ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಾಕ್ ಡೌನ್ ವಿಸ್ತರಣೆ , ದೀದಿಗಾಗಿ ರಾಜೀನಾಮೆ, ಇಂದು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು : TOP 10 ನ್ಯೂಸ್

Namratha Rao by Namratha Rao
May 21, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಲಾಕ್ ಡೌನ್ ವಿಸ್ತರಣೆ , ದೀದಿಗಾಗಿ ರಾಜೀನಾಮೆ, ಇಂದು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು : TOP 10 ನ್ಯೂಸ್

‘ಮತ್ತೆ ಕರುನಾಡು ಬಂದ್’…  ಲಾಕ್ ಡೌನ್ ವಿಸ್ತರಣೆ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಹಾವಳಿ ಮಿತಿ ಮೀರಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಈ ನಡುವೆ ರಾಜ್ಯ ಸರ್ಕಾರ ಮೇ 25 ರವರೆಗೂ ಲಾಕ್ ಡೌನ್ ಜಾರಿಗೊಳಿಸಿದ್ದು, ಇದನ್ನ ಈಗ  ಜೂನ್ 6 ರವೆಗೂ ವಿಸ್ತರಿಸಲಾಗಿದೆ… ಹೌದು ಕೋವಿಡ್ ತಡೆಗೆ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವೆಂದು ಆರೋಗ್ಯ ಸಚಿವರಾದ ಡಾ. ಸುಧಾಕರ್ ಸೇರಿದಂತೆ ಹಲವರು ಅಭಿಪ್ರಾಯ  ಹೊರಹಾಕಿದ ಬೆನ್ನಲ್ಲೇ ಲಾಕ್ ಡೌನ್ ಅವಧಿಯನ್ನ ವಿಸ್ತರಣೆ ಮಾಡಲಾಗಿದೆ.

Related posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

July 7, 2026
ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

July 7, 2026

ಅಂದ್ರೆ ಮೇ.24ರಿಂದ ಮತ್ತೆ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಬಂದ್ ಆಗಿರಲಿದೆ.. ಜೂನ್ 7 ರ ಬೆಳಿಗ್ಗೆ 6 ಗಂಟೆಯ ವರೆಗೂ ಲಾಕ್ ಡೌನ್ ಆಗಿರಲಿದೆ. ಅಲಲ್ಲದೇ ಮತ್ತಷ್ಟು ಕಠಿಣ ಕ್ರಮಗಳನ್ನ ತರಲಾಗಿದೆ.. ಜನರು 10 ಗಂಟೆಯಾದ್ಮೇಲೂ ಸುಖಾಸುಮ್ಮನೆ ಓಡಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.. ಜೊತೆಗೆ 9.45 ರಷ್ಟರಲ್ಲೇ ಜನರು ಮನೆ ಸೇರಬೇಕು..  ಅಗತ್ಯವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂವರೆಗೂ ಅವಕಾಶ ನೀಡಲಾಡಿದೆ.

ರಾಜ್ಯದಲ್ಲಿ 32,218  ಕೋವಿಡ್ ಕೇಸ್ ಗಳು ಪತ್ತೆ

ಬೆಂಗಳೂರು :  ರಾಜ್ಯದಲ್ಲಿ ಇಂದು ಒಂದೇ ದಿನ 32,218 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ  ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 2-3 ದಿನಗಳಿಂದ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ 52,581 ಮಂದಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ಬಹಿರಂಗಪಡಿಸಿದೆ. ಮತ್ತೊಂದು ಸಮಾಧಾನಕರವಾದ ಸಂಗತಿಯೆಂದ್ರೆ ಇಂದು ಹೊಸ ಕೇಸ್ ಗಳ ಪ್ರಮಾಣವು ಕಡಿಮೆಯಾಗಿದೆ. ಅಲ್ಲದೆ ಸಾವಿನ ಪ್ರಮಾಣದಲ್ಲೂ ಕುಸಿತ ಕಂಡಿದ್ದು ಇಂದು ಸೋಂಕಿನಿಂದ 353 ಮಂದಿ ಸಾವನ್ನಪ್ಪಿದ್ದಾರೆ.

