Transgender salon : ಮುಂಬೈನಲ್ಲಿ ಮಂಗಳಮುಖಿಯರ ಮೊದಲ ಸಲೂನ್ ಪ್ರಾರಂಭ…
ಮಂಗಳಮುಖಿಯರು ಅಥವಾ ತೃತಿಯಲಿಂಗಿ ಸಮುದಾಯದ ಜನರು ಇಂದಿಗೂ ಸಾಕಷ್ಟು ತಾರತಮ್ಯವನ್ನ ಸಮಾಜದಲ್ಲಿ ಎದುರಿಸುತ್ತಿದ್ದಾರೆ.ತಮ್ಮ ಅಸ್ತಿತ್ವ ಮತ್ತು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ನಂತರವೂ ಅವರು ತಮ್ಮ ಗುರಿಯನ್ನು ಸಂಪೂರ್ಣವಾಗಿ ತಲುಪಲಾಗಿಲ್ಲ. ಅದರಲ್ಲಿ ಕೆಲವರು ಶಕ್ತಿ ಮೀರಿ ಪ್ರಯತ್ನಿಸಿ ಸ್ವಾವಲಂಬಿ ಬದುಕನ್ನ ಕಟ್ಟಿಕೊಂಡು ತಮ್ಮ ಯೋಗ್ಯತೆಯನ್ನ ಸಾಭಿತುಪಡಿಸಿದ್ದಾರೆ.
ತೃತೀಯಲಿಂಗಿ ಸಮುದಾಯದ ಜನರನ್ನ ಸಬಲರನ್ನಾಗಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂಬೈನಲ್ಲಿ ಟ್ರಾನ್ಸ್‌ಜೆಂಡರ್ ಸಲೂನ್ ಅನ್ನ ಪ್ರಾರಂಭಿಸಲಾಗಿದೆ. ಈ ಸಲೂನ್ ಅನ್ನು 7 ಜನ ತೃತೀಯಲಿಂಗಿಗಳು ನಡೆಸಲಿದ್ದಾರೆ. ಈ ಸಲೂನ್‌ನ ಮಾಲೀಕರಾದ ಜೈನಾಬ್ ಸ್ವತಃ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರಾಗಿದ್ದಾರೆ.
ತೃತೀಯಲಿಂಗಿಗಳಿಗೆ ತರಬೇತಿ ಹಾಗೂ ಉದ್ಯೋಗ ನೀಡಲು ಸಲೂನ್ ಮೀಸಲಿಡಲಾಗಿದೆ ಎಂದು ಜೈನಾಬ್ ತಿಳಿಸಿದ್ದಾರೆ. ಡಾಯ್ಚ ಬ್ಯಾಂಕ್ ಮತ್ತು ರೋಟರಿ ಕ್ಲಬ್ ಆಫ್ ಬಾಂಬೆಯ ಸಹಕಾರದೊಂದಿಗೆ ಸಲೂನ್ ತೆರೆಯಲಾಗಿದೆ.
Mumbai gets its first salon owned and operated by Transgender people