ರಾಮ್ ಚರಣ್ ಮುಂದಿನ ಸಿನಿಮಾಗೆ ಶಂಕರ್ ಆಕ್ಷನ್ ಕಟ್: ಇದು ಮೆಗಾ ಪವರ್ ಕಾಂಬೋ
ರಾಮ್ ಚರಣ್ ಮುಂದಿನ ಸಿನಿಮಾಗೆ ಶಂಕರ್ ಆಕ್ಷನ್ ಕಟ್: ಇದು ಮೆಗಾ ಪವರ್ ಕಾಂಬೋ
ಆರ್ ಆರ್ ಆರ್ ಸಿನಿಮಾ ಬಳಿಕ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ಅವರ ಮುಂದಿನ ಸಿನಿಮಾ ಯಾವುದು..? ಮೆಗಾ ಪವರ್ ಸ್ಟಾರ್ ಗೆ ಆಕ್ಷನ್ ಕಟ್ ಹೇಳಲಿರುವ ಡೈರೆಕ್ಟರ್ ಯಾರು..?
ಆರ್ ಆರ್ ಆರ್ ಸಿನಿಮಾದಂತ ಬಿಗ್ ಪ್ಯಾನ್ ಇಂಡಿಯಾ ಸಿನಿಮಾ ಬಳಿಕ ಚರ್ರಿ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಅನ್ನೋ ಕೋಟ್ಯಾಂತರ ಮೆಗಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮೆಗಾ ಬುಲ್ಲೋಡು, ರಾಮ್ ಚರಣ್ ಆರ್ ಆರ್ ಆರ್ ಸಿನಿಮಾ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.
ಅದ್ರಲ್ಲೂ ಅದಕ್ಕೆ ಇಂಡಿಯನ್ ಸಿನಿಮಾ ಇಂಡಸ್ಟ್ರೀಯ ಸ್ಟಾರ್ ಡೈರಕ್ಟರ್ ತಮಿಳಿನ ಶಂಕರ್ ಆಕ್ಷನ್ ಕಟ್ ಹೇಳಲಿದ್ದಾರೆ ಅನ್ನೋದು ಅಧಿಕೃತವಾಗಿ ಘೋಷಣೆಯಾಗಿದೆ.
ಹೌದು..! ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾಗೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಎಸ್ ವಿಸಿ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಆದ್ರೆ ರಾಮ್ ಚರಣ್ ಅಭಿನಯಿಸುತ್ತಿರುವ 15 ನೇ ಸಿನಿಮಾ ಇದಾಗಿದೆ. ಹೀಗಾಗಿ ಇದನ್ನು ಆರ್ ಸಿ 15 ಅಂತ ಕರೆಯಲಾಗುತ್ತಿದೆ.
‘ರಾಬರ್ಟ್’ ನಲ್ಲಿ ಹೇಗಿದೆ ಗೊತ್ತಾ ಜಗಪತಿ ಲುಕ್ : ಫಸ್ಟ್ ಲುಕ್ ರಿಲೀಸ್..!
‘ರಾಬರ್ಟ್’ ನಲ್ಲಿ ಹೇಗಿದೆ ಗೊತ್ತಾ ಜಗಪತಿ ಲುಕ್ : ಫಸ್ಟ್ ಲುಕ್ ರಿಲೀಸ್..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷೆಯ ಚಿತ್ರವಾದ ರಾಬರ್ಟ್ ಸಿನಿಮಾದ ಖಳನಾಯಕನ ಫಸ್ಟ್ ಲುಕ್ ಇಂದು ರಿವೀಲ್ ಆಗಿದೆ. ಹೌದು ಖ್ಯಾತ ನಟ ಜಗಪತಿ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ವಿಶೇಷ ಅಂದ್ರೆ ಜಗಪತಿ ಬಾಬುಗೆ ಹುಟ್ಟುಹಬ್ಬದ ಸಂಭ್ರಮ. ಇದೇ ಪ್ರಯುಕ್ತ ಅವರ ವಿಲ್ಲನ್ ಲುಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭಕೋರಿದೆ ಚಿತ್ರತಂಡ. ಇನ್ನೂ ಜಗಪತಿ ಬಾಬು ಡೇರಿಂಗ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಮೆಂಟ್ ಗಳ ಮೂಲಕ ಜಗಪತಿ ಬಾಬುಗೆ ಶುಭಕೋರ್ತಿದ್ದಾರೆ.
ಅಷ್ಟೇ ಅಲ್ಲ ಮದಗಜ ಚಿತ್ರದಲ್ಲೂ ಸಹ ಖಡಕ್ ವಿಲ್ಲನ್ ಆಗಿ ಕಾಣಿಸಿಕೊಂಡಿರುವ ಜಗಪತಿ ಬಾಬು ಅವರ ಮದಗಜ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟರ್ ಅನ್ನು ಅಪ್ ಲೋಡ್ ಮಾಡುವ ಮೂಲಕ ಜಗಪತಿ ಬಾಬು ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಕನ್ನಡ ತೆಲುಗಿನಲ್ಲಿ ಟೀಸರ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ.
https://www.instagram.com/p/CLLc65glGe-
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
‘ಸೈನೈಡ್ ಮಲ್ಲಿಕಾ’ ಮೀಟ್ಸ್ ‘ ಸೈನೈಡ್ ಮೋಹನ್’ ತೆರೆಗೆ ಬರಲು ರೆಡಿಯಾಗ್ತಿದೆ ಕ್ರೈಂ ಸ್ಟೋರಿ!
