ರವಿ ಡಿ ಚೆನ್ನಣ್ಣನವರ್ ಸೇರಿ 12 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

1 min read
IPS

ರವಿ ಡಿ ಚೆನ್ನಣ್ಣನವರ್ ಸೇರಿ 12 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಭಾಗದ ಎಸ್ಪಿ ರವಿ ಡಿ ಚೆನ್ನಣ್ಣನವರ್ ಅವರನ್ನು ಸೇರಿದಂತೆ 12 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಭಾಗದ ಎಸ್ಪಿ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಇನ್ನುಳಿದಂತೆ ತುಮಕೂರು ಎಸ್ ಪಿಯಾಗಿದ್ದ ಕೋನ ವಂಶಿ ಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರಕ್ಕೆ, ಸಿಐಡಿ ಎಸ್ ಪಿಯಾಗಿದ್ದ ರಾಹುಲ್ ಕುಮಾರ್ ಶಹಪೂರ್ವಾಡ್ ಅವರನ್ನು ತುಮಕೂರು ಎಸ್‍ಪಿಯಾಗಿ ವರ್ಗಾಯಿಸಲಾಗಿದೆ. ಉಡುಪಿಯಲ್ಲಿ ಕರಾವಳಿ ಭದ್ರತಾ ಪೆÇಲೀಸ್ ಪಡೆಯ ಎಸ್ ಪಿಯಾಗಿದ್ದ ಆರ್.ಚೇತನ್ ಅವರನ್ನು ಮೈಸೂರು ಎಸ್ ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

IPS

ಕೋಲಾರ ಎಸ್ ಪಿಯಾಗಿದ್ದ ಕಾರ್ತಿಕ್ ರೆಡ್ಡಿಯವರನ್ನು ಬೆಂಗಳೂರಿನ ವೈರ್ ಲೆಸ್ ವಿಭಾಗಕ್ಕೆ, ಬೆಂಗಳೂರಿನ ವೈರ್ ಲೆಸ್ ವಿಭಾಗದ ಎಸ್ ಪಿಯಾಗಿದ್ದ ಅದ್ದೂರು ಶ್ರೀನಿವಾಸುಲು ಅವರನ್ನು ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ, ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ದೆಕ್ಕಾ ಕಿಶೋರ್ ಬಾಬು ಅವರನ್ನು ಕೋಲಾರಕ್ಕೆ, ದಾವಣಗೆರೆ ಎಸ್‍ಪಿಯಾಗಿದ್ದ ಹನುಮಂತರಾಯ ಅವರನ್ನು ಹಾವೇರಿಗೆ, ಹಾವೇರಿ ಎಸ್ ಪಿಯಾಗಿದ್ದ ಕೆ.ಜಿ.ದೇವರಾಜು ಅವರನ್ನು ಸಿಐಡಿ ಎಸ್‍ಪಿಯಾಗಿ ಬೆಂಗಳೂರಿಗೆ. ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಪ್ರಕಾಶ್ ಗೌಡ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ಪಡೆ ಎಸ್‍ಪಿಯಾಗಿ, ಬೆಂಗಳೂರಿನ ಆಂತರಿಕ ಭದ್ರತಾ ಪಡೆಯ ಎಸ್‍ಪಿಯಾಗಿದ್ದ ಪ್ರದೀಪ್ ಗುಂಟಿ ಅವರನ್ನು ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ, ಮೈಸೂರು ಎಸ್ ಪಿಯಾಗಿದ್ದ ಸಿ.ಬಿ.ರಿಷ್ಯಂತ್ ಅವರನ್ನು ದಾವಣಗೆರೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd