತ್ಯವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂವರೆಗೂ ಅವಕಾಶ ನೀಡಲಾಡಿದೆ.
ರಾಜ್ಯದಲ್ಲಿ 32,218 ಕೋವಿಡ್ ಕೇಸ್ ಗಳು ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಇಂದು ಒಂದೇ ದಿನ 32,218 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 2-3 ದಿನಗಳಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ 52,581 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ಬಹಿರಂಗಪಡಿಸಿದೆ. ಮತ್ತೊಂದು ಸಮಾಧಾನಕರವಾದ ಸಂಗತಿಯೆಂದ್ರೆ ಇಂದು ಹೊಸ ಕೇಸ್ ಗಳ ಪ್ರಮಾಣವು ಕಡಿಮೆಯಾಗಿದೆ. ಅಲ್ಲದೆ ಸಾವಿನ ಪ್ರಮಾಣದಲ್ಲೂ ಕುಸಿತ ಕಂಡಿದ್ದು ಇಂದು ಸೋಂಕಿನಿಂದ 353 ಮಂದಿ ಸಾವನ್ನಪ್ಪಿದ್ದಾರೆ.
ಯಡಿಯೂರ ಹೊಣಗೇಡಿ ಸಿಎಂ
ಯಡಿಯೂರಪ್ಪನಂಥ ಹೊಣೆಗೇಡಿ ಸಿಎಂ ಮತ್ತೊಬ್ಬರಿಲ್ಲ. ನಾನು ಸಿಎಂಗೆ 12 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಡ್ಲಿಲ್ಲ. ಕೇಂದ್ರದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಡಿಸಿಗಳ ಜೊತೆ ವಿಡಿಯೋ ಸಂವಾದಕ್ಕೆ ಸರ್ಕಾರ ಅವಕಾಶ ಕೊಟ್ಟಿಲ್ಲ. ಆ ಮೂಲಕ ನನ್ನ ಹಕ್ಕು ಚ್ಯುತಿಯಾಗಿದೆ. ವಿರೋಧ ಪಕ್ಷದ ನಾಯಕ ಶ್ಯಾಡೋ ಸಿಎಂ ಇದ್ದಂತೆ. ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ಇದು. ನನ್ನ ಹಕ್ಕು ಚ್ಯುತಿಯಾಗಿದ್ದು, ಈ ಸಂಬಂಧ ನಾನು ಹಕ್ಕು ಚ್ಯುತಿ ಮಂಡನೆ ಮಾಡಲಿದ್ದೇನೆ ಎಂದು ತಿಳಿಸಿದರು.
ಕೊರೊನಾ ಮರಣಕೇಕೆ
ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ಸಾವುಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೆಮ್ಮಾರಿ ಕೊರೊನಾ 4,209 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇನ್ನು ನಿನ್ನೆ ದೇಶದಲ್ಲಿ 3,57,295 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಈವರೆಗೆ ದೇಶದಲ್ಲಿ ಕೊರೊನಾ ಸೋಂಕಿನಿಂದ 2,27,12,735 ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿನ್ನೂ 30,27,925 ಸಕ್ರಿಯ ಪ್ರಕರಣಗಳಿವೆ.
ದೀದಿಗಾಗಿ ರಾಜೀನಾಮೆ
ಪಶ್ಚಿಮ ಬಂಗಾಳ : ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿಎಂಸಿ ನಾಯಕ ಸೊವಾಂದೇವ್ ಚಟ್ಟೋಪಾಧ್ಯಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಸಿಎಂ ಮಮತಾ ಬ್ಯಾನರ್ಜಿ ಈ ಸ್ಥಾನದಿಂದ ಸ್ಪರ್ಧಿಸಲಿದ್ದಾರಂತೆ. ವಿಧಾನಸಭಾ ಚುನಾವಣೆಯಲ್ಲಿ ಮಮತಾ ನಂದಿಗ್ರಾಮ್ ನಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ 6 ತಿಂಗಳ ಒಳಗಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಂತು ಆರಿಸಿಬರಬೇಕಿದೆ.