ಒಂದು ಟೈಮ್ ನಲ್ಲಿ ದೇಶದ ಜನರಲ್ಲಿ ನಡುಕ ಹುಟ್ಟಿಸಿದ್ದ ಮಹಿಳಾ ಸೈನೈಡ್ ಕಿಲ್ಲರ್ ಮಲ್ಲಿಕಾ ಕುರಿತಾಗಿ ಸಿನಿಮಾವೊಂದು ರೆಡಿಯಾಗ್ತಿದೆ.
‘ಸೈನೈಡ್ ಮಲ್ಲಿಕಾ’ ಟೈಟಲ್ ಆದ್ರೆ ‘ಮೀಟ್ಸ್ ಸೈನೈಡ್ ಮೋಹನ್ ಟ್ಯಾಗ್ ಲೈನ್ ಇಡಲಾಗಿದೆ.
‘ಸೈನೈಡ್ ಮಲ್ಲಿಕಾ’ ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆಮೇಲೆ ಬರಲು ಸಜ್ಜಾಗ್ತಿದೆ.
ಸೈನೈಡ್ ಕಿಲ್ಲರ್ ಮಲ್ಲಿಕಾ ಮತ್ತು ಸೈನೈಡ್ ಕಿಲ್ಲರ್ ಮೋಹನ್ ಇವರಿಬ್ಬರ ಕಥೆಯನ್ನು ತೆರೆಮೇಲೆ ತರುತ್ತಿರುತ್ತಿರುವವರು ಗುರು.
ಈ ಚಿತ್ರಕ್ಕೆ ಬಂಡವಳಾ ಹೂಡುವ ಜೊತೆಗೆ ಆಕ್ಷನ್ ಹೇಳ್ತಿದ್ದಾರೆ ಗುರು.
ಇನ್ನೂ ‘ಸೈನೈಡ್ ಮಲ್ಲಿಕಾ’ ಸಿನಿಮಾದಲ್ಲಿ ನಟಿ ಸಂಜನಾ ಪ್ರಕಾಶ್ ‘ಸೈನೈಡ್ ಮಲ್ಲಿಕಾ’ ಆಗಿ ಕಾಣಿಸಿಕೊಳ್ತಿದ್ದಾರೆ.
ಇನ್ನೂ ನಿರ್ದೇಶಕ ಗುರು ಈ ಚಿತ್ರದಲ್ಲಿ ‘ಸೈನೈಡ್ ಮೋಹನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ವಿಶೇಷತೆ ಏನಂದ್ರೆ ಚಿತ್ರದಲ್ಲಿ ಕಾಲ್ಪನಿಕ ಕಥೆಯನ್ನೂ ಸಹ ಹೆಣೆಯಲಾಗಿದೆ.
ಹೌದು ಅಂದ್ರೆ ಸೈನೈಡ್ ಮಲ್ಲಿಕಾ ಹಾಗೂ ಸೈನೈಡ್ ಮೋಹನ್ ಇಬ್ಬರು ರೀಲ್ ನಲ್ಲಿ ಪರಸ್ಪರ ಭೇಟಿಯಾಗುವ ಸನ್ನಿವೇಶವಿದೆ.
ಆದ್ರೆ ರಿಯಲ್ ಲೈಫ್ ಅಲ್ಲಿ ಈ ಇಬ್ಬರೂ ಪರಸ್ಪರ ಸಂಧಿಸಿಯೇ ಇಲ್ಲ.
ಸಿನಿಮಾದಲ್ಲಿ ಈ ಇಬ್ಬರು ಕೊಲೆಗಾರರು ಭೇಟಿಯಾದಾಗ ಏನಾಗುತ್ತದೆ ಎಂಬುದನ್ನು ಕಾಲ್ಪನಿಕ ಸನ್ನಿವೇಶಗಳಲ್ಲಿ ಕಥೆ ಮೂಲಕ ತೆರೆಮೇಲೆ ತರುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕರು.
ಬಿಗ್ ಬಾಸ್ ಕನ್ನಡ -8 : ದೊಡ್ಮನೆಗೆ ‘ಅಗ್ನಿಸಾಕ್ಷಿ ಅಂಜಲಿ’ ಎಂಟ್ರಿ ..!
ಬಿಗ್ ಬಾಸ್ ಕನ್ನಡ -8 : ದೊಡ್ಮನೆಗೆ ‘ಅಗ್ನಿಸಾಕ್ಷಿ ಅಂಜಲಿ’ ಎಂಟ್ರಿ ..!