ಯಡಿಯೂರ ಹೊಣಗೇಡಿ ಸಿಎಂ

ಯಡಿಯೂರಪ್ಪನಂಥ ಹೊಣೆಗೇಡಿ ಸಿಎಂ ಮತ್ತೊಬ್ಬರಿಲ್ಲ. ನಾನು ಸಿಎಂಗೆ 12 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಡ್ಲಿಲ್ಲ. ಕೇಂದ್ರದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಡಿಸಿಗಳ ಜೊತೆ ವಿಡಿಯೋ ಸಂವಾದಕ್ಕೆ ಸರ್ಕಾರ ಅವಕಾಶ ಕೊಟ್ಟಿಲ್ಲ. ಆ ಮೂಲಕ ನನ್ನ ಹಕ್ಕು ಚ್ಯುತಿಯಾಗಿದೆ. ವಿರೋಧ ಪಕ್ಷದ ನಾಯಕ ಶ್ಯಾಡೋ ಸಿಎಂ ಇದ್ದಂತೆ. ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ಇದು. ನನ್ನ ಹಕ್ಕು ಚ್ಯುತಿಯಾಗಿದ್ದು, ಈ ಸಂಬಂಧ ನಾನು ಹಕ್ಕು ಚ್ಯುತಿ ಮಂಡನೆ ಮಾಡಲಿದ್ದೇನೆ ಎಂದು ತಿಳಿಸಿದರು.

ಕೊರೊನಾ ಮರಣಕೇಕೆ

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ಸಾವುಗಳ ಸಂಖ್ಯೆ ಮಾತ್ರ ಕಡಿಮೆ ಆಗುತ್ತಿಲ್ಲ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೆಮ್ಮಾರಿ ಕೊರೊನಾ 4,209 ಮಂದಿಯನ್ನು ಬಲಿ ಪಡೆದುಕೊಂಡಿದೆ. ಇನ್ನು ನಿನ್ನೆ ದೇಶದಲ್ಲಿ 3,57,295 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಈವರೆಗೆ ದೇಶದಲ್ಲಿ ಕೊರೊನಾ ಸೋಂಕಿನಿಂದ 2,27,12,735 ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿನ್ನೂ 30,27,925 ಸಕ್ರಿಯ ಪ್ರಕರಣಗಳಿವೆ.

ದೀದಿಗಾಗಿ ರಾಜೀನಾಮೆ

ಪಶ್ಚಿಮ ಬಂಗಾಳ : ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿಎಂಸಿ ನಾಯಕ ಸೊವಾಂದೇವ್ ಚಟ್ಟೋಪಾಧ್ಯಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ಸಿಎಂ ಮಮತಾ ಬ್ಯಾನರ್ಜಿ ಈ ಸ್ಥಾನದಿಂದ ಸ್ಪರ್ಧಿಸಲಿದ್ದಾರಂತೆ. ವಿಧಾನಸಭಾ ಚುನಾವಣೆಯಲ್ಲಿ ಮಮತಾ ನಂದಿಗ್ರಾಮ್ ನಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಹೀಗಾಗಿ ಮಮತಾ ಬ್ಯಾನರ್ಜಿ 6 ತಿಂಗಳ ಒಳಗಾಗಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಂತು ಆರಿಸಿಬರಬೇಕಿದೆ.

ಸಿಎಂ ಮಮತಾ ಬ್ಯಾನರ್ಜಿಗಾಗಿ ದಾರಿ ಮಾಡಿಕೊಟ್ಟ ಸೊವಾಂದೇಬ್

ಕೆ.ಆರ್, ಪೇಟೆ ಕೃಷ್ಣ ನಿಧನ

ಬೆಂಗಳೂರು : ಹಿರಿಯ ರಾಜಕಾರಣಿ, ಮಾಜಿ ವಿಧಾನಸಭಾ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನಿಧನ

ಇಂದು 9 ಸಾವಿರ ಕೇಸ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ಮುಂದುವರೆದಿದ್ದು, ಇಂದು 9,601 ಜನರಿಗೆ ಕೋವಿಡ್ ಸೋಂಕು ತಗುಲಿದೆ. ನಗರದಲ್ಲಿ 3,06,625 ಸಕ್ರಿಯ ಪ್ರಕರಣಗಳಿವೆ. ಮುಖ್ಯವಾಗಿ ನಗರದ ಬೊಮ್ಮನಹಳ್ಳಿ 912, ದಾಸರಹಳ್ಳಿ 313, ಬೆಂಗಳೂರು ಪೂರ್ವ 1,207, ಮಹಾದೇವಪುರ 1,707, ಆ???ಆರ್ ನಗರ 613, ಬೆಂಗಳೂರು ದಕ್ಷಿಣ 884, ಬೆಂಗಳೂರು ಪಶ್ಚಿಮ 865, ಯಲಹಂಕದಲ್ಲಿ 657 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ಚಿರು ಆಕ್ಸಿಜನ್ ಬ್ಯಾಂಕ್