ಸಿಎಂ ಮಮತಾ ಬ್ಯಾನರ್ಜಿಗಾಗಿ ದಾರಿ ಮಾಡಿಕೊಟ್ಟ ಸೊವಾಂದೇಬ್
ಕೆ.ಆರ್, ಪೇಟೆ ಕೃಷ್ಣ ನಿಧನ
ಬೆಂಗಳೂರು : ಹಿರಿಯ ರಾಜಕಾರಣಿ, ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನಿಧನ
ಇಂದು 9 ಸಾವಿರ ಕೇಸ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರೆದಿದ್ದು, ಇಂದು 9,601 ಜನರಿಗೆ ಕೋವಿಡ್ ಸೋಂಕು ತಗುಲಿದೆ. ನಗರದಲ್ಲಿ 3,06,625 ಸಕ್ರಿಯ ಪ್ರಕರಣಗಳಿವೆ. ಮುಖ್ಯವಾಗಿ ನಗರದ ಬೊಮ್ಮನಹಳ್ಳಿ 912, ದಾಸರಹಳ್ಳಿ 313, ಬೆಂಗಳೂರು ಪೂರ್ವ 1,207, ಮಹಾದೇವಪುರ 1,707, ಆ???ಆರ್ ನಗರ 613, ಬೆಂಗಳೂರು ದಕ್ಷಿಣ 884, ಬೆಂಗಳೂರು ಪಶ್ಚಿಮ 865, ಯಲಹಂಕದಲ್ಲಿ 657 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಚಿರು ಆಕ್ಸಿಜನ್ ಬ್ಯಾಂಕ್
ಬ್ಲಾಡ್ ಬ್ಯಾಂಕ್ ಮತ್ತು ಐ ಬ್ಯಾಂಕ್ ಬಳಿಕ ಇದೀಗ ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಮೆಗಾಸ್ಟಾರ್ ಚಿರಂಜೀವಿ ಆಕ್ಸಿಜನ್ ಬ್ಯಾಂಕ್ ತೆರೆಯಲು ಮುಂದಾಗಿದ್ದಾರೆ.
ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆಯನ್ನು ತಿಳಿದುಕೊಂಡು ಮೆಗಾಸ್ಟಾರ್ ಆಕ್ಸಿಜನ್ ಬ್ಯಾಂಕ್ ತೆರೆಯಲು ತೀರ್ಮಾನಿಸಿದ್ದಾರೆ. ಸಕಾಲದಲ್ಲಿ ರಕ್ತ ಸಿಗದೇ ಯಾರೂ ಮೃತಪಡಬಾರದೆಂಬ ಸಂಕಲ್ಪದಿಂದ 1998ರಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದರು.
ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ‘ಚಿರು’ ಮೆಗಾ ಆಕ್ಸಿಜನ್ ಬ್ಯಾಂಕ್
ಆಕ್ಸಿಜನ್ ಸಂಗ್ರಹಿಸಿದ ಸಲ್ಮಾನ್
ಬಾಲಿವುಡ್ ನ ಸುಲ್ತಾನ ಸಲ್ಮಾನ್ ಖಾನ್ ಕೋವಿಡ್ 2ನೇ ಅಲೆ ವೇಳೆ , ಬಡವರು , ಕೊರೊಬನಾ ಸೋಂಕಿತರಿಗೆ ಸಾಕಷ್ಟು ಸಹಾಯಗಳನ್ನ ಮಾಡುತ್ತಾ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕಾಂಗ್ರೆಸ್ ಶಾಸಕ ಬಾಬಾ ಸಿದ್ವಿಕ್ ಹಾಗೂ ಅವರ ಪುತ್ರ ಜೇಶಾನ್ ಸಿದ್ವಿಕ್ ಜೊತೆ ಸೇರಿ ಸಲ್ಮಾನ್ ಖಾನ್ ಅವರು ಕೋವಿಡ್-19 ರೋಗಿಗಳಿಗೆ 500 ಆಕ್ಸಿಜನ್ ಸಿಲಿಂಡರ್‍ಗಳನ್ನು ಸಂಗ್ರಹಿಸಿದ್ದಾರೆ. ಅವುಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಮೊದಲ 500 ಆಕ್ಸಿಜನ್ ಸಿಲಿಂಡರ್ ಗಳು ಮುಂಬೈಗೆ ತಲುಪಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಕೊರೊನಾ ಸೋಂಕಿತರು ಈ ಸಂಖ್ಯೆಗೆ ಕರೆ ಮಾಡಿ 8451869785. ನಾವು ಈ ಸಿಲಿಂಡರ್‍ಗಳನ್ನು ಉಚಿತವಾಗಿ ನೀಡುತ್ತೇವೆ, ಒಮ್ಮೆ ಬಳಸಿದ ನಂತರ ಅದನ್ನು ಹಿಂದಿರುಗಿಸಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕೋವಿಡ್ ಸಂಕಷ್ಟ – 500 ಉಚಿತ ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿದ ಸಲ್ಲು ಭಾಯ್..!
ವದಂತಿಗೆ ಇಸಿಬಿ ಫುಲ್ ಸ್ಟಾಪ್
ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಬಳಿ ಬಿಸಿಸಿಐ ಮನವಿ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಸಿಬಿ, ನಮಗೆ ಆ ರೀತಿಯ ಯಾವುದೇ ಕೋರಿಕೆ ಬಂದಿಲ್ಲ ಎಂದು ತಿಳಿಸಿದೆ. ಅರ್ಧಕ್ಕೆ ರದ್ದುಗೊಂಡಿರುವ ಐಪಿಎಲ್ ನಡೆಸಲು ಸಹಾಯವಾಗುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಈ ಕೋರಿಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಈ ಮಾಹಿತಿ ತಳ್ಳಿ ಹಾಕಿದೆ.








