ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀಯ ಸುದ್ದಿಗಳು : LATEST UPDATES
ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ
ವರ್ಷದ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡ ಬಾರತದ GDP
ವರ್ಷದ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡ ಬಾರತದ GDP
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅಂದ್ರೆ ಅಕ್ಟೋಬರ್ ನಿಂದ- ಡಿಸೆಂಬರ್ 2020 ರವರೆಗಿನ ಅವಧಿಯಲ್ಲಿ ಭಾರತದ GDPಯು ಶೇಕಡಾ 0.4 ರಷ್ಟು ಏರಿಕೆಯಾಗಿದೆ. ಕೊರೊನಾ ಹಾವಳಿಯಯಿಂದ ಕಳೆದೆರೆಡು ತ್ರೈಮಾಸಿಕದಲ್ಲಿ ಮುಗ್ಗರಿಸಿದ್ದ ಜಿಡಿಪಿ ಸದ್ಯ 3ನೇ ತ್ರೈಮಾಸಿಕದಲ್ಲಿ ಚೇತರಿಸಿಕೊಂಡಿದೆ. ರಾಷ್ಟ್ರೀಯ ಸಾಂಖ್ಯಿಯ ಕಚೇರಿ ಶುಕ್ರವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಭಾರತ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ. ಆದ್ರೆ ರಾಯಿಟರ್ಸ್ ನಡೆಸಿದ್ದ ಸಮೀಕ್ಷೆಯಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 0.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ವರದಿಯಾಗಿತ್ತು. ಆದರೆ ಈ ಸಮೀಕ್ಷೆ ಇದೀಗ ಹುಸಿಯಾಗಿದ್ದು, ಅಮೀಕ್ಷೆಗಿಂತಲೂ ಕಡಿಮೆ (ಶೇ.0.4) ಬೆಳವಣಿಗೆ ದಾಖಲಾಗಿದೆ. ಆದರೆ ಕಳೆದೆರೆಡು ತ್ರೈಮಾಸಿಕಗಳಿಗೆ ಹೋಲಿಗೆ ಮಾಡಿದ್ರೆ ಸದ್ಯ ಸಕಾರಾತ್ಮಕವಾಗಿದ್ದು, ನಿಧಾನವಾಗಿ ಟ್ರ್ಯಾಕ್ ಗೆ ಬರುತ್ತಿದೆ.
ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಮತ್ತೆ ಮಾರ್ಚ್ 31ರ ವರೆಗೆ ವಿಸ್ತರಣೆ..!
ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಮತ್ತೆ ಮಾರ್ಚ್ 31ರ ವರೆಗೆ ವಿಸ್ತರಣೆ..!
ನವದೆಹಲಿ : ಭಾರತದ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಹೌದು ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರ ನಿರ್ಬಂಧವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ಯಾರೇ ದೇಶ ವಾಸಿಯೋ…! ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ..!
ಪ್ಯಾರೇ ದೇಶ ವಾಸಿಯೋ…! ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ..!
ನವದೆಹಲಿ : ಕೆಲ ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಡೀಸೆಲ್ ದರ 3 ದಿನಗಳಿಂದ ಕೊಂಚ ಬ್ರೇಕ್ ಪಡೆದಿತ್ತು. ಇದರಿಂದಾಗಿ ವಾಹನ ಸವಾರರು ಸ್ವಲ್ಪ ನಿರಾಳರಾಗಿದ್ದರು. ದೇಶದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು, ಶೀಘ್ರವೇ ರಾಜ್ಯದಲ್ಲೂ ಸೆಂಚುರಿ ಬಾರಿಸಲಿದೆ. ಈ ಆಘಾತದಲ್ಲಿರುವ ಸವಾರರಿಗೆ ಮತ್ತೊಮ್ಮೆ ಶಾಕ್ ಆಗಿದೆ. ಯಾಕಂದ್ರೆ 3 ದಿನಗಳ ಬಳಿಕ ಮತ್ತೆ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಡೀಸೆಲ್ ದರದಲ್ಲಿ 15 ಪೈಸೆ ಏರಿಕೆಯಾಗಿದೆ. ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.
ದೆಹಲಿಯಲ್ಲಿ 91.17 ರೂಪಾಯಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ 81.47 ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 94.22 ರೂಪಾಯಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ 86.37 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈನಲ್ಲಿ 97.57 ರೂಪಾಯಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ 88.60 ರೂಪಾಯಿಗೆ ಏರಿಕೆಯಾಗಿದೆ.
ಕೋಲ್ಕತಾದಲ್ಲಿ 91.35 ರೂಪಾಯಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ 84.35 ರೂಪಾಯಿಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ 93.11 ರೂಪಾಯಿಗೆ ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ 86.45 ರೂಪಾಯಿಗೆ ಏರಿಕೆಯಾಗಿದೆ.
ಎಲ್ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?
ಎಲ್ಒಸಿ ಕದನ ವಿರಾಮ ಕುರಿತು ಭಾರತ ಪಾಕಿಸ್ತಾನ ಜಂಟಿ ಹೇಳಿಕೆ ಏಕೆ ಮುಖ್ಯವಾಗಿದೆ ?
ಹೊಸದಿಲ್ಲಿ, ಫೆಬ್ರವರಿ27: ಫೆಬ್ರವರಿ 24 ರ ಮಧ್ಯರಾತ್ರಿಯಿಂದ (ಬುಧವಾರ) ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಾರಂಭಿಸಿದ್ದಾಗಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಫೆಬ್ರವರಿ 25 ರಂದು ಪ್ರಕಟಿಸಿವೆ.
ಫೆಬ್ರವರಿ 22 ರಂದು ತಮ್ಮ ದೂರವಾಣಿ ಹಾಟ್ಲೈನ್ನಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ಪರಮ್ಜಿತ್ ಸಿಂಗ್ ಸಂಘ ಮತ್ತು ಪಾಕಿಸ್ತಾನದ ಲೆಫ್ಟಿನೆಂಟ್ ಮೇಜ್ ಜನರಲ್ ನೌಮನ್ ಜಕಾರಿಯಾ ಅವರ ನಡುವಿನ ಚರ್ಚೆಯ ನಂತರ ಸೈನ್ಯವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಆಡಿಯೋ ಹೇಳಿಕೆಯಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತಾ ವ್ಯವಹಾರಗಳ ಸಲಹೆಗಾರ ಮೊಯೀದ್ ಯೂಸುಫ್ ಕದನ ವಿರಾಮವು ತೆರೆಮರೆಯಲ್ಲಿ ನಡೆದ ಮಾತುಕತೆಗಳ ಫಲಿತಾಂಶವಾಗಿದೆ. ಭವಿಷ್ಯದಲ್ಲಿ ಹಿಂಸಾಚಾರಗಳು ಮತ್ತು ಉದ್ವಿಗ್ನತೆಗಳು ಕಡಿಮೆಯಾಗುತ್ತದೆ ಎಂದು ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.