ಕನ್ನಡದ ಜನಪ್ರಿಯ ಧಾರವಾಹಿಯಾಗಿ ಕಿರುತೆರೆಯ ಅಭಿಮಾನಿಗಳನ್ನ ಸಿಕ್ಕಾಪಟ್ಟೆ ರಂಜಿಸಿದ್ದ ಅಗ್ನಿಸಾಕ್ಷಿಯ ಅಂಜಲಿ ಇದೀಗ ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು ಅಗ್ನಿಸಾಕ್ಷಿಯಲ್ಲಿ ಅಂಜಲಿಯಾಗಿ ಜನರ ಗಮನ ಸೆಳೆದಿದ್ದ ಕಿರುತೆರೆ ನಟಿ ಸುಕೃತಾ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಆಡಲಿದ್ದಾರೆ ಎನ್ನಲಾಗ್ತಿದೆ.
ಬಿಗ್ ಬಾಸ್ ಕನ್ನಡ – 8 ಆರಂಭಕ್ಕೆ ಡೇಟ್ ಫಿಕ್ಸ್..! ಈ ಸೀಸನ್ ನಲ್ಲಿ ಕೆಲ ಬದಲಾವಣೆಗಳಾಗಲಿವೆ..!
ಬಿಗ್ ಬಾಸ್ ಕನ್ನಡ ಸೀಸನ್-8 ಇದೇ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ 28ಕ್ಕೆ ಪ್ರಾರಂಭವಾಗಲಿರೋದು ಬಹುತೇಕ ಫೈನಲ್ ಆಗಿದೆ. ಈ ಬಾರಿಯ ಬಿಗ್ ಬಾಸ್ ಗೆ ಯಾರೆಲ್ಲ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ವೈರಲ್ ಆಗಿದೆ. ಯಾರೆಲ್ಲಾ ಇರಬಹುದು ಎನ್ನುವ ಕುತೂಹಲದ ನಡುವೆ ಈ ಲಿಸ್ಟ್ ನಲ್ಲಿ ಕಿರುತೆರೆಯ ಖ್ಯಾತ ನಟಿ ಸುಕೃತಾ ನಾಗ್ ಇರ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಬಿಗ್ ಬಾಸ್ ಕನ್ನಡ – 8 ಆರಂಭಕ್ಕೆ ಡೇಟ್ ಫಿಕ್ಸ್..! ಈ ಸೀಸನ್ ನಲ್ಲಿ ಕೆಲ ಬದಲಾವಣೆಗಳಾಗಲಿವೆ..!
ಕನ್ನಡ ಬಿಗ್ ಬಾಸ್ ಸೀಸನ್ 8 ಇದೇ ತಿಂಗಳ ಅಂತ್ಯಕ್ಕೆ ಆರಂಭವಾಗಲಿರೋದು ಫಯನಲ್ ಆಗಿದೆ. ಈಗಾಗಲೇ ಪ್ರೋಮೋ ಬಿಡುಗಡೆ ಆಗಿದೆ. ಇದೇ ತಿಂಗಳ 28 ರಂದು ಬಿಗ್ಬಾಸ್ ಪ್ರಸಾರ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಕೊರೊನಾ ಹಾವಳಿ ಕಾರಣದಿಂದಾಗಿ ಈ ಬಾರಿಯ ಸೀಸನ್ ನಲ್ಲಿ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಲಿರುವ ಸ್ಪರ್ಧಾಳುಗಳಿಗೆ ಮೊದಲೇ ಕ್ವಾರಂಟೈನ್ ವಿಧಿಸಲಾಗಿರುತ್ತದೆ. ಬಿಗ್ ಬಾಸ್ ಶೋ ಗೆ ಬರುವ ಮುನ್ನಾ ಅವರ ಆರೋಗ್ಯ ತಪಾಸಣೆ ಮತ್ತು ಕೊರೊನಾ ತಪಾಸಣೆ ಮಾಡಿಸಲಾಗುತ್ತದೆ. ಸ್ಪರ್ಧಿಗಳ ಬೆಡ್ ಗಳು ದೂರ ಇರುವ ಸಾಧ್ಯತೆ ಇದೆ. ಅಲ್ದೇ ತಮಿಳಿನ ಬಿಗ್ ಬಾಸ್ ನಲ್ಲಿ ಯಾವ ರೀತಿ ಸ್ವಿಮ್ಮಿಂಗ್ ಬಳಸುವುದಕ್ಕೆ ನಿಷೇಧ ವಿಧಿಸಲಾಗಿತ್ತೋ ಅದೇ ಮಾದರಿಯಲ್ಲೇ ಕನ್ನಡದ ಬಿಗ್ ಬಾಸ್ ನಲ್ಲೂ ಸ್ವಿಮ್ಮಿಂಗ್ ಫೂಲ್ ಬಳಕೆಗೆ ಬ್ರೇಕ್ ಹಾಕುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅಲ್ದೇ ಇನ್ನೂ ಕೆಲವು ಬದಲಾವಣೆಗಳನ್ನು ಈ ಬಾರಿಯ ಬಿಗ್ ಬಾಸ್ ಹೌಸ್ನಲ್ಲಿ ತರಲಾಗುವುದು ಎಂದು ಹೇಳಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel