ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!
ಪೆರು: ಸಾಮಾನ್ಯವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ರೆ ಟ್ರಾಫಿಕ್ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ವಾಗ್ವಾದ, ದಂಡ ಕಟ್ಟಿಸಿಕೊಳ್ಳುವುದು ಇಲ್ಲ ಮನವಿ ಮಾಡಿಕೊಂಡ್ರೆ ಪೊಲೀಸರು ವಾರ್ನ್ ಮಾಡಿ ಕಳುಹಿಸಿಬಿಡ್ತಾರೆ. ಆದ್ರೆ ಪೆರುವಿನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಯುವತಿಗೆ ಕಿಸ್ ಮಾಡಿದ್ದು, ಕೋವಿಡ್ ನಿಯಮವನ್ನೂ ಉಲ್ಲಂಘಿಸಿದ್ದಾರೆ. ಆ ಅಧಿಕಾರಿಯನ್ನ ಸದ್ಯ ಅಮಾನತುಗೊಳಿಸಲಾಗಿದೆ. ಈ ಬಗೆಗಿನ ಫೋಟೋಗಳು ವೈರಲ್ ಅಗ್ತಿದೆ. ಸಿಸಿಟಿಯ ವಿಡಿಯೋ ತುಣುಕು ವೈರಲ್ ಆಗಿದೆ. ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದರ ಬದಲಿಗೆ ಚುಂಬನ ಕೊಡುವಂತೆ ಆಕೆಯ ಮನವೊಲಿಸಿದ್ದಾನೆ.
ವಾಟ್ಸಾಪ್ ಗೆ ಟಕ್ಕರ್ ಕೊಲು ಬರುತ್ತಿದೆ ಮೇಡ್ ಇನ್ ಇಂಡಿಯಾ ‘ವಾಟ್ಸಾಪ್’..!
ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು, ಆದರೆ ಕೆಲವು ಸೆಕೆಂಡುಗಳ ಹಿಂಜರಿಕೆಯ ನಂತರ, ಅಧಿಕಾರಿ ಅವಳನ್ನು ಚುಂಬಿಸಲು ಮುಂದಾಗುತ್ತಾನೆ. ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದ್ದು ತನಿಖೆಯ ನಂತರ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.