ಹಿಜಬ್ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ
ಹಿಜಬ್ ಪ್ರಕರಣದ ಅರ್ಜಿಗಳು ಕರ್ನಾಟಕ ಹೈಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಹಿಜಬ್ ಧರಿಸಲು ಅನುಮತಿ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ಪೀಠದಲ್ಲಿ ನಡೆದಿದ್ದು, ಪ್ರಕರಣ ಕರ್ನಾಟಕ ಹೈಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.
ಹೆಚ್ಚು ಮಾಹಿತಿ : Hijab |ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆ
‘ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ’….
ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ ಅಥವಾ ಹಿಜಾಬ್ ಆದರೂ ಹಾಕಲಿ. ಯಾವ ಬಟ್ಟೆ ಧರಿಸಬೇಕು ಎಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚು ಮಾಹಿತಿ : Hijab | ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ.. ಹೆಣ್ಣು ಮಕ್ಕಳಿಗೆ ಹಕ್ಕಿದೆ
ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ : ರೇಣುಕಾಚಾರ್ಯ
ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪ್ರಿಯಾಂಕಾ ಗಾಂಧಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ದೇಶದ ಕ್ಷಮೆ ಕೇಳಬೇಕು. ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂದರು,,, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು .
ಹೆಚ್ಚು ಮಾಹಿತಿ : Hijab Controversy: ಮಹಿಳೆಯರ ಬಟ್ಟೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ: ರೇಣುಕಾಚಾರ್ಯ
ದೇಶದಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 71,365 ಹೊಸ ಪ್ರಕರಣಗಳು ಮತ್ತೆಯಾಗಿವೆ. ಸಕ್ರಿಯ ಪ್ರಕರಣಗಳು 8,92,828 ಇದ್ದು, ಕಳೆದ 24 ಗಂಟೆಯಲ್ಲಿ 1,72,211 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 1,217 ಜನರು ಸಾವನ್ನಪ್ಪಿದ್ದಾರೆ.
ಸಿನಿಮೀಯ ರೀತಿಯಲ್ಲಿ ಯುವಕನ ರಕ್ಷಣೆ
ಕೇರಳ : ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ಬೆಟ್ಟದಿಂದ ಕಾಲು ಜಾರಿ ಬಿದ್ದಿದ್ದ.. ಆದ್ರೆ ಈತನ ಅದೃಷ್ಟ ಚನಾಗಿತ್ತು… ಈತ ಬೆಟ್ಟದ ಬಂಡೆಯ ಸೀಳಿನಲ್ಲಿ ಸಿಲುಕಿ 43 ಗಂಟೆಗಳ ಕಾಲ ಸುಡವ ಬಂಡೆಯ ಮೇಲೆ ಇಕ್ಕಟ್ಟಿನ ಸ್ಥಲದಲ್ಲೇ ಅನ್ನ ನೀರಿಲ್ಲದೇ ಪರದಾಡಿದ್ದ.. 23 ವರ್ಷದ ಬಾಬುವನ್ನ ಇದೀಗ ಸೇನಾ ತಂಡ ಕಾಪಾಡಿದೆ.. ಇಂತಹ ಸಿನಿಮೀಯ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯ ಕುರುಂಬಚಿ ಎಂಬ ಸ್ಥಳದಲ್ಲಿ ನಡೆದಿದೆ..
ಹೆಚ್ಚು ಮಾಹಿತಿ : Kerala Viral : 2 ದಿನಗಳ ಕಾಲ ಬೆಟ್ಟದ ಇಳಿಜಾರಿನ ಬಂಡೆಯಲ್ಲಿ ಸಿಲುಕಿ , ಅನ್ನ ನೀರಿಲ್ಲದೇ ಪರದಾಡಿದ ಯುವಕನ ರಕ್ಷಣೆ ಮಾಡಿದ ಸೇನೆ,,,, ರೋಚಕ,,,,
ಹಿಜಬ್ ವಿವಾದ : ನಟ ಚೇತನ್ ಮಾತು
ಬಸವರಾಜ್ ಬೊಮ್ಮಾಯಿ ಅವರು ಅವರೊಬ್ಬ ನಿಷ್ಪರಿಣಾಮಕಾರಿ, ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್’ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ ಅಂತಾ ಹಿಜಾಬ್ ವಿಚಾರವಾಗಿ ನಟ ಚೇತನ್ ಅಹಿಂಸಾ ಕಿಡಿಕಾರಿದ್ಧಾರೆ. ಜೊತೆಗೆ ಹಿಜಾಬ್ ವಿಷಯದಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ಗೂಂಡಾಗಿರಿಯು ಆಘಾತಕಾರಿಯಾಗಿದೆ ಎಂದಿದ್ದಾರೆ.
ಹೆಚ್ಚು ಮಾಹಿತಿ : chetanahimsa | ಹಿಜಾಬ್ ವಿಷಯದಲ್ಲಿ ಬಹುಸಂಖ್ಯಾತ ಗುಂಡಾಗಿರಿ ಆಘಾತಕಾರಿ
ಹಿಜಬ್ ವಿವಾದ : ರಮ್ಯಾ ಪ್ರತಿಕ್ರಿಯೆ
ರಾಜ್ಯದಲ್ಲಿ ಭುಗಿಲೆದ್ದ ಹಿಜಬ್ ವಿವಾದದ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ಧಾರೆ.. ವೀಡಿಯೋವೊಂದನ್ನು ಟ್ವೀಟ್ ಮಾಡಿರುವ ರಮ್ಯಾ, ಭಾರತದ ಯುವಕರು ಈ ರೀತಿ ಇಬ್ಭಾವಾಗುತ್ತಿರುವುದನ್ನು ನೋಡುತ್ತಿದ್ದರೆ ತುಂಬಾ ಬೇಸರವಾಗುತ್ತದೆ ಎಂದು ಹೇಳಿದ್ದಾರೆ.
ಹೆಚ್ಚು ಮಾಹಿತಿ : Sandalwood : ದೇಶದ ಯುವಕರು ಇಬ್ಭಾಗವಾಗ್ತಿರುವುದು ಬೇಸರದ ವಿಚಾರ : ರಮ್ಯಾ
ಹಿಜಬ್ ವಿವಾದ – ತಮಿಳು ನಾಡು ಸರ್ಕಾರಕ್ಕೆ ಕಮಲ್ ಹಾಸನ್ ಮನವಿ
ಈ ಕುರಿತು ನಟ ಕಮಲ್ ಹಾಸನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಆತಂಕ ಹೊರಹಾಕಿದ್ದಾರೆ. ಮುಗ್ಧ ವಿದ್ಯಾರ್ಥಿಗಳಲ್ಲಿ ಕೋಮು ವಿಭಜನೆ ಸೃಷ್ಟಿಸುತ್ತಿದೆ. ನೆರೆಯ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ತಮಿಳುನಾಡಿನಲ್ಲಿ ನಡೆಯಬಾರದು. ರಾಜ್ಯದ ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ತಮಿಳುನಾಡು ಹೆಚ್ಚು ಜಾಗರೂಕರಾಗಿರಬೇಕು ಎಂದು ಕಮಲ್ ಹಾಸನ್ ಮನವಿ ಮಾಡಿಕೊಂಡಿದ್ದಾರೆ. ಕಮಲ್ ಟ್ವೀಟ್ ನಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಆತಂಕ ಸೃಷ್ಠಿ ಮಾಡಿದೆ.
ಹೆಚ್ಚು ಮಾಹಿತಿ : Hijab | ಹಿಜಾಬ್ ವಿವಾದ.. ಕಮಲ್ ಹಾಸನ್ ಹೇಳಿದ್ದೇನು..?
ಅಪರೂಪದ ದಾಖಲೆ ಬರೆದ ಸೂರ್ಯಕುಮಾರ್
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅಪರೂಪದ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ 30 ರನ್ ಗಳಿಸುವ ಮೂಲಕ ಮೊದಲ ಆರು ಮ್ಯಾಚ್ ಗಳಲ್ಲಿ 30ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ನೆಲದಲ್ಲಿ ಕೊಹ್ಲಿ 100ನೇ ಪಂದ್ಯ…
ವಿರಾಟ್ ಕೊಹ್ಲಿ, ಇಂದು ನರೇಂದ್ರ ಮೋದಿ ಮೈದಾನದಲ್ಲಿ ಕಣಕ್ಕಿಳಿಯುವ ಮೂಲಕ ಭಾರತದ ನೆಲದಲ್ಲಿ 100ನೇ ಪಂದ್ಯವಾಡುತ್ತಿದ್ದಾರೆ. ಇದರೊಂದಿಗೆ ಭಾರತದಲ್ಲಿ ನೂರು ಪಂದ್ಯಗಳನ್ನಾಡಿದ ಭಾರತೀಯ ಕ್ರಿಕೆಟರ್ ಗಳ ಪಟ್ಟಿಯಲ್ಲಿ ಐದನೇ ಸ್ಥಾನಲ್ಲಿದ್ದಾರೆ. ಕೊಹ್ಲಿಗಿಂತ ಮೊದಲು ಕೇವಲ ನಾಲ್ಕು ಆಟಗಾರರು ಮಾತ್ರ ಭಾರತದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.