ಕೊಹ್ಲಿ ಸೆಂಚೂರಿಗಾಗಿ ಪಾಕ್ ಆಟಗಾರರಿಂದ ಪ್ರಾರ್ಥನೆ…
ಟೀಂ ಇಂಡಿಯಾ ಮೆಷಿನ್ ಗನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸುಮಾರು ಮೂರು ವರ್ಷಗಳಾಗುತ್ತಿದೆ. ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸದೇ ಈ ರೀತಿ ವರ್ಷಗಳನ್ನು ಕಳೆಯುತ್ತಿರುವುದು ಇದೇ ಮೊದಲು. ವಿರಾಟ್ ಯಾವಾಗ ಶತಕ ಬಾರಿಸುತ್ತಾರೆ ಎಂದು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಪಾಕಿಸ್ತಾನ ಕ್ರಿಕೆಟಿಗರು ಸೇರಿದಂತೆ ಆ ದೇಶದ ಕ್ರಿಕೆಟ್ ಅಭಿಮಾನಿಗಳು ಕೂಡ ಕೊಹ್ಲಿಯ ಶತಕಕ್ಕೆ ಪ್ರಾರ್ಥನೆ ನಡೆಸುತ್ತಿದ್ದಾರಂತೆ. ಪಿಎಸ್ಎಲ್ (ಪಾಕಿಸ್ತಾನ ಪ್ರೀಮಿಯರ್ ಲೀಗ್) ನಲ್ಲಿ ಭಾಗವಹಿಸುತ್ತಿರುವ ಇಸ್ಲಾಮಾಬಾದ್ ಯುನೈಟೆಡ್ ಸ್ಟ್ರಾಟೆಜಿ ಮ್ಯಾನೇಜರ್ ಹಸನ್ ಚೀಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಹೆಚ್ಚಿನ ಮಾಹಿತಿ : Virat ಕೊಹ್ಲಿ ಸೆಂಚೂರಿಗಾಗಿ ಪಾಕ್ ಆಟಗಾರರಿಂದ ಪ್ರಾರ್ಥನೆ
ರೇಡ್ ಪಾಯಿಂಟ್ಸ್ ಟೇಬಲ್ ನಲ್ಲಿ ಈ ಲೀಗ್ ನಲ್ಲಿ ಟಾಪ್ 5 ರಲ್ಲಿ ಯಾವೆಲ್ಲಾ ರೈಡರ್ಸ್ ಇದ್ದಾರೆ…????
- ಪವನ್ ಶೆರಾವತ್ – ಬೆಂಗಳೂರು ಬುಲ್ಸ್ ( ಕ್ಯಾಪ್ಟನ್ ) – 17 ಪಂದ್ಯಗಳಿಂದ 276 ರೇಡ್ ಪಾಯಿಂಟ್ಸ್…
- ಮಣೀಂದರ್ ಸಿಂಗ್ – ಬೆಂಗಾಲ್ ವಾರಿಯರ್ಸ್ – 15 ಪಂದ್ಯಗಳಿಂದ 187 ರೇಡ್ ಪಾಯಿಂಟ್ಸ್…
- ಅರ್ಜುನ್ ದೇಶ್ವಾಲ್ – ಜೈಪುರ ಪಿಂಕ್ ಪ್ಯಾಂಥರ್ಸ್ – 14 ಪಂದ್ಯಗಳಿಂದ 169 ರೇಡ್ ಪಾಯಿಂಟ್ಸ್…
- ನವೀನ್ ಕುಮಾರ್ – ದಬಾಂಗ್ ದೆಲ್ಲಿ – 9 ಪಂದ್ಯಗಳಿಂದ 135 ರೇಡ್ ಪಾಯಿಂಟ್ಸ್…
- ವಿಕಾಸ್ ಕೊಂಡಲಾ – ಹರಿಯಾಣ ಸ್ಟೀಲರ್ಸ್ -15 ಪಂದ್ಯಗಳಿಂದ 123 ರೇಡ್ ಪಾಯಿಂಟ್ಸ್…
ಹೆಚ್ಚಿನ ಮಾಹಿತಿ : Pro kabaddi 2022 : ರೇಡ್ ಪಾಯಿಂಟ್ಸ್ ಟೇಬಲ್ ನಲ್ಲಿ ನಮ್ಮ ಗೂಳಿಯೇ ನಂ. 1….
Pro Kabaddi: ಯು.ಪಿ ಮಣಿಸಿದ ಬುಲ್ಸ್
ಬೆಂಗಳೂರು ಬುಲ್ಸ್ ತಂಡ, ಮಂಗಳವಾರ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯ 87 ನೇ ಲೀಗ್ ಪಂದ್ಯದಲ್ಲಿ ಯು.ಪಿ.ಯೋಧಾ ತಂಡದ ವಿರುದ್ಧ ಐದು ಅಂಕಗಳ ಜಯ ದಾಖಲಿಸಿತು. ಬೆಂಗಳೂರು ಬುಲ್ಸ್ ತಂಡ ಆಡಿದ ಹದಿನೇಳು ಪಂದ್ಯಗಳ ಪೈಕಿ ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿ, ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿ, ಒಂದು ಪಂದ್ಯ ಡ್ರಾ ಮಾಡಿಕೊಂಡು ಒಟ್ಟು 51 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿಯಿತು.
ಹೆಚ್ಚಿನ ಮಾಹಿತಿ : Virat ಕೊಹ್ಲಿ ಸೆಂಚೂರಿಗಾಗಿ ಪಾಕ್ ಆಟಗಾರರಿಂದ ಪ್ರಾರ್ಥನೆ
ಸಿರಾಜ್ ಅವರ ಬದುಕು ಹೂವಿನ ಹಾದಿಯಾಗಿರಲಿಲ್ಲ.
ಹಲವು ಯುವ ಕ್ರಿಕೆಟಿಗರಂತೆ ಹೈದರಾಬಾದಿನ ವೇಗಿ ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್‌ನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಟೀಂ ಇಂಡಿಯಾಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿ ಸಿರಾಜ್ ಖಾಯಂ ಸದಸ್ಯರಾಗಿದ್ದಾರೆ. ಆದ್ರೆ ಹಲವು ಆಟಗಾರರಂತೆ ಸಿರಾಜ್ ಅವರ ಬದುಕು ಹೂವಿನ ಹಾದಿಯಾಗಿರಲಿಲ್ಲ. ಅವರ ತಂದೆ ಆಟೋ ಚಾಲಕರಾಗಿದ್ದರು. ಕಷ್ಟದಲ್ಲಿಯೇ ಬೆಳೆದ ಸಿರಾಜ್ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ.
ಹೆಚ್ಚಿನ ಮಾಹಿತಿ : IPL 2022 | ಆ ದುಡ್ಡಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಕೊಂಡಿದ್ದೆ : ಸಿರಾಜ್TOP 4 Sports News : ಕ್ರೀಡಾ ಜಗತ್ತಿನ ಇಂದಿನ ಟಾಪ್ 4 ಸುದ್ದಿಗಳು…