ಬ್ಲಾಡ್ ಬ್ಯಾಂಕ್ ಮತ್ತು ಐ ಬ್ಯಾಂಕ್ ಬಳಿಕ ಇದೀಗ ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಮೆಗಾಸ್ಟಾರ್ ಚಿರಂಜೀವಿ ಆಕ್ಸಿಜನ್ ಬ್ಯಾಂಕ್ ತೆರೆಯಲು ಮುಂದಾಗಿದ್ದಾರೆ.
ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆಯನ್ನು ತಿಳಿದುಕೊಂಡು ಮೆಗಾಸ್ಟಾರ್ ಆಕ್ಸಿಜನ್ ಬ್ಯಾಂಕ್ ತೆರೆಯಲು ತೀರ್ಮಾನಿಸಿದ್ದಾರೆ. ಸಕಾಲದಲ್ಲಿ ರಕ್ತ ಸಿಗದೇ ಯಾರೂ ಮೃತಪಡಬಾರದೆಂಬ ಸಂಕಲ್ಪದಿಂದ 1998ರಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದರು.

ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ‘ಚಿರು’ ಮೆಗಾ ಆಕ್ಸಿಜನ್ ಬ್ಯಾಂಕ್

ಆಕ್ಸಿಜನ್ ಸಂಗ್ರಹಿಸಿದ ಸಲ್ಮಾನ್

ಬಾಲಿವುಡ್ ನ ಸುಲ್ತಾನ ಸಲ್ಮಾನ್ ಖಾನ್ ಕೋವಿಡ್ 2ನೇ ಅಲೆ ವೇಳೆ , ಬಡವರು , ಕೊರೊಬನಾ ಸೋಂಕಿತರಿಗೆ ಸಾಕಷ್ಟು ಸಹಾಯಗಳನ್ನ ಮಾಡುತ್ತಾ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಕಾಂಗ್ರೆಸ್ ಶಾಸಕ ಬಾಬಾ ಸಿದ್ವಿಕ್ ಹಾಗೂ ಅವರ ಪುತ್ರ ಜೇಶಾನ್ ಸಿದ್ವಿಕ್ ಜೊತೆ ಸೇರಿ ಸಲ್ಮಾನ್ ಖಾನ್ ಅವರು ಕೋವಿಡ್-19 ರೋಗಿಗಳಿಗೆ 500 ಆಕ್ಸಿಜನ್ ಸಿಲಿಂಡರ್‍ಗಳನ್ನು ಸಂಗ್ರಹಿಸಿದ್ದಾರೆ. ಅವುಗಳ  ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಮೊದಲ 500 ಆಕ್ಸಿಜನ್ ಸಿಲಿಂಡರ್ ಗಳು ಮುಂಬೈಗೆ ತಲುಪಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿರುವ ಕೊರೊನಾ ಸೋಂಕಿತರು ಈ ಸಂಖ್ಯೆಗೆ ಕರೆ ಮಾಡಿ 8451869785. ನಾವು ಈ ಸಿಲಿಂಡರ್‍ಗಳನ್ನು ಉಚಿತವಾಗಿ ನೀಡುತ್ತೇವೆ, ಒಮ್ಮೆ ಬಳಸಿದ ನಂತರ ಅದನ್ನು ಹಿಂದಿರುಗಿಸಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟ – 500 ಉಚಿತ ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿದ ಸಲ್ಲು ಭಾಯ್..!

ವದಂತಿಗೆ ಇಸಿಬಿ ಫುಲ್ ಸ್ಟಾಪ್

ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಕ್ರಿಕೆಟ್ ಸಮಿತಿ ಬಳಿ ಬಿಸಿಸಿಐ ಮನವಿ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಸಿಬಿ, ನಮಗೆ ಆ ರೀತಿಯ ಯಾವುದೇ ಕೋರಿಕೆ ಬಂದಿಲ್ಲ ಎಂದು ತಿಳಿಸಿದೆ. ಅರ್ಧಕ್ಕೆ ರದ್ದುಗೊಂಡಿರುವ ಐಪಿಎಲ್ ನಡೆಸಲು ಸಹಾಯವಾಗುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಈ ಕೋರಿಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಈ ಮಾಹಿತಿ ತಳ್ಳಿ ಹಾಕಿದೆ.

 

Tags: CrimefilmInternationalNationalnews updatesSportsstatetop 10 news
ShareTweetSendShare
Join us on:

Related Posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

by Shwetha
July 7, 2026
0

ಯದುವೀರ್ ಒಡೆಯರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ಕಂಬಳ ಆಯೋಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ,...

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

by Shwetha
July 7, 2026
0

ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ...

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

by Shwetha
July 7, 2026
0

ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ...

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

by Shwetha
July 7, 2026
0

ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣದ ಕಿಚ್ಚು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಟ್ಟಿದೆ. ಮೈಸೂರು ನಗರಾಭಿವೃದ್ಧಿ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